Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 11:3 - ಕನ್ನಡ ಸತ್ಯವೇದವು J.V. (BSI)

3 ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದ [ಯೆಹೂದ] ಸಂಸ್ಥಾನಪ್ರಧಾನರ ಪಟ್ಟಿ. (ಸಾಧಾರಣ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ದೇವಸ್ಥಾನದಾಸರೂ ಸೊಲೊಮೋನನ ದಾಸರ ವಂಶದವರೂ ತಮ್ಮ ತಮ್ಮ ಸ್ವಾಸ್ತ್ಯಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಯೆಹೂದ ಸಂಸ್ಥಾನ ಪ್ರಧಾನರು ಯಾರಾರೆಂದರೆ: ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರು, ಸೊಲೊಮೋನನ ಸೇವಕರ ವಂಶದವರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3-4 ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ; ಇವನು ಪೆರೆಚ್ ಸಂತಾನದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಜೆರುಸಲೇಮಿನಲ್ಲಿ ವಾಸಿಸಿದ ಪ್ರಾಂತ್ಯಾಧಿಕಾರಿಗಳ ಪಟ್ಟಿ, (ಕೆಲವು ಇಸ್ರೇಲ್ ಜನರು, ಯಾಜಕರು, ಲೇವಿಯರು, ಆಲಯದ ಸೇವಕರು ಮತ್ತು ಸೊಲೊಮೋನನ ಸೇವಕರ ಸಂತಾನದವರು ಯೆಹೂದ ಪ್ರಾಂತ್ಯದ ಊರುಗಳಲ್ಲಿ ವಾಸಿಸಿದರು. ಇವರೆಲ್ಲರು ತಮ್ಮ ಊರುಗಳಲ್ಲಿದ್ದ ತಮ್ಮ ಸ್ವಂತ ಸ್ಥಳಗಳಲ್ಲಿ ಜೀವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೆರೂಸಲೇಮಿನಲ್ಲಿ ವಾಸವಾಗಿದ್ದ ಸಂಸ್ಥಾನಪ್ರಧಾನರು ಯಾರೆಂದರೆ: ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರೂ, ಸೊಲೊಮೋನನ ಸೇವಕರ ಮಕ್ಕಳೂ, ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 11:3
14 ತಿಳಿವುಗಳ ಹೋಲಿಕೆ  

ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣಜನರಿಗೆ ಸೇರಿದವರು, ದೇವಸ್ಥಾನದಾಸರು ಅಂತೂ ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ದೇವಸ್ಥಾನದಾಸರಲ್ಲಿ - ಜೀಹ, ಹಸೂಫ,


ಸೆರೆಯಿಂದ ತಿರಿಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬೆಲಿಗೆ ಸೆರೆಯೊಯ್ಯಲ್ಪಟ್ಟವರಲ್ಲಿ


ಉಳಿದ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ತಮ್ಮ ತಮ್ಮ ಸ್ವಾಸ್ತ್ಯಗಳಿರುವ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ಸೆರೆಯಿಂದ ತಿರಿಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇವಿುಗೂ ಯೆಹೂದಪ್ರಾಂತದ ಸ್ವಂತ ಪಟ್ಟಣಗಳಿಗೂ


ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ದೇವಸ್ಥಾನದಾಸ ಇವರೂ ಸಾಧಾರಣ ಜನರಲ್ಲಿ ಕೆಲವರೂ ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.


ಯೆರೂಸಲೇವಿುನಲ್ಲಿ ಯೆಹೂದ ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು.) ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗನು; ಇವನು ಜೆಕರ್ಯನ ಮಗನು; ಇವನು ಅಮರ್ಯನ ಮಗನು; ಇವನು ಶೆಫಟ್ಯನ ಮಗನು; ಇವನು ಮಹಲಲೇಲನ ಮಗನು; ಇವನು ಪೆರೆಚ್ ಸಂತಾನದವನು.


ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ವಿುಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರಿಗಿ ಬಂದವರು ಯಾರಂದರೆ -


ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973


ಲೇವಿಯರಲ್ಲಿ - ಹೋದವ್ಯನವರಾದ ಯೇಷೂವ, ಕದ್ಮೀಯೇಲ್ ಇವರ ಸಂತಾನದವರು 74


ದೇವಸ್ಥಾನದಾಸರಲ್ಲಿ - ಜೀಹ, ಹಸೂಫ ಟಬ್ಬಾವೋತ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು