ನೆಹೆಮೀಯ 12:1 - ಕನ್ನಡ ಸತ್ಯವೇದವು J.V. (BSI)1 ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೇಷೂವ ಇವರೊಡನೆ [ಯೆಹೂದ ದೇಶಕ್ಕೆ] ಬಂದ ಯಾಜಕರೂ ಲೇವಿಯರೂ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೇಷೂವ ಇವರೊಡನೆ ಯೆಹೂದ ದೇಶಕ್ಕೆ ಬಂದ ಯಾಜಕರು ಮತ್ತು ಲೇವಿಯರು ಯಾರಾರೆಂದರೆ: ಸೆರಾಯ, ಯೆರೆಮೀಯ, ಎಜ್ರ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಶೆಯಲ್ತೀಯೇಲನ ಮಗ ಜೆರುಬ್ಬಾಬೆಲ್ ಹಾಗು ಯೇಷೂವ ಇವರೊಡನೆ ಜುದೇಯ ನಾಡಿಗೆ ಹಿಂದಿರುಗಿ ಬಂದ ಯಾಜಕರು ಮತ್ತು ಲೇವಿಯರ ಪಟ್ಟಿ : ಯಾಜಕರು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಯೆಹೂದ ಪ್ರಾಂತಕ್ಕೆ ಹಿಂತಿರುಗಿದ ಯಾಜಕರ ಮತ್ತು ಲೇವಿಯರ ಪಟ್ಟಿ: ಅವರು ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೇಷೂವನೊಡನೆ ಹಿಂದಿರುಗಿದರು. ಅವರು ಯಾರೆಂದರೆ: ಸೆರಾಯ, ಯೆರೆಮೀಯ, ಎಜ್ರ, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನ ಮತ್ತು ಯೇಷೂವನ ಸಂಗಡ ಹೋದ ಯಾಜಕರೂ ಲೇವಿಯರೂ ಯಾರೆಂದರೆ: ಸೆರಾಯ, ಯೆರೆಮೀಯ, ಎಜ್ರ, ಅಧ್ಯಾಯವನ್ನು ನೋಡಿ |
ಅವರು ಯೆರೂಸಲೇವಿುನ ದೇವಾಲಯಕ್ಕೆ ಮುಟ್ಟಿದ ಎರಡನೆಯ ವರುಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೋಚಾದಾಕನ ಮಗನಾದ ಯೇಷೂವ ಇವರೂ ಇವರ ಸಹೋದರರಾದ ಇತರ ಯಾಜಕರೂ ಲೇವಿಯರೂ ಸೆರೆಯಿಂದ ಯೆರೂಸಲೇವಿುಗೆ ತಿರಿಗಿ ಬಂದ ಬೇರೆ ಎಲ್ಲರೂ ದೇವಾಲಯವನ್ನು ಕಟ್ಟುವದಕ್ಕೆ ಪ್ರಾರಂಭಿಸಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಲೇವಿಯರನ್ನು ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗೆ ನೇವಿುಸಿದರು.