ನೆಹೆಮೀಯ 2:13 - ಕನ್ನಡ ಸತ್ಯವೇದವು J.V. (BSI)13 ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇವಿುನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಲುಗಳನ್ನೂ ನೋಡುತ್ತಾ ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಲಿಗೆ ಹೋದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಿಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಿಲುಗಳನ್ನೂ ನೋಡುತ್ತಾ, ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ನಾನು ರಾತ್ರಿ ವೇಳೆಯಲ್ಲಿ ಕಣಿವೆಯ ಬಾಗಿಲಿನಿಂದ ಹೊರಟು, ಹಾಳುಬಿದ್ದ ಜೆರುಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲಾಗಿದ್ದ ಅದರ ಬಾಗಿಲುಗಳನ್ನೂ ನೋಡುತ್ತಾ ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಕತ್ತಲೆಯಲ್ಲಿಯೇ ಕಣಿವೆಯ ಬಾಗಿಲಿನ ಮೂಲಕ ಹೊರಟು ಕೆಡವಲ್ಪಟ್ಟಿದ್ದ ಜೆರುಸಲೇಮಿನ ಗೋಡೆಗಳನ್ನು, ಸುಟ್ಟುಹೋಗಿರುವ ಅದರ ಬಾಗಿಲುಗಳನ್ನು ನೋಡುತ್ತಾ ಹೆಬ್ಬಾವು ಬಾವಿಯ ಬಳಿಗೂ ತಿಪ್ಪೆಬಾಗಿಲಿನ ಬಳಿಗೂ ಸವಾರಿಮಾಡಿಕೊಂಡು ಬಂದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ನಾನು ರಾತ್ರಿಯಲ್ಲಿ ಕಣಿವೆಯ ಬಾಗಿಲಿಂದ ಹೊರಟು, ಸರ್ಪದ ಬಾವಿಯನ್ನು ದಾಟಿ, ತಿಪ್ಪೆ ದಿಬ್ಬೆಯ ಬಾಗಿಲಿಗೆ ಬಂದು, ಯೆರೂಸಲೇಮಿನ ಕೆಡವಿ ಹಾಕಲಾದ ಗೋಡೆಗಳನ್ನೂ, ಬೆಂಕಿಯಿಂದ ಸುಡಲಾದ ಅದರ ಬಾಗಿಲುಗಳನ್ನೂ ಚೆನ್ನಾಗಿ ಕಂಡೆನು. ಅಧ್ಯಾಯವನ್ನು ನೋಡಿ |