Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 1:1 - ಕನ್ನಡ ಸತ್ಯವೇದವು J.V. (BSI)

1 ಹಕಲ್ಯನ ಮಗನಾದ ನೆಹೆಮೀಯನ ಮಾತುಗಳು - ಇಪ್ಪತ್ತನೆಯ ವರುಷದ ಮಾರ್ಗಶೀರ್ಷ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಹಕಲ್ಯನ ಮಗನಾದ ನೆಹೆಮೀಯನ ಚರಿತ್ರೆ: ಇಪ್ಪತ್ತನೆಯ ವರ್ಷದ ಮಾರ್ಗಶಿರ್ಷ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ ಮಾರ್ಗಶಿರ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇವು ನೆಹೆಮೀಯನ ಮಾತುಗಳು; ನೆಹೆಮೀಯನು ಹಕಲ್ಯನ ಮಗ. ಕಿಸ್ಲೇವ್ ತಿಂಗಳಿನಲ್ಲಿ ರಾಜಧಾನಿಯಾದ ಶೂಷನ್‌ನಲ್ಲಿ ನಾನು ಇದ್ದೆನು. ಅದು ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ, ಕಿಸ್ಲೇವ್ ಎಂಬ ಮಾರ್ಗಶಿರ ತಿಂಗಳಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 1:1
9 ತಿಳಿವುಗಳ ಹೋಲಿಕೆ  

ಅರಸನಾದ ದಾರ್ಯಾವೆಷನ ಆಳಿಕೆಯ ನಾಲ್ಕನೆಯ ವರುಷದ ಕಿಸ್ಲೇವ್ ಎಂಬ ಒಂಭತ್ತನೆಯ ತಿಂಗಳಿನ ನಾಲ್ಕನೆಯ ದಿನದಲ್ಲಿ ಯೆಹೋವನು ಜೆಕರ್ಯನಿಗೆ ಒಂದು ವಾಕ್ಯವನ್ನು ದಯಪಾಲಿಸಿದನು.


ಸಹಿಮಾಡಿದವರು - ಹಕಲ್ಯನ ಮಗನಾದ ನೆಹೆಮೀಯನೆಂಬ ದೇಶಾಧಿಪತಿಯೂ


ಅಹಷ್ವೇರೋಷನು ತನ್ನ ಆಳಿಕೆಯ ಮೂರನೆಯ ವರುಷ ಶೂಷನ್ ಕೋಟೆಯಲ್ಲಿನ ತನ್ನ ರಾಜಸಿಂಹಾಸನವನ್ನೇರಿದಾಗ


ನಾನು ಕಂಡ ಕನಸಿನಲ್ಲಿ ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿದ್ದೆನು; ಕನಸಿನಲ್ಲಿ ಊಲಾ ಕಾಲುವೆಯ ದಡದ ಮೇಲೆ ನಿಂತುಕೊಂಡಿದ್ದ ಹಾಗೆ ತೋರಿತು.


ಅವನೊಡನೆ ಕೆಲವು ಮಂದಿ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ಗಾಯಕರೂ ದ್ವಾರಪಾಲಕರೂ ದೇವಸ್ಥಾನದಾಸರೂ ಅರ್ತಷಸ್ತನ ಆಳಿಕೆಯ ಏಳನೆಯ ವರುಷದಲ್ಲಿ ಯೆರೂಸಲೇವಿುಗೆ ಬಂದರು.


ಈ ನಿರ್ಣಯವು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ರಾಜಾಜ್ಞೆಯ ಮೇರೆಗೆ ಶೀಘ್ರವಾಗಿ ಹೊರಟರು. ಅರಸನಾದರೋ ಹಾಮಾನನೊಡನೆ ಸುರಾಪಾನ ಮಾಡುವದಕ್ಕೆ ಕೂತುಕೊಂಡನು. ಅತ್ತ ಶೂಷನ್ ಪಟ್ಟಣದಲ್ಲಿ ತಳಮಳ ಉಂಟಾಯಿತು.


ನಾನು ಅರಸನ ಪಾನಸೇವಕನಾಗಿದ್ದೆನು. ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರುಷದ ಚೈತ್ರಮಾಸದಲ್ಲಿ ಅರಸನು ದ್ರಾಕ್ಷಾರಸಪಾನಮಾಡುವ ಹೊತ್ತಿನಲ್ಲಿ ನಾನು ದ್ರಾಕ್ಷಾರಸವನ್ನು ತಂದು ಅವನಿಗೆ ಕೊಟ್ಟೆನು. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ.


ಆಗ ಮೂರನೆಯ ದಿನದಲ್ಲಿ ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ಎಲ್ಲಾ ಪುರುಷರೂ ಯೆರೂಸಲೇವಿುನಲ್ಲಿ ಬಂದು ಕೂಡಿ ಆ ಸಂಗತಿಯ ನಿವಿುತ್ತವಾಗಿಯೂ ದೊಡ್ಡ ಮಳೆಯ ದೆಸೆಯಿಂದಲೂ ನಡುಗುತ್ತಾ ದೇವಾಲಯದ ಬೈಲಿನಲ್ಲಿ ಕೂತುಕೊಂಡರು.


ಅರಸನಾದ ಅರ್ತಷಸ್ತನು ನನ್ನನ್ನು ಯೆಹೂದ ದೇಶದ ಅಧಿಪತಿಯನ್ನಾಗಿ ನೇವಿುಸಿದಂದಿನಿಂದ ಹನ್ನೆರಡು ವರುಷಗಳವರೆಗೆ ಅಂದರೆ ಅವನ ಆಳಿಕೆಯ ಇಪ್ಪತ್ತನೆಯ ವರುಷದಿಂದ ಮೂವತ್ತೆರಡನೆಯ ವರುಷದವರೆಗೆ ನಾನಾಗಲಿ ನನ್ನ ಸಹೋದರರಾಗಲಿ ದೇಶಾಧಿಪತಿಗೆ ಸಲ್ಲತಕ್ಕ ಆಯದಿಂದ ಜೀವನಮಾಡಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು