Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 4:8 - ಕನ್ನಡ ಸತ್ಯವೇದವು J.V. (BSI)

8 ನಾವು ಒಟ್ಟಾಗಿ ಯೆರೂಸಲೇವಿುನವರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗಿ ಅವರನ್ನು ತಳಮಳಗೊಳಿಸೋಣ ಎಂದು ಒಳಸಂಚು ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಾವು ಒಟ್ಟಾಗಿ ಯೆರೂಸಲೇಮಿನವರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗಿ ಅವರನ್ನು ಗಲಿಬಿಲಿಗೊಳಿಸೋಣ ಎಂದು ಒಳಸಂಚು ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವರಿಗೆ ಬಹುಕೋಪ ಬಂದಿತು. “ನಾವು ಒಟ್ಟಾಗಿ ಜೆರುಸಲೇಮಿನವರ ವಿರುದ್ಧ ಯುದ್ಧಕ್ಕೆ ಹೋಗಿ ಅವರನ್ನು ತಳಮಳಗೊಳಿಸೋಣ,” ಎಂದು ಒಳಸಂಚು ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅವರೆಲ್ಲಾ ಸೇರಿ ಜೆರುಸಲೇಮಿಗೆ ವಿರುದ್ಧವಾಗಿ ಗಲಭೆ ಎಬ್ಬಿಸುವ ಹಂಚಿಕೆಯನ್ನು ಹೂಡಿದರು; ಯುದ್ಧ ಮಾಡುವ ಯೋಚನೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವರು ಯೆರೂಸಲೇಮಿಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೂ, ಅಭ್ಯಂತರಿಸುವುದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 4:8
11 ತಿಳಿವುಗಳ ಹೋಲಿಕೆ  

ಇವನ ಮೇಲೆ ದೂರು ಹೇಳಿರಿ, ನಾವೂ ಹೇಳುವೆವು ಎಂದು ಬಹುಜನರು ಗುಸುಗುಟ್ಟುವದನ್ನು ಕೇಳಿದ್ದೇನೆ, ಸುತ್ತುಮುತ್ತಲೂ ದಿಗಿಲು; ನನ್ನ ಆಪ್ತಸ್ನೇಹಿತರೆಲ್ಲರೂ ಇವನು ಎಡವಿಬೀಳಲಿ ಎಂದು ನನ್ನನ್ನು ಹೊಂಚಿನೋಡುತ್ತಾ - ಒಂದು ವೇಳೆ ಸಿಕ್ಕಿಬಿದ್ದಾನು, ಇವನನ್ನು ಗೆದ್ದು ಮುಯ್ಯಿತೀರಿಸಿಕೊಳ್ಳುವೆವು ಎಂದು ತಮ್ಮತಮ್ಮೊಳಗೆ ಅಂದುಕೊಳ್ಳುತ್ತಿದ್ದಾರೆ.


ಸನ್ಬಲ್ಲಟನೂ ಟೋಬೀಯನೂ ಅರಬಿಯರೂ ಅಮ್ಮೋನಿಯರೂ ಅಷ್ಡೋದಿನವರೂ ಯೆರೂಸಲೇವಿುನ ಗೋಡೆಯ ಜೀರ್ಣೋದ್ಧಾರಕಾರ್ಯವು ಮುಂದರಿದು ಅದರ ಸಂದುಗಳು ತಿರಿಗಿ ಕೂಡುತ್ತಾ ಬರುವದನ್ನು ಕೇಳಿ ಬಹುಕೋಪವುಳ್ಳವರಾಗಿ -


ಅದಕ್ಕೆ ನಾನು - ಕಳವಳಪಡಬೇಡಿರಿ, ಅವರಿಗೆ ಭಯಪಡಬೇಡಿರಿ.


ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ನಮ್ಮ ಪೌರುಷವನ್ನು ತೋರಿಸೋಣ; ಯೆಹೋವನು ತನಗೆ ಸರಿಕಾಣುವಂಥದನ್ನು ಮಾಡಲಿ ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.


ಶೂರರಾಗಿರಿ, ಧೈರ್ಯದಿಂದಿರಿ; ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದು.


ಆ ವಿಜ್ಞಾಪನೆಗಳಲ್ಲಿ ನಾನು - ಯೆಹೋವನೇ, ಮಹೋನ್ನತನೂ ಭಯಂಕರನೂ ಆಗಿರುವ ಪರಲೋಕದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವನೇ,


ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರುವತ್ತೆರಡು ವಾರ ಇರುವದು; ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು