Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 7:5 - ಕನ್ನಡ ಸತ್ಯವೇದವು J.V. (BSI)

5 ಆದದರಿಂದ ನೀವು ಹೀಗೆ ಮಾಡಬೇಕು - ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಕಲ್ಲಿನ ಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದುದರಿಂದ ನೀವು ಹೀಗೆ ಮಾಡಬೇಕು, ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಪವಿತ್ರವಾದ ಕಲ್ಲಿನ ಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು, ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆದುದರಿಂದ ನೀವು ಹೀಗೆ ಮಾಡಬೇಕು; ಅವರ ಯಜ್ಞವೇದಿಗಳನ್ನು ಕೆಡವಬೇಕು, ಅವರ ಪವಿತ್ರಶಿಲೆಗಳನ್ನು ಒಡೆಯಬೇಕು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಬಡಿದು ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಆ ಜನಾಂಗಗಳ ಯಜ್ಞವೇದಿಕೆಗಳನ್ನೆಲ್ಲಾ ನೀವು ಕೆಡವಿಹಾಕಿ ನೆಲಸಮಮಾಡಬೇಕು. ಅವರ ಸ್ಮಾರಕ ಕಲ್ಲುಗಳನ್ನು ಒಡೆದು ಚೂರುಚೂರು ಮಾಡಬೇಕು. ಅವರ ಅಶೇರಸ್ತಂಭಗಳನ್ನು ಕತ್ತರಿಸಿಹಾಕಬೇಕು; ಅವುಗಳ ಪ್ರತಿಮೆಗಳನ್ನು ಸುಟ್ಟುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅವರ ಬಲಿಪೀಠಗಳನ್ನು ಒಡೆದುಹಾಕಬೇಕು. ಅವರ ಪವಿತ್ರ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಹಾಕಬೇಕು. ಅವರ ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ನೀವು ಅವರಿಗೆ ಹೀಗೆ ಮಾಡತಕ್ಕದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 7:5
16 ತಿಳಿವುಗಳ ಹೋಲಿಕೆ  

ಅವರ ದೇವತೆಗಳನ್ನು ನೀವು ನಮಸ್ಕರಿಸಲೂಬಾರದು, ಪೂಜಿಸಲೂಬಾರದು; ಅವರ ಆಚರಣೆಗಳನ್ನು ಅನುಸರಿಸಲೇಬಾರದು. ಆ ಜನಗಳನ್ನು ನಿರ್ಮೂಲ ಮಾಡಿ ವಿಗ್ರಹಸ್ತಂಭಗಳನ್ನು ನಾಶನ ಮಾಡಬೇಕು.


[ಆದದರಿಂದ] ನೀವು ಅವರ ಬಲಿಪೀಠಗಳನ್ನು ಕೆಡವಿ ಅವರ ಕಲ್ಲುಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಬಿಡಬೇಕು.


ಕಲ್ಲಿನ ಕಂಬವನ್ನೂ ನಿಲ್ಲಿಸಬಾರದು; ಇದು ನಿಮ್ಮ ದೇವರಾದ ಯೆಹೋವನಿಗೆ ಹೇಯವಾದದ್ದು.


ಮತ್ತು ನೀವು ಯಾವದರ ಮೂಲಕ ಪಾಪವನ್ನು ಮಾಡಿದ್ದಿರೋ ಆ ಬಸವನನ್ನು ನಾನು ತೆಗೆದುಕೊಂಡು ಬೆಂಕಿಯಿಂದ ಸುಟ್ಟು ಒಡೆದು ಅರೆದು ಧೂಳುಮಾಡಿ ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬೀಸಾಡಿಬಿಟ್ಟೆನು.


ಅವರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿಬಂಗಾರವನ್ನು ನೀವು ಆಶಿಸಬಾರದು; ಅದನ್ನು ತೆಗೆದುಕೊಂಡರೆ ಅದು ನಿಮಗೆ ಉರುಲಾಗುವದು. ಅದು ನಿಮ್ಮ ದೇವರಾದ ಯೆಹೋವನಿಗೆ ಹೇಯವಾದದ್ದು.


ನೀವು ವಿಗ್ರಹಗಳನ್ನು ಮಾಡಿಸಿಕೊಳ್ಳಬಾರದು; ಕೆತ್ತಿದ ಪ್ರತಿಮೆಯನ್ನಾಗಲಿ ಕಲ್ಲುಕಂಬವನ್ನಾಗಲಿ ನಿಲ್ಲಿಸಿಕೊಳ್ಳಬಾರದು; ಅಡ್ಡಬೀಳುವದಕ್ಕಾಗಿ ವಿಚಿತ್ರವಾಗಿ ಕೆತ್ತಿದ ಕಲ್ಲುಗಳನ್ನು ನಿಮ್ಮ ದೇಶದಲ್ಲಿ ಇಡಬಾರದು; ನಾನೇ ಯೆಹೋವನೆಂಬ ನಿಮ್ಮ ದೇವರು.


ಜನರು ಮಾಡಿಸಿಕೊಂಡಿದ್ದ ಬಸವನನ್ನು ಅವನು ಹಿಡಿದು ಬೆಂಕಿಯಿಂದ ಸುಟ್ಟು ಅರೆದು ಪುಡಿಪುಡಿಮಾಡಿ ನೀರಿನ ಮೇಲೆ ಚೆಲ್ಲಿ ಇಸ್ರಾಯೇಲ್ಯರಿಗೆ ಆ ನೀರನ್ನು ಕುಡಿಸಿದನು.


ಆ ದೇಶದ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಟ್ಟು ಅವರ ವಿಚಿತ್ರವಾದ ಕಲ್ಲುಗಳನ್ನೂ ಲೋಹವಿಗ್ರಹಗಳನ್ನೂ ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು.


ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಟ್ಟಿಸಿಕೊಳ್ಳುವ ಯಜ್ಞವೇದಿಯ ಬಳಿಯಲ್ಲಿ ಯಾವ ವಿಧವಾದ ಮರದ ಅಶೇರವೆಂಬ ವಿಗ್ರಹ ಸ್ತಂಭವನ್ನೂ ನೆಡಬಾರದು;


ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡಿಸಿ ಅಶೇರವಿಗ್ರಹಸ್ತಂಭಗಳನ್ನು ಕಡಿಸಿಬಿಟ್ಟು ಯೆಹೂದ್ಯರಿಗೆ -


ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾವಿುಯ ಕಡೆಗೇ ಕಣ್ಣಿಡುವರು.


ಅಲ್ಲಿನ ವಿಗ್ರಹ ಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಬಿಟ್ಟರು.


ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ದೇವರುಗಳನ್ನು ದಾವೀದನು ಸುಡಿಸಿಬಿಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು