ನೆಹೆಮೀಯ 5:12 - ಕನ್ನಡ ಸತ್ಯವೇದವು J.V. (BSI)12 ಅವರು - ಹಿಂದಕ್ಕೆ ಕೊಡುತ್ತೇವೆ; ಅವರಿಂದ ಏನೂ ಕೇಳುವದಿಲ್ಲ. ನೀನು ಹೇಳಿದಂತೆಯೇ ಮಾಡುತ್ತೇವೆ ಎಂದು ಉತ್ತರಕೊಟ್ಟರು. ಆಗ ನಾನು ಯಾಜಕರನ್ನು ಕರಿಸಿ ಈ ಮಾತಿನಂತೆ ನಡೆಯುವದಾಗಿ ಅವರಿಂದ ಪ್ರಮಾಣ ಮಾಡಿಸಿದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಅದಕ್ಕೆ ಅವರು, “ನಾವು ಅವರಿಂದ ತೆಗೆದುಕೊಂಡದ್ದನ್ನು ಹಿಂದಕ್ಕೆ ಕೊಡುತ್ತೇವೆ, ಅವರಿಂದ ಏನೂ ಕೇಳುವುದಿಲ್ಲ, ನೀನು ಹೇಳಿದಂತೆಯೇ ಮಾಡುತ್ತೇವೆ” ಎಂದು ಉತ್ತರಕೊಟ್ಟರು. ಆಗ ನಾನು ಯಾಜಕರನ್ನು ಕರೆಸಿ ಈ ಮಾತಿನಂತೆ ನಡೆಯುವುದಾಗಿ ಅವರಿಂದ ಪ್ರಮಾಣ ಮಾಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಅವರು, “ಹಿಂದಕ್ಕೆ ಕೊಡುತ್ತೇವೆ; ಅವರಿಂದ ಏನೂ ಕೇಳುವುದಿಲ್ಲ. ನೀವು ಹೇಳಿದಂತೆಯೇ, ಮಾಡುತ್ತೇವೆ,” ಎಂದು ಉತ್ತರಕೊಟ್ಟರು. ಆಗ ನಾನು ಯಾಜಕರನ್ನು ಕರೆಯಿಸಿದೆ; ಯಾಜಕರ ಮುಂದೆ, ತಾವು ಕೊಟ್ಟ ಮಾತಿನಂತೆ ನಡೆಯುವುದಾಗಿ ಪ್ರಮಾಣ ಮಾಡಿಸಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಆಗ ಶ್ರೀಮಂತರೂ ಅಧಿಕಾರಿಗಳೂ, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ನಾವು ಹೆಚ್ಚೇನೂ ಕೇಳುವುದಿಲ್ಲ. ನೆಹೆಮೀಯನೇ, ನೀನು ಹೇಳಿದಂತೆಯೇ ನಾವು ಮಾಡುತ್ತೇವೆ” ಎಂದರು. ಆಗ ನಾನು ದೇವರ ಮುಂದೆ ಅವರಿಂದ ಪ್ರತಿಜ್ಞೆ ಮಾಡಿಸಲು ಯಾಜಕರನ್ನು ಕರೆದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅದಕ್ಕವರು, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ಏನೂ ಕೇಳುವುದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ,” ಎಂದರು. ಆಗ ನಾನು ಯಾಜಕರನ್ನು ಕರೆದು, ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತೆಗೆದುಕೊಂಡೆನು. ಅಧ್ಯಾಯವನ್ನು ನೋಡಿ |