Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:8 - ಕನ್ನಡ ಸತ್ಯವೇದವು J.V. (BSI)

8 ಅವನು ಯಥಾರ್ಥಚಿತ್ತನೆಂದು ಕಂಡು ಅವನಿಗೆ - ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಯೆಬೂಸಿಯರು, ಗಿರ್ಗಾಷಿಯರು ಇವರ ದೇಶವನ್ನು ನಿನ್ನ ಸಂತಾನದವರಿಗೆ ಕೊಡುತ್ತೇನೆಂದು ವಾಗ್ದಾನಮಾಡಿ ಅದನ್ನು ನೆರವೇರಿಸಿದ್ದೀ; ನೀನು ಧರ್ಮಸ್ವರೂಪನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನು ಯಥಾರ್ಥಚಿತ್ತನೆಂದು ಕಂಡು ಅವನಿಗೆ, ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಯೆಬೂಸಿಯರು, ಗಿರ್ಗಾಷಿಯರು ಇವರ ದೇಶವನ್ನು ನಿನ್ನ ಸಂತಾನದವರಿಗೆ ಕೊಡುತ್ತೇನೆಂದು ವಾಗ್ದಾನಮಾಡಿ ಅದನ್ನು ನೆರವೇರಿಸಿದ್ದರಿಂದ ನೀನು ನೀತಿಸ್ವರೂಪನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆತ ಪ್ರಾಮಾಣಿಕ ವ್ಯಕ್ತಿಯೆಂದು ಗುರುತಿಸಿದಿರಿ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ, ಗಿರ್ಗಾಷಿಯರ ನಾಡನು ಆತನ ಸಂತಾನದವರಿಗೆ ವಾಗ್ದಾನ ಮಾಡಿದಿರಿ. ಅಂತೆಯೇ ಸತ್ವ ಸ್ವರೂಪರಾದ ನೀವು ಅದನು ಈಡೇರಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅವನು ನ್ಯಾಯವಂತನೂ ಪ್ರಾಮಾಣಿಕನೂ ಆಗಿದ್ದಾನೆಂದು ತಿಳಿದು ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡೆ. ಹಿತ್ತಿಯರ, ಕಾನಾನ್ಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ ಮತ್ತು ಗಿರ್ಗಾಷಿಯರ ನಾಡನ್ನು ಅವನಿಗೂ ಅವನ ಸಂತತಿಯವರಿಗೂ ಕೊಡುವುದಾಗಿ ವಾಗ್ದಾನ ಮಾಡಿದೆ. ನೀನು ನಿನ್ನ ವಾಗ್ದಾನವನ್ನು ನೆರವೇರಿಸಿದೆ. ಯಾಕೆಂದರೆ ನೀನು ಒಳ್ಳೆಯವನಾಗಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವನ ಹೃದಯವು ನಿಮ್ಮ ಮುಂದೆ ಪ್ರಾಮಾಣಿಕವಾದದ್ದೆಂದೂ ಗುರುತಿಸಿದಿರಿ. ಕಾನಾನ್ಯರೂ, ಹಿತ್ತಿಯರೂ, ಅಮೋರಿಯರೂ, ಪೆರಿಜೀಯರೂ, ಯೆಬೂಸಿಯರೂ, ಗಿರ್ಗಾಷಿಯರೂ ಇವರ ದೇಶವನ್ನು, ಅಬ್ರಾಮನ ಸಂತಾನಕ್ಕೆ ಕೊಡುವಂತೆ ಅವನ ಸಂಗಡ ಒಡಂಬಡಿಕೆಯನ್ನು ಮಾಡಿದಿರಿ. ನೀತಿವಂತರಾದ ನೀವು ನಿಮ್ಮ ವಾಗ್ದಾನವನ್ನು ಈಡೇರಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:8
39 ತಿಳಿವುಗಳ ಹೋಲಿಕೆ  

ಆಶ್ರಯವನ್ನು ಹೊಂದಬೇಕೆಂದು ಓಡಿಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಎರಡು ನಿಶ್ಚಲವಾದ ಆಧಾರಗಳು ಇರುವ ಕಾರಣ ಬಲವಾದ ಧೈರ್ಯವುಂಟಾಯಿತು.


ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು.


ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು ನಾನೂ ಈಗ ಅನುಸರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.


ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನಕೊಟ್ಟು - ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.


ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.


ಅಬ್ರಹಾಮನು ಪರಿಶೋಧಿತನಾಗಿ ನಂಬಿಕೆಯಿಂದಲೇ ಇಸಾಕನನ್ನು ಸಮರ್ಪಿಸಿದನು. ಇಸಾಕನು ಅವನ ಏಕಪುತ್ರನಾಗಿದ್ದರೂ ಮತ್ತು ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರೆಂದು ದೇವರು ಅವನಿಗೆ ಹೇಳಿದ್ದರೂ ಆ ವಾಗ್ದಾನಗಳನ್ನು ಹೊಂದಿದ ಅವನು ಆ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕಿದ್ದನು.


ಆಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ಮಾಡಿ - ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು ಎಂಬದಾಗಿ ಅವನ ವಿಷಯದಲ್ಲಿ ಸಾಕ್ಷಿಹೇಳಿದನು.


ಯೆಹೋವನು ಮೋಶೆಯ ಮೂಲಕ ವಾಗ್ದಾನ ಮಾಡಿದ್ದ ಪ್ರದೇಶವನ್ನೆಲ್ಲಾ ಯೆಹೋಶುವನು ಹಿಡಿದುಕೊಂಡು ಇಸ್ರಾಯೇಲ್ ಕುಲಭಾಗಗಳಿಗನುಸಾರವಾಗಿ ಹಂಚಿಕೊಟ್ಟನು. ಯುದ್ಧವು ನಿಂತು ದೇಶದಲ್ಲೆಲ್ಲಾ ಸಮಾಧಾನವುಂಟಾಯಿತು.


ಪೂರ್ವಪಶ್ಚಿಮಗಳಲ್ಲಿರುವ ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಬೆಟ್ಟದ ಮೇಲಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ಮೋನಿನ ಬುಡದಲ್ಲಿ ವಿುಚ್ಪಾ ದೇಶದಲ್ಲಿದ್ದ ಹಿವ್ವಿಯರು ಇವರನ್ನೂ ಕರೇಕಳುಹಿಸಿದನು.


ಯೊರ್ದನ್ ಹೊಳೆಯ ಆಚೆ ಬೆಟ್ಟದ ಮೇಲಿನ ಪ್ರದೇಶ, ಇಳಕಲಿನ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ ಹಿತ್ತಿಯ ಕಾನಾನ್ ಪೆರಿಜ್ಜೀಯ ಹಿವ್ವಿಯ ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿ


ಆ ಕಾಲದಲ್ಲಿ ಇರುವ ಮಹಾಯಾಜಕನಿಗೆ - ಯೆಹೋವನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಾವು ಸೇರಿದ್ದಾಯಿತೆಂದು ನೀನು ಸೇವಿಸುವ ದೇವರಾದ ಯೆಹೋವನ ಸನ್ನಿಧಿಯಲ್ಲಿ ಈಗ ಒಪ್ಪಿಕೊಂಡಿದ್ದೇವೆ ಎಂದು ಹೇಳಬೇಕು.


ನೀವು ಅವರ ದೇಶಕ್ಕೆ ಬಂದು ಅದನ್ನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿಮ್ಮ ಪುಣ್ಯವೇ ಆಗಲಿ ನಿಮ್ಮ ಸುಸ್ವಭಾವವೇ ಆಗಲಿ ಕಾರಣವಲ್ಲ. ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೂ ನಿಮ್ಮ ದೇವರಾದ ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದದರಿಂದಲೂ ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿಬಿಡುತ್ತಾನೆ.


ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಸಂಖ್ಯೆಯಲ್ಲಿಯೂ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಎಂಬ ಏಳು ಜನಾಂಗಗಳನ್ನು


ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ.


ಐಗುಪ್ತದೇಶದಲ್ಲಿ ನಿಮಗುಂಟಾಗಿರುವ ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ವಾಸವಾಗಿರುವ ದೇಶಕ್ಕೆ ಬರಮಾಡುವೆನೆಂದು ನಿರ್ಣಯಿಸಿದ್ದೇನೆ ಎಂಬದಾಗಿ ನನಗೆ ಹೇಳಿದನೆಂದು ತಿಳಿಸು.


ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ವಾಸವಾಗಿರುವ ದೇಶಕ್ಕೆ ನಡಿಸಿಕೊಂಡು ಹೋಗುವದಕ್ಕೂ ಇಳಿದುಬಂದಿದ್ದೇನೆ.


ಆ ದೂತನು ಅವನಿಗೆ - ನಿನ್ನ ಹುಡುಗನ ಮೇಲೆ ಕೈಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು ಎಂದು ಹೇಳಿದನು.


ಯೆಹೋವನು ಕೃಪಾಳುವೂ ನೀತಿವಂತನೂ ಆಗಿದ್ದಾನೆ; ನಮ್ಮ ದೇವರು ಕನಿಕರವುಳ್ಳವನು.


ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರೂ ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಇವರೂ ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ ಎಂದು ತಿಳಿಸಿದರು.


ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.


ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.


ಇದಲ್ಲದೆ ಯೆಬೂಸಿಯರೂ ಅಮೋರಿಯರೂ ಗಿರ್ಗಾಷಿಯರೂ


ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು; ಇಸಾಕನಿಗೆ ಆಣೆಯಿಟ್ಟನು.


ಯೆಹೋವನೇ, ಇಸ್ರಾಯೇಲ್‍ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿವಿುತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು ಎಂಬದೇ.


ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ಧರ್ಮಸ್ವರೂಪನೇ; ನೀನು ಸತ್ಯವನ್ನೇ ನಡಿಸಿದಿ, ನಾವಾದರೋ ದುಷ್ಟರು.


ನರಪುತ್ರನೇ, ಇಸ್ರಾಯೇಲ್ ಸೀಮೆಯ ಹಾಳು ಪ್ರದೇಶಗಳಲ್ಲಿ ವಾಸಿಸುವವರು - ಅಬ್ರಹಾಮನು ಒಂಟಿಗನಾಗಿದ್ದರೂ ಈ ದೇಶವು ಅವನಿಗೆ ಸ್ವಾಸ್ತ್ಯವಾಗಿ ಸಿಕ್ಕಿತಲ್ಲಾ; ಅದು ಬಹುಜನರಾದ ನಮಗೆ ಸ್ವಾಸ್ತ್ಯವಾಗಿ ಸಿಕ್ಕಿದ್ದು ಏನು ದೊಡ್ಡದು ಅಂದುಕೊಳ್ಳುತ್ತಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು