Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನಹೂಮ 3:3 - ಕನ್ನಡ ಸತ್ಯವೇದವು J.V. (BSI)

3 ರಾಹುತರ ರಭಸ, ಥಳಥಳಿಸುವ ಕತ್ತಿ, ವಿುಂಚುವ ಈಟಿ, ಅಸಂಖ್ಯಾತ ಹತರು, ಶವಗಳ ಮಹಾರಾಶಿ! ಸತ್ತವರು ಲೆಕ್ಕವೇ ಇಲ್ಲ, [ನುಗ್ಗುವವರು] ಅವರ ಹೆಣಗಳನ್ನು ಎಡವುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ರಾಹುತರ ರಭಸ, ಥಳಥಳಿಸುವ ಕತ್ತಿ, ಮಿಂಚುವ ಈಟಿ, ಅಸಂಖ್ಯಾತವಾಗಿ ಹತರಾದ ಸೈನಿಕರ ಶವಗಳ ಮಹಾರಾಶಿ, ಸತ್ತವರು ಲೆಕ್ಕವೇ ಇಲ್ಲ, ನುಗ್ಗುವವರು ಅವರ ಹೆಣಗಳನ್ನು ಎಡವುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ, ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಕುದುರೆಗಳ ಮೇಲಿರುವ ಸೈನಿಕರು ಆಕ್ರಮಣವೆಸಗಿದ್ದಾರೆ. ಅವರ ಖಡ್ಗವು ಮಿಂಚುತ್ತದೆ. ಅವರ ಬರ್ಜಿಯು ಹೊಳೆಯುತ್ತದೆ, ಬಹು ಮಂದಿ ಸತ್ತಿರುತ್ತಾರೆ. ಶವಗಳ ರಾಶಿ ಬಿದ್ದಿವೆ, ಅವು ಲೆಕ್ಕವಿಲ್ಲದಷ್ಟು ಇವೆ. ಅವುಗಳ ಮೇಲೆ ಜನರು ಎಡವಿಬೀಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಸವಾರರು ಹತ್ತುತ್ತಾರೆ, ಈಟಿಗಳು ಥಳಥಳಿಸುತ್ತವೆ, ಖಡ್ಗಗಳು ಮಿಂಚುತ್ತವೆ, ಹತರಾದವರು ಬಹಳ; ಹೆಣಗಳ ರಾಶಿ; ಅಸಂಖ್ಯಾತ ಮೃತ ದೇಹಗಳು, ಶವಗಳ ಮೇಲೆ ತತ್ತರಿಸುತ್ತಿರುವ ಜನರು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ನಹೂಮ 3:3
10 ತಿಳಿವುಗಳ ಹೋಲಿಕೆ  

ನಿನ್ನ ಹಾರುವ ಬಾಣಗಳ ಬೆಳಗಿಗೂ ನಿನ್ನ ವಿುಂಚುವ ಈಟಿಯ ಹೊಳಪಿಗೂ ಸೂರ್ಯಚಂದ್ರರು ತಮ್ಮ ಗೂಡಿನಲ್ಲಿ ಅಡಗಿಕೊಳ್ಳುತ್ತಾರೆ.


ನೀನೂ ನಿನ್ನ ಎಲ್ಲಾ ಗುವ್ಮಿುಗಳೂ ನಿನ್ನೊಂದಿಗಿರುವ ಜನಾಂಗಗಳೂ ಇಸ್ರಾಯೇಲಿನ ಪರ್ವತಗಳಲ್ಲಿ ಬಿದ್ದುಬಿಡುವಿರಿ; ನಾನು ನಿಮ್ಮನ್ನು ಮಾಂಸತಿನ್ನುವ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರ ಮಾಡುವೆನು;


ಆಗ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲಾ ಹೆಣಗಳಾಗಿದ್ದರು.


ಅವರಲ್ಲಿ ಹತರಾದವರು ಬಿಸಾಡಲ್ಪಡುವರು, ಅವರ ಶವಗಳ ದುರ್ವಾಸನೆಯು ಮೇಲಕ್ಕೆ ಬಡಿಯುವದು; ಅವರ ರಕ್ತಪ್ರವಾಹದಿಂದ ಗುಡ್ಡಗಳು ಕರಗುವವು.


ಪಟ್ಟಣದ ಹೊರಗೆ ರಥಗಳು ರಭಸದಿಂದ ತಿರುಗಾಡುತ್ತವೆ, ಮೈದಾನದಲ್ಲಿ ಧಡಧಡ ಓಡಾಡುತ್ತವೆ; ಪಂಜುಗಳಂತೆ ಬೆಳಗುತ್ತವೆ, ವಿುಂಚುಗಳ ಹಾಗೆ ಹಾರುತ್ತವೆ.


ಅದೇ ರಾತ್ರಿಯಲ್ಲಿ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರಮಂದಿ ಸೈನಿಕರನ್ನು ಸಂಹರಿಸಿದನು. ಅಶ್ಶೂರ್ಯರು ಬೆಳಿಗ್ಗೆ ಎದ್ದು ನೋಡುವಲ್ಲಿ ಪಾಳೆಯತುಂಬಾ ಹೆಣಗಳಿದ್ದವು.


ಅದಲ್ಲದೆ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಆತನು ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.


ಯಾರೂ ಓಡಿಸದಿದ್ದರೂ ಕತ್ತಿಯ ಎದುರಿನಿಂದ ಓಡುವವರಂತೆ ಒಬ್ಬರ ಮೇಲೊಬ್ಬರು ಬೀಳುವರು; ಶತ್ರುಗಳ ಎದುರಿನಲ್ಲಿ ನಿಲ್ಲಲಾರದವರಾಗುವಿರಿ.


ಯೆಹೋವನು ಅಗ್ನಿಯಿಂದಲೂ ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹುಜನ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು