ನಹೂಮ 3:18 - ಕನ್ನಡ ಸತ್ಯವೇದವು J.V. (BSI)18 ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘನಿದ್ರೆಮಾಡುತ್ತಿದ್ದಾರೆ; ನಿನ್ನ ಮಹನೀಯರು ಒರಗಿಹೋಗಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸತಕ್ಕವರು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘ ನಿದ್ರೆ ಮಾಡುತ್ತಿದ್ದಾರೆ; ನಿನ್ನ ಮಹನೀಯರು ದೀರ್ಘನಿದ್ದೆಯಲ್ಲಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸುವವರು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 “ಅಸ್ಸೀರಿಯಾದ ಅರಸನೇ, ನಿನ್ನ ರಾಜ್ಯಪಾಲರು ದೀರ್ಘನಿದ್ರೆಯಲ್ಲಿದ್ದಾರೆ. ನಿನ್ನ ಪ್ರಮುಖರು ಜಡವಾಗಿ ಬಿದ್ದಿದ್ದಾರೆ. ನಿನ್ನ ಪ್ರಜೆಗಳು ಬೆಟ್ಟಗುಡ್ಡಗಳಲ್ಲಿ ಚದರಿಹೋಗಿದ್ದಾರೆ. ಅವರನ್ನು ಒಟ್ಟುಗೂಡಿಸತಕ್ಕವರು ಯಾರೂ ಇಲ್ಲದಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಅಶ್ಶೂರದ ಅರಸನೇ, ನಿನ್ನ ಕುರುಬರು ನಿದ್ರಿಸುತ್ತಿದ್ದಾರೆ. ಆ ಬಲಾಢ್ಯ ಕುರುಬರು ನಿದ್ರೆ ಮಾಡುತ್ತಿದ್ದಾರೆ. ನಿನ್ನ ಕುರಿಗಳು ಬೆಟ್ಟಗಳ ಮೇಲೆ ಚದರಿಹೋಗಿವೆ. ಅವುಗಳನ್ನು ಹಿಂತಿರುಗಿಸಿ ಒಟ್ಟುಗೂಡಿಸಲು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. ಕೂಡಿಸುವವರು ಯಾರೂ ಇಲ್ಲದಂತೆ ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ. ಅಧ್ಯಾಯವನ್ನು ನೋಡಿ |