Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 3:25 - ಕನ್ನಡ ಸತ್ಯವೇದವು J.V. (BSI)

25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿಬರುವ ಮೂಲೆಬುರುಜಿನ ಎದುರಿನ ಭಾಗವನ್ನು ಊಜೈಯ ಮಗನಾದ ಪಾಲಾಲನೂ ಇವನ ಆಚೆಯಲ್ಲಿ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಸೆರೆಮನೆಯ ಅಂಗಳದ ಹತ್ತಿರವಿದ್ದ ಅರಸನ ಅರಮನೆಯ ಮೇಲಿನ ಗೋಡೆಯನ್ನು ಮೀರಿನಿಂತಿರುವ ಮೂಲೆ ಗೋಪುರದ ಎದುರಿನ ಭಾಗವನ್ನು ಊಜೈಯನ ಮಗನಾದ ಪಾಲಾಲನೂ. ಇವನ ನಂತರ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆಬುರುಜಿನ ಎದುರಿನ ಭಾಗವನ್ನು ಊಜೈಯ ಮಗ ಪಾಲಾಲನೂ ಇವನ ಆಚೆಯಲ್ಲಿ ಪರೋಷನ ಮಗ ಪೆದಾಯನೂ ಸರಿಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆ ಬುರುಜಿನ ಎದುರಿನ ಭಾಗವನ್ನು ಊಜೈಯ ಮಗನಾದ ಪಾಲಾಲನೂ, ಇವನ ಆಚೆಯಲ್ಲಿ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 3:25
12 ತಿಳಿವುಗಳ ಹೋಲಿಕೆ  

ಆ ಕಾಲದಲ್ಲಿ ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮನ್ನು ಮುತ್ತಿತ್ತು, ಮತ್ತು ಪ್ರವಾದಿಯಾದ ಯೆರೆಮೀಯನು ಯೆಹೂದದ ರಾಜನ ಮನೆಗೆ ಸೇರಿದ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು.


ಅರಸನಾದ ಚಿದ್ಕೀಯನು ಇದನ್ನು ಕೇಳಿ ಅಪ್ಪಣೆಕೊಡಲು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಟ್ಟು ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ದಿನವಹಿ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡುತ್ತಿದ್ದರು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.


ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಅವನಿಗೆ ಯೆಹೋವನು ಈ ಎರಡನೆಯ ವಾಕ್ಯವನ್ನು ಅನುಗ್ರಹಿಸಿದನು -


ಅಲ್ಲಿಂದ ಎಫ್ರಾಯೀಮ್ ಬಾಗಲು, ಯೆಷಾನಾ ಬಾಗಲು, ಮೀನು ಬಾಗಲು, ಹನನೇಲ್ ಬುರುಜು, ಹಮ್ಮೇಯಾ ಬುರುಜು ಇವುಗಳ ಮಾರ್ಗವಾಗಿ ಕುರಿಬಾಗಲಿನವರೆಗೂ ಹೋಗಿ ಸೆರೆಮನೆಯ ಬಾಗಲಿನ ಬಳಿಯಲ್ಲಿ ನಿಂತೆವು.


ಮತ್ತು ಕಸ್ದೀಯರು ಅರಮನೆಯನ್ನೂ ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಯೆರೂಸಲೇವಿುನ ಸುತ್ತಣ ಗೋಡೆಗಳನ್ನು ಕೆಡವಿದರು.


ಆಹಾ, ನಾನು ವಿಸ್ತಾರವಾದ ಅರಮನೆಯನ್ನೂ ವಿಶಾಲವಾದ ಮಹಡಿಗಳನ್ನೂ ಕಟ್ಟಿಸಿಕೊಳ್ಳುವೆನು ಎಂದು ಹೇಳಿ ಅಗಲಗಲವಾದ ಕಿಟಕಿಗಳನ್ನಿಡಿಸಿ [ಒಳಗೆ ಗೋಡೆಗೆಲ್ಲಾ] ದೇವದಾರಿನ ಹಲಿಗೆಗಳನ್ನು ಹೊದಿಸಿ ಕಿರಿಮಂಜಿಯ ಬಣ್ಣವನ್ನು ಬಳಿಸಿಕೊಳ್ಳುವವನ ಪಾಡನ್ನು ಏನು ಹೇಳಲಿ!


ಧರ್ಮೋಪದೇಶಕನಾದ ಎಜ್ರನು ಪಾರಾಯಣಕ್ಕಾಗಿ ಮಾಡಲ್ಪಟ್ಟ ಮರದ ಪೀಠದ ಮೇಲೆ ನಿಂತನು. ಅವನ ಬಲಗಡೆಯಲ್ಲಿ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ ಎಂಬವರೂ ಎಡಗಡೆಯಲ್ಲಿ ಪೆದಾಯ, ಮೀಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ಎಂಬವರೂ ನಿಂತರು.


ಈ ಪ್ರಕಾರ ಅವರು ಯೆರೆಮೀಯನನ್ನು ಹಗ್ಗಗಳ ಮೂಲಕ ಸೇದಿಕೊಂಡು ಬಾವಿಯಿಂದ ಮೇಲಕ್ಕೆ ಎತ್ತಿದರು; ಆಮೇಲೆ ಯೆರೆಮೀಯನು [ಹಿಂದಿನಂತೆ] ಕಾರಾಗೃಹದ ಅಂಗಳದಲ್ಲಿ ವಾಸಿಸುತ್ತಿದ್ದನು.


ಹಿಂಡಿಗೆ ರಕ್ಷಕವಾದ ಹೂಡೆಯೇ, ಚೀಯೋನ್ ಯುವತಿಯ ಗುಡ್ಡವೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವದು, ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು