Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 10:37 - ಕನ್ನಡ ಸತ್ಯವೇದವು J.V. (BSI)

37 ನಾವು ದೇವರಿಗಾಗಿ ಪ್ರತ್ಯೇಕಿಸಿಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕರಿಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವೆವು; ನಮ್ಮ ಭೂವಿುಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಬೇಕು; ಲೇವಿಯರು ತಾವೇ ಬಂದು ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಕೂಡಿಸಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ನಾವು ದೇವರಿಗಾಗಿ ಪ್ರತ್ಯೇಕಿಸಿ ಇಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕ ಸೇವೆಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದು ಇಡುವೆವು. ನಮ್ಮ ಭೂಮಿಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಿರುತ್ತದೆ. ಲೇವಿಯರು ತಾವೇ ಬಂದು, ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಶೇಖರಿಸಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ನಾವು ದೇವರಿಗಾಗಿ ಪ್ರತ್ಯೇಕಿಸಿಡತಕ್ಕ ಪ್ರಥಮ ಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ, ಮೊದಲಾದವುಗಳನ್ನು ಯಾಜಕರಿಗಾಗಿ ನಮ್ಮ ದೇವಾಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ನಮ್ಮ ಭೂಮಿಯ ಆದಾಯದ ದಶಮಾಂಶವು ಲೇವಿಯರದಾಗಬೇಕು; ಲೇವಿಯರು ತಾವೇ ಬಂದು ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಕೂಡಿಸಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 “ಪ್ರಥಮ ಫಲದ ಹಿಟ್ಟನ್ನು, ಪ್ರಥಮ ಫಲದ ಹಣ್ಣುಗಳನ್ನು, ಹೊಸ ದ್ರಾಕ್ಷಾರಸವನ್ನು, ಹೊಸ ಎಣ್ಣೆಯನ್ನು ಯಾಜಕರಿಗೋಸ್ಕರವಾಗಿ ದೇವಾಲಯದ ಉಗ್ರಾಣಗಳಲ್ಲಿ ತಂದಿಡುವೆವು. ನಮ್ಮ ಬೆಳೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ತಂದುಕೊಡುವೆವು. ನಾವು ಕೆಲಸ ಮಾಡುತ್ತಿರುವ ಊರುಗಳಿಂದ ಲೇವಿಯರು ಇವುಗಳನ್ನು ತೆಗೆದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನು ನಮ್ಮ ಕಾಣಿಕೆಗಳನ್ನೂ, ಸಕಲ ಮರಗಳ ಫಲವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ಲೇವಿಯರು ಒಕ್ಕಲುತನವಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವುದಕ್ಕೂ ಪ್ರಮಾಣ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 10:37
23 ತಿಳಿವುಗಳ ಹೋಲಿಕೆ  

ನಿಮ್ಮ ನಿವಾಸಗಳಿಂದ [ತಂದ ಹಿಟ್ಟಿನಲ್ಲಿ] ಆರು ಸೇರು ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬೇಕು.


ಲೇವಿಯರು ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವದಕ್ಕಾಗಿ ಇಸ್ರಾಯೇಲ್ಯರಿಂದ [ಸಕಲಪದಾರ್ಥಗಳ] ಹತ್ತನೆಯ ಪಾಲನ್ನು ಗೊತ್ತುಮಾಡಿಕೊಟ್ಟಿದ್ದೇನೆ.


ಕೊಠಡಿಯನ್ನು ಶುದ್ಧಿಮಾಡುವದಕ್ಕೆ ಅಪ್ಪಣೆಕೊಟ್ಟು ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯ ದ್ರವ್ಯ, ಧೂಪ ಇವುಗಳನ್ನು ತಿರಿಗಿ ಅಲ್ಲಿಡಿಸಿದೆನು.


ಇವನು ಟೋಬೀಯನ ಬೀಗನಾಗಿದ್ದದರಿಂದ ನೈವೇದ್ಯದ್ರವ್ಯ ಧೂಪ ಪಾತ್ರೆ ಇವುಗಳನ್ನೂ ಧಾನ್ಯ ದ್ರಾಕ್ಷಾರಸ ಎಣ್ಣೆ ಇವುಗಳ ದಶಮಾಂಶವನ್ನೂ ಲೇವಿಯ ಗಾಯಕ ದ್ವಾರಪಾಲಕ ಇವರಿಗೆ ಸಲ್ಲತಕ್ಕ ಪದಾರ್ಥಗಳನ್ನೂ ಯಾಜಕರಿಗೋಸ್ಕರ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ ಇಡುವದಕ್ಕಾಗಿ ಉಪಯೋಗವಾಗುತ್ತಿದ್ದ ಕೊಠಡಿಯನ್ನು ಅವನಿಗೋಸ್ಕರ ಸಿದ್ಧಮಾಡಿಸಿ ಕೊಟ್ಟಿದ್ದನು.


ಆತನು ದಯಪಾಲಿಸಿದ ಹೊಲದ ಎಲ್ಲಾ ಬೆಳೆಗಳಲ್ಲಿಯೂ ನೀವು ಕೆಲವು ಪ್ರಥಮಫಲಗಳನ್ನು ಪುಟ್ಟಿಯಲ್ಲಿಟ್ಟು ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಿ


ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳ ಪ್ರಥಮಫಲಗಳನ್ನೂ ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನೂ ಅವರಿಗೆ ಕೊಡಬೇಕು.


ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.


ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. ನಿನ್ನಿಂದ ಏನು ಕದ್ದುಕೊಂಡಿದ್ದೇವೆ ಎಂದು ಕೇಳುತ್ತೀರೋ? ದಶಮಾಂಶ, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ.


ಯೆಹೂದದ ಪಟ್ಟಣಗಳಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ಯರೂ ಯೆಹೂದ್ಯರೂ ಕುರಿದನಗಳಲ್ಲಿ ದಶಮಾಂಶವನ್ನು ಕೊಟ್ಟದ್ದಲ್ಲದೆ ದೇವರಾದ ಯೆಹೋವನಿಗೆ ಸಮರ್ಪಣೆಯಾಗತಕ್ಕ ಪರಿಶುದ್ಧದ್ರವ್ಯಗಳಲ್ಲಿಯೂ ದಶಮಾಂಶವನ್ನು ತಂದು ರಾಶಿಮಾಡಿದರು.


ಕಣಕದಲ್ಲಿ ಮೊದಲನೆಯ ಉರುಳಿ ನೈವೇದ್ಯವಾದ ಮೇಲೆ ಕಣಕವೆಲ್ಲಾ ನೈವೇದ್ಯವಾದ ಹಾಗಾಯಿತು; ಬೇರು ದೇವರದಾಗಿದ್ದ ಮೇಲೆ ಕೊಂಬೆಗಳೂ ದೇವರವು.


ಪ್ರತಿವರುಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮಭಾಗವನ್ನು ಪ್ರತ್ಯೇಕಿಸಬೇಕು.


ಇದಲ್ಲದೆ ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡಿಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಭೂಸ್ವಾಸ್ತ್ಯಗಳಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು.


ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ ದ್ರಾಕ್ಷಾರಸ ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು.


ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮಗರ್ಭವನ್ನೆಲ್ಲಾ ಗಂಡಾದ ಪಕ್ಷಕ್ಕೆ ಯೆಹೋವನ ಭಾಗವೆಂದು ತಿಳಿದುಕೊಂಡು ಆತನಿಗೆ ಸಮರ್ಪಿಸಬೇಕು.


ಮನುಷ್ಯರಲ್ಲಾಗಲಿ ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲುಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.


ಅವುಗಳ ಮಾಂಸವು [ಸಮಾಧಾನಯಜ್ಞಗಳಲ್ಲಿ] ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ ಬಲದೊಡೆಯಂತೆಯೂ ನಿನಗೇ ಸಲ್ಲಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು