ನೆಹೆಮೀಯ 2:2 - ಕನ್ನಡ ಸತ್ಯವೇದವು J.V. (BSI)2 ಅರಸನು ನನಗೆ - ನೀನು ಕಳೆಗುಂದಿದವನಾಗಿ ಕಾಣುವದೇಕೆ? ನಿನಗೆ ದೇಹಾಲಸ್ಯವಿಲ್ಲವಲ್ಲಾ; ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣವಲ್ಲ ಎಂದು ಹೇಳಲು ನನಗೆ ಮಹಾಭೀತಿಯುಂಟಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅರಸನು ನನಗೆ, “ನಿನ್ನ ಮುಖ ಕಳೆಗುಂದಿರುವುದೇಕೆ? ನೀನು ಅಸ್ವಸ್ಥನಂತೆ ಕಾಣುವುದಿಲ್ಲ; ಇದು ಮನೋವೇದನೆಯಿಂದಾಗಿದೆಯೇ ಹೊರತು ಬೇರೇನೂ ಕಾರಣ ಇರಲಾರದು” ಎಂದು ಹೇಳಲು ನನಗೆ ಮಹಾ ಭೀತಿಯುಂಟಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ರಾಜ ನನಗೆ, “ನೀನು ಕಳೆಗುಂದಿದವನಾಗಿರುವೆ, ಏಕೆ? ನಿನ್ನ ದೇಹಾರೋಗ್ಯ ಚೆನ್ನಾಗಿದೆಯಲ್ಲವೆ? ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣ ಇರಲಾರದು,” ಎಂದು ಹೇಳಿದ. ನನಗೆ ಮಹಾಭೀತಿಯುಂಟಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 “ನೀನು ಕ್ಷೇಮವೋ?” ಎಂದು ಅರಸನು ವಿಚಾರಿಸಿದನು, “ನೀನು ದುಃಖಿತನಾಗಿರುವುದೇಕೆ? ನಿನ್ನ ಹೃದಯವು ವೇದನೆಯಿಂದ ತುಂಬಿರುವ ಹಾಗಿದೆಯಲ್ಲ?” ಅರಸನ ಈ ಪ್ರಶ್ನೆಗೆ ನಾನು ಭಯಪಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆದಕಾರಣ ಅರಸನು ನನಗೆ, “ನಿನಗೆ ಕಾಯಿಲೆ ಇಲ್ಲದೆ ಇರುವಾಗ, ನಿನ್ನ ಮುಖವು ದುಃಖದಿಂದಿರುವುದೇನು? ನಿನಗೆ ರೋಗ ಏನೂ ಇಲ್ಲವಲ್ಲ? ಇದು ಮನೋವೇದನೆಯೇ ಹೊರತು ಬೇರೇನೂ ಅಲ್ಲ,” ಎಂದನು. ಆಗ ನಾನು ಬಹು ಭಯಪಟ್ಟು ಅರಸನಿಗೆ, ಅಧ್ಯಾಯವನ್ನು ನೋಡಿ |