Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 12:25 - ಕನ್ನಡ ಸತ್ಯವೇದವು J.V. (BSI)

25 ಇವರ ಕಾಲದಲ್ಲಿದ್ದವರು - ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. (ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರತಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ, ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇವರ ಕಾಲದಲ್ಲಿದ್ದವರು - ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು.ದೈವಪುರುಷ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣದ ಕೋಣಿಗಳನ್ನು ಕಾಯುತ್ತಿದ್ದವರು ಯಾರೆಂದರೆ: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್ ಮತ್ತು ಅಕ್ಕೂಬ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಮತ್ತನ್ಯನೂ, ಬಕ್ಬುಕ್ಯನೂ, ಓಬದ್ಯನೂ, ಮೆಷುಲ್ಲಾಮನೂ, ಟಲ್ಮೋನನೂ, ಅಕ್ಕೂಬನೂ ಬೊಕ್ಕಸಗಳ ಬಾಗಿಲುಗಳನ್ನು ಕಾಯುವವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 12:25
10 ತಿಳಿವುಗಳ ಹೋಲಿಕೆ  

ಬಳಿಕ ಅವನು ಸಿಂಹಧ್ವನಿಯಿಂದ - ಕರ್ತನೇ, ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ;


ಓಬೇದೆದೋಮನಿಗೆ ತೆಂಕಣ ಬಾಗಲೂ ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ ಶುಪ್ಪೀಮ್,


ಈ ದ್ವಾರಪಾಲಕವರ್ಗಗಳ ಪ್ರಧಾನ ಪುರುಷರು ತಮ್ಮ ಕುಲಬಂಧುಗಳಂತೆ ಯೆಹೋವನ ಆಲಯದಲ್ಲಿ ಸೇವೆಮಾಡುವವರಾಗಿದ್ದರು.


ಹೀಗೆ ಅವರು ತಮ್ಮ ಸಹೋದರರಾದ ಆರೋನ್ಯರ ಸಹಾಯಕರಾಗಿದ್ದು ದೇವದರ್ಶನದ ಗುಡಾರವನ್ನೂ ಪರಿಶುದ್ಧವಾದ ಎಲ್ಲಾ ಸಾಮಾನುಗಳನ್ನೂ ನೋಡಿಕೊಳ್ಳುವದೇ ಯೆಹೋವನ ಆಲಯದಲ್ಲಿ ಮಾಡತಕ್ಕ ಪರಿಚರ್ಯ.


ಅಲ್ಲಿಂದ ಹೊರಟು ಊರುಬಾಗಲಿಗೆ ಬಂದು ಕಾಯುವವರಿಗೆ - ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯ ಶಬ್ದವೇ ಕೇಳಿಸಲಿಲ್ಲ. ಕತ್ತೆಕುದುರೆಗಳು ಅಲ್ಲಲ್ಲಿ ಕಟ್ಟಲ್ಪಟ್ಟಿರುತ್ತವೆ, ಡೇರೆಗಳು ಇದ್ದ ಹಾಗೆಯೇ ಇರುತ್ತವೆ ಎಂದು ಕೂಗಿ ತಿಳಿಸಿದರು.


ಲೇವಿಯರಲ್ಲಿ ಪ್ರತಿದಿನವೂ ಮೂಡಣ ಬಾಗಲನ್ನು ಆರು ಮಂದಿ, ಪಡುವಣ ಬಾಗಲನ್ನು ನಾಲ್ಕು ಮಂದಿ, ತೆಂಕಣ ಬಾಗಲನ್ನು ನಾಲ್ಕು ಮಂದಿ, ಉಗ್ರಾಣ ಮಂದಿರದ ಎರಡು ಬಾಗಲುಗಳನ್ನು ಇಬ್ಬಿಬ್ಬರು,


ಇದಲ್ಲದೆ ತನ್ನ ತಂದೆಯಾದ ದಾವೀದನ ವಿಧಿಗನುಸಾರವಾಗಿ ಯಾಜಕವರ್ಗಗಳವರನ್ನೂ ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇವಿುಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವಭಜನೆಮಾಡಿ ಯಾಜಕರ ಕೈಕೆಳಗೆ ಸೇವೆಮಾಡುತ್ತಲೂ ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರತಿಯ ಮೇಲೆ ಆಯಾ ಬಾಗಲುಗಳನ್ನು ಕಾಯುತ್ತಲೂ ಇರಬೇಕಾಯಿತು. ಇದೇ ದೇವರ ಮನುಷ್ಯನಾದ ದಾವೀದ ರಾಜನ ಅಪ್ಪಣೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು