Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 7:73 - ಕನ್ನಡ ಸತ್ಯವೇದವು J.V. (BSI)

73 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣಜನರಿಗೆ ಸೇರಿದವರು, ದೇವಸ್ಥಾನದಾಸರು ಅಂತೂ ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

73 ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

73 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಜನಸಾಮಾನ್ಯರು, ದೇವಸ್ಥಾನದ ಪರಿಚಾರಕರು ಅಂತೂ ಇಸ್ರಯೇಲರೆಲ್ಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

73 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು ಮತ್ತು ದೇವಾಲಯದ ಸೇವಕರು ತಮ್ಮ ತಮ್ಮ ಊರುಗಳಿಗೆ ಹೋಗಿ ನೆಲೆಸಿದರು. ಇತರ ಎಲ್ಲಾ ಇಸ್ರೇಲರು ತಮ್ಮ ಪಟ್ಟಣಗಳಲ್ಲಿ ನೆಲೆಸಿದರು. ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ತಮ್ಮತಮ್ಮ ಪಟ್ಟಣಗಳಲ್ಲಿ ನೆಲೆಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

73 ಹೀಗೆಯೇ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ಸಾಮಾನ್ಯ ಜನರೂ, ದೇವಾಲಯದ ಸೇವಕರೂ, ಸಮಸ್ತ ಇಸ್ರಾಯೇಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಏಳನೆಯ ತಿಂಗಳು ಬಂದಾಗ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 7:73
7 ತಿಳಿವುಗಳ ಹೋಲಿಕೆ  

ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ದೇವಸ್ಥಾನದಾಸ ಇವರೂ ಸಾಧಾರಣ ಜನರಲ್ಲಿ ಕೆಲವರೂ ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.


ಅಲ್ಲಿಂದ ಹೊರಟು ಊರುಬಾಗಲಿಗೆ ಬಂದು ಕಾಯುವವರಿಗೆ - ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯ ಶಬ್ದವೇ ಕೇಳಿಸಲಿಲ್ಲ. ಕತ್ತೆಕುದುರೆಗಳು ಅಲ್ಲಲ್ಲಿ ಕಟ್ಟಲ್ಪಟ್ಟಿರುತ್ತವೆ, ಡೇರೆಗಳು ಇದ್ದ ಹಾಗೆಯೇ ಇರುತ್ತವೆ ಎಂದು ಕೂಗಿ ತಿಳಿಸಿದರು.


ಆಗ ಅವರ ಪಟ್ಟಣಗಳನ್ನೂ ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು, ಲೇವಿಯರು, ದೇವಸ್ಥಾನದಾಸರು ಇವರೇ.


ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲ್ಯರು ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇವಿುಗೆ ಕೂಡಿಬಂದರು.


ಉಳಿದ ಜನರು ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ಪವನುಗಳು, ಒಂದು ಲಕ್ಷ ತೊಲೆ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳು.


ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದ [ಯೆಹೂದ] ಸಂಸ್ಥಾನಪ್ರಧಾನರ ಪಟ್ಟಿ. (ಸಾಧಾರಣ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ದೇವಸ್ಥಾನದಾಸರೂ ಸೊಲೊಮೋನನ ದಾಸರ ವಂಶದವರೂ ತಮ್ಮ ತಮ್ಮ ಸ್ವಾಸ್ತ್ಯಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು