ನೆಹೆಮೀಯ 10:28 - ಕನ್ನಡ ಸತ್ಯವೇದವು J.V. (BSI)28 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಸ್ಥಾನದಾಸರು, ಉಳಿದ ಜನರು ಇವರಲ್ಲಿ ದೇವರ ಧರ್ಮೋಪದೇಶದ ನಿವಿುತ್ತವಾಗಿ ಅನ್ಯದೇಶದವರ ಗೊಡವೆಯನ್ನು ತೊರೆದುಬಿಟ್ಟವರು ತಮ್ಮ ತಮ್ಮ ಹೆಂಡತಿಯರು, ಗ್ರಹಿಸಶಕ್ತರಾದ ಗಂಡು ಹೆಣ್ಣು ಮಕ್ಕಳು ಇವರೊಡನೆ ಬಂದು ಮುಖಂಡರಾದ ತಮ್ಮ ಸಹೋದರರನ್ನು ಕೂಡಿಕೊಂಡು ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಉಳಿದ ಜನರು ಇವರಲ್ಲಿ ದೇವರ ಧರ್ಮೋಪದೇಶದ ನಿಮಿತ್ತವಾಗಿ ಅನ್ಯದೇಶದವರ ಗೊಡವೆಯನ್ನು ತೊರೆದುಬಿಟ್ಟವರು ತಮ್ಮ ತಮ್ಮ ಹೆಂಡತಿಯರು, ಗ್ರಹಿಸಿಕೊಳ್ಳಲು ಶಕ್ತರಾದ ಗಂಡು ಹೆಣ್ಣು ಮಕ್ಕಳು ಇವರೊಡನೆ ಬಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಸ್ಥಾನ ಪರಿಚಾರಕರು, ಉಳಿದ ಜನರು, ಇವರಲ್ಲಿ ದೇವರ ಧರ್ಮೋಪದೇಶದ ನಿಮಿತ್ತ ಅನ್ಯದೇಶದವರ ಗೊಡವೆಯನ್ನು ತೊರೆದುಬಿಟ್ಟವರು, ತಮ್ಮ ತಮ್ಮ ಹೆಂಡತಿಯರು, ಗ್ರಹಿಸಲು ಶಕ್ತರಾದ ಗಂಡುಹೆಣ್ಣು ಮಕ್ಕಳು ಇವರೊಡನೆ ಬಂದು, ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28-29 ಹೀಗೆ ಇವರೆಲ್ಲಾ ಯೆಹೋವನಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದರು. ತಾವು ವಾಗ್ದಾನವನ್ನು ನೆರವೇರಿಸದೆ ಹೋದಲ್ಲಿ ಸಂಕಟಬಾಧೆಗಳು ಪ್ರಾಪ್ತವಾಗುವಂತೆ ಯೆಹೋವನನ್ನು ಕೇಳಿಕೊಂಡರು. ಇವರೆಲ್ಲಾ ದೇವರ ನೀತಿನಿಯಮಗಳನ್ನು ಅನುಸರಿಸುತ್ತೇವೆಂದು ಮಾತುಕೊಟ್ಟರು. ಆ ನೀತಿನಿಯಮಗಳನ್ನು ಯೆಹೋವನು ತನ್ನ ಸೇವಕನಾದ ಮೋಶೆಯ ಮೂಲಕ ನಮಗೆ ಕೊಟ್ಟನು. ಮೇಲೆ ಕಾಣಿಸಿದ ಹೆಸರುಗಳಲ್ಲದೆ ಉಳಿದ ಜನರು, ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಮತ್ತು ಇಸ್ರೇಲಿನ ಜನರು ತಮ್ಮ ಸುತ್ತಲು ವಾಸಿಸುವ ಜನರಿಂದ ಪ್ರತ್ಯೇಕಿಸಲ್ಪಟ್ಟರು. ದೇವರ ವಿಧಿನಿಯಮಗಳನ್ನು ಅನುಸರಿಸುವುದಕ್ಕಾಗಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕಿಸಿಕೊಂಡರು. ದೇವರಿಗೆ ಮಾಡಿದ ಒಡಂಬಡಿಕೆಯನ್ನು ನಡೆಸಿಕೊಡಲು ಒಪ್ಪಿದರು ಮತ್ತು ಹಾಗೆ ಮಾಡದಿದ್ದಲ್ಲಿ ದೇವರಿಂದ ಸಂಕಟ ವ್ಯಾಧಿಗಳನ್ನು ಸ್ವೀಕರಿಸಲೂ ಒಪ್ಪಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಜನರಲ್ಲಿ ಉಳಿದವರಾದ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ, ದೇವರ ನಿಯಮದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರೆಲ್ಲರೂ, ಅವರ ಹೆಂಡತಿಯರೂ, ಅವರ ಪುತ್ರರೂ, ಅವರ ಪುತ್ರಿಯರೂ, ತಿಳುವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ, ಅಧ್ಯಾಯವನ್ನು ನೋಡಿ |