Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 6:11 - ಕನ್ನಡ ಸತ್ಯವೇದವು J.V. (BSI)

11 ನೀವು ಕೂಡಿಸದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ನೀವು ಅಗೆಯದ ನೀರಗುಂಡಿಗಳನ್ನೂ ನೀವು ಬೆಳಸದ ದ್ರಾಕ್ಷೇತೋಟಗಳನ್ನೂ ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ತುಂಬಿದ ಮನೆಗಳನ್ನೂ, ನೀವು ತೋಡದ ನೀರುಗುಂಡಿಗಳನ್ನೂ, ನೀವು ಬೆಳಸದ ದ್ರಾಕ್ಷಿತೋಟಗಳನ್ನೂ ಮತ್ತು ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನೀನು ಕಟ್ಟದ ಸುಂದರವಾದ ದೊಡ್ಡ ಪಟ್ಟಣಗಳನ್ನು, ನೀನು ಕೂಡಿಸದ ಉತ್ತಮೋತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನು, ನೀನು ತೋಡದ ನೀರುಗುಂಡಿಗಳನ್ನು, ನೀನು ಬೆಳಸದ ದ್ರಾಕ್ಷಿತೋಟಗಳನ್ನು ಹಾಗು ಎಣ್ಣೆಮರಗಳನ್ನು ಅನುಭವಿಸುತ್ತಾ ತೃಪ್ತನಾಗಿ ಇರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನೀವು ಕೂಡಿಸಿಡದ ಉತ್ತಮ ವಸ್ತುಗಳಿಂದ ತುಂಬಿರುವ ಮನೆಗಳನ್ನು ಯೆಹೋವನು ನಿಮಗೆ ಕೊಡುತ್ತಾನೆ. ನೀವು ತೋಡದಿರುವ ಬಾವಿಗಳನ್ನು ನಿಮಗೆ ಕೊಡುವನು. ನೀವು ನೆಡದಿರುವ ದ್ರಾಕ್ಷಾತೋಟಗಳನ್ನೂ ಎಣ್ಣೆಮರಗಳ ತೋಪುಗಳನ್ನೂ ನಿಮಗೆ ಕೊಡುವನು. ನಿಮಗೆ ತಿನ್ನಲು ಯಾವ ಕೊರತೆಯೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನೀವು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ನೀವು ಅಗೆಯದಿರುವ ಬಾವಿಗಳನ್ನೂ, ನೀವು ನೆಡದ ದ್ರಾಕ್ಷಿತೋಟಗಳನ್ನೂ, ಓಲಿವ್ ತೋಟಗಳನ್ನೂ ನಿಮಗೆ ಕೊಡಲಾಗಿ, ನೀವು ತಿಂದು ತೃಪ್ತರಾಗಿರುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 6:11
14 ತಿಳಿವುಗಳ ಹೋಲಿಕೆ  

ಆದರೆ ಯೆಶುರೂನು ಚೆನ್ನಾಗಿ ತಿಂದು ಕೊಬ್ಬಿ ಅಗಡಾಗಿ ತನ್ನನ್ನು ಸೃಷ್ಟಿಸಿದ ದೇವರನ್ನು ಬಿಟ್ಟು ತನ್ನ ಆಶ್ರಯದುರ್ಗವನ್ನು ತಿರಸ್ಕರಿಸಿತು.


ಇಸ್ರಾಯೇಲ್ಯರು ಬಾಳ್, ಅಶೇರ ಎಂಬ ದೇವತೆಗಳನ್ನು ಪೂಜಿಸಿ ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟು ಆತನ ದೃಷ್ಟಿಯಲ್ಲಿ ದ್ರೋಹಿಗಳಾದರು.


ಅಡವಿಯಲ್ಲಿ ದನಗಳಿಗೆ ಬೇಕಾದಷ್ಟು ಹುಲ್ಲನ್ನು ಕೊಡುವನು; ನೀವು ಆಹಾರದಿಂದ ತೃಪ್ತರಾಗಿರುವಿರಿ.


ಆಗ ಊರಲ್ಲಿರುವ ಅನ್ಯದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ ನಿಮ್ಮೊಡನೆ ಸ್ವಾಸ್ತ್ಯವನ್ನು ಹೊಂದದೆಹೋದ ಲೇವಿಯರೂ ಉಂಡು ಸಂತೋಷವಾಗಿರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಮಾಡುವನು.


ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿರುವ ಜನಾಂಗಗಳನ್ನು ಆತನು ತೆಗೆದುಹಾಕಿಬಿಟ್ಟ ತರುವಾಯ ನೀವು ಆ ದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅವರ ಗ್ರಾಮಗಳಲ್ಲಿಯೂ ಮನೆಗಳಲ್ಲಿಯೂ ವಾಸವಾಗಿರುವಾಗ


ನೀವು ವ್ಯವಸಾಯಮಾಡದೆ ಬೆಳೆದಿರುವ ಭೂವಿುಯನ್ನು ನಿಮಗೆ ಕೊಟ್ಟೆನು. ನೀವು ಕಟ್ಟದೆ ಇರುವ ಪಟ್ಟಣಗಳಲ್ಲಿ ನೀವು ವಾಸಿಸುತ್ತೀರಿ. ನೀವು ನೆಟ್ಟು ಬೆಳಸದೆ ಇರುವ ದ್ರಾಕ್ಷೆ, ಎಣ್ಣೇಮರ ಇವುಗಳ ತೋಟಗಳನ್ನು ಅನುಭವಿಸುತ್ತಿದ್ದೀರಿ ಎಂಬದೇ.


ಅವರು ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸಾರವುಳ್ಳ ಭೂವಿುಯನ್ನೂ ಸಮಸ್ತ ವಿಧವಾದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇತೋಟ, ಎಣ್ಣೇಮರಗಳ ತೋಪು, ಎಷ್ಟೋ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು ತೃಪ್ತರಾಗಿ ಕೊಬ್ಬಿ ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು.


ಮತ್ತು ಆತನು ಅವರಿಗೆ ಪರಜನರ ದೇಶಗಳನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರಿಗೆ ಕೈ ಸೇರಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು