Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 8:14 - ಕನ್ನಡ ಸತ್ಯವೇದವು J.V. (BSI)

14 ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಾಯೇಲ್ಯರು ಪರ್ಣಶಾಲೆಗಳಲ್ಲಿ ವಾಸಿಸಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಮೋಶೆಗೆ ಯೆಹೋವನಿಂದ ದೊರಕಿದ ಧರ್ಮಶಾಸ್ತ್ರದ ಪ್ರಕಾರ ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಾಯೇಲರು ಬಿಡಾರಗಳಲ್ಲಿ ವಾಸಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಏಳನೆಯ ತಿಂಗಳಿನ ಜಾತ್ರೆಯಲ್ಲಿ ಇಸ್ರಯೇಲರು ಪರ್ಣಕುಟೀರಗಳಲ್ಲಿ ವಾಸಿಸಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14-15 ಅವರು ಅಭ್ಯಾಸಿಸಿದಾಗ ಧರ್ಮಶಾಸ್ತ್ರದಲ್ಲಿ ಈ ಆಜ್ಞೆಗಳನ್ನು ಕಂಡುಕೊಂಡರು: ಏಳನೆಯ ತಿಂಗಳಲ್ಲಿ ಯೆಹೋವನ ಆಜ್ಞೆಗನುಸಾರವಾಗಿ ವಿಶೇಷ ಹಬ್ಬವನ್ನು ಆಚರಿಸಲು ಜೆರುಸಲೇಮಿನಲ್ಲಿ ಸೇರಿಬಂದು ತಾತ್ಕಾಲಿಕವಾದ ಬಿಡಾರಗಳಲ್ಲಿ ವಾಸಿಸಬೇಕು. ಅವರು ತಮ್ಮ ಊರುಗಳ ಮತ್ತು ಜೆರುಸಲೇಮಿನ, “ಬೆಟ್ಟಪ್ರದೇಶಗಳಿಗೆ ಹೋಗಿ ಆಲೀವ್, ಖರ್ಜೂರ, ಕಾಡು ಆಲೀವ್, ಸುಗಂಧ ಮುಂತಾದ ಮರಗಳ ರೆಂಬೆಗಳನ್ನು ತೆಗೆದುಕೊಂಡು ಬಂದು ಅವುಗಳಿಂದ ಆ ಬಿಡಾರಗಳನ್ನು ಮಾಡಬೇಕು” ಎಂಬುದಾಗಿ ಯೆಹೋವನು ಮೋಶೆಗೆ ಕೊಟ್ಟಿದ್ದ ಆಜ್ಞೆಗಳೇ ಅವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಗ ಅವರು ಏಳನೆಯ ತಿಂಗಳ ಹಬ್ಬದಲ್ಲಿ, ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ವಿಷಯ ನಿಯಮದಲ್ಲಿ ಬರೆದದ್ದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 8:14
8 ತಿಳಿವುಗಳ ಹೋಲಿಕೆ  

ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು.


ಪರ್ಣಶಾಲೆಗಳ ಹಬ್ಬವೆಂಬ ಯೆಹೂದ್ಯರದೊಂದು ಜಾತ್ರೆಯು ಸಮೀಪವಾದಾಗ


ಯಾಕೋಬನು ಪ್ರಯಾಣ ಮಾಡಿ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ದನಗಳಿಗೆ ಚಪ್ಪರಗಳನ್ನೂ ಮಾಡಿಸಿದನು; ಆದದರಿಂದ ಆ ಸ್ಥಳಕ್ಕೆ ಸುಕ್ಕೋತ್ ಎಂದು ಹೆಸರಾಯಿತು.


ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಿ ದಿನಕ್ಕೆ ಇಷ್ಟಿಷ್ಟೆಂಬ ವಿಧಿಗನುಸಾರವಾಗಿ ಪ್ರತಿದಿನವೂ ಸರ್ವಾಂಗಹೋಮಗಳನ್ನರ್ಪಿಸಿದರು.


ಮರುದಿನ ಎಲ್ಲಾ ಇಸ್ರಾಯೇಲ್ ಗೋತ್ರಪ್ರಧಾನರೂ ಯಾಜಕರೂ ಲೇವಿಯರೂ ಧರ್ಮಶಾಸ್ತ್ರದ ಅಧ್ಯಯನಕ್ಕಾಗಿ ಧರ್ಮೋಪದೇಶಕನಾದ ಎಜ್ರನ ಬಳಿಗೆ ಕೂಡಿಬಂದಾಗ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು