Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 4:22 - ಕನ್ನಡ ಸತ್ಯವೇದವು J.V. (BSI)

22 ಇಲ್ಲಿಯೇ ಸಾಯಬೇಕೆಂದು ಖಂಡಿತವಾಗಿ ಹೇಳಿದನು. ನೀವಾದರೋ ಹೊಳೆ ದಾಟಿ ಆ ಒಳ್ಳೇ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಇಲ್ಲಿಯೇ ಸಾಯಬೇಕೆಂದು ಖಂಡಿತವಾಗಿ ಹೇಳಿದನು. ನೀವಾದರೋ ನದಿದಾಟಿ ಆ ಒಳ್ಳೆಯ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ನೀವಾದರೋ ನದಿ ದಾಟಿ ಆ ಸುಂದರ ನಾಡನ್ನು ಸೇರಿ ಸ್ವಾಧೀನ ಮಾಡಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದ್ದರಿಂದ ನಾನು ಇದೇ ದೇಶದಲ್ಲಿ ಸಾಯುವೆನು. ಆದರೆ ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ಆ ಒಳ್ಳೆಯ ದೇಶವನ್ನು ವಶಪಡಿಸಿಕೊಂಡು ಅಲ್ಲಿ ವಾಸಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ನಾನು ಈ ದೇಶದಲ್ಲಿ ಸಾಯಲೇಬೇಕು. ನಾನು ಯೊರ್ದನಿನ ಆಚೆಗೆ ಹೋಗತಕ್ಕದ್ದಲ್ಲ. ಆದರೆ ನೀವು ಆಚೆಗೆ ಹೋಗಿ, ಆ ಒಳ್ಳೆಯ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 4:22
11 ತಿಳಿವುಗಳ ಹೋಲಿಕೆ  

ಕರ್ತನೇ, ನಾನೂ ಈ ಹೊಳೆಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ ಲೆಬನೋನ್ ಪರ್ವತವನ್ನೂ ನೋಡುವದಕ್ಕೆ ಅಪ್ಪಣೆಯಾಗಲಿ ಎಂದು ಬಿನ್ನೈಸಿದೆನು.


ಆದರೆ ಪಿಸ್ಗಾ ಬೆಟ್ಟವನ್ನು ಹತ್ತಿ ತುದಿಯಲ್ಲಿ ನಿಂತು ಚತುರ್ದಿಕ್ಕುಗಳಲ್ಲಿ ಸುತ್ತಲೂ ಇರುವ ದೇಶವನ್ನು ಕಣ್ಣು ತುಂಬಾ ನೋಡಬಹುದು.


ಭೂವಿುಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನಿಮಗೆ ತಿನ್ನಿಸುವೆನು.


ನಿನ್ನ ಅಣ್ಣನಾದ ಆರೋನನು ಪಿತೃಗಳ ಬಳಿಗೆ ಸೇರಿದಂತೆಯೇ ನೀನೂ ಆ ದೇಶವನ್ನು ನೋಡಿದ ಮೇಲೆ ಸೇರಬೇಕು.


ಚಿನ್ ಅರಣ್ಯದಲ್ಲಿ ಇಸ್ರಾಯೇಲ್ಯರ ಸಮೂಹದವರು ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಗೌರವವನ್ನು ಅವರ ಎದುರಿನಲ್ಲಿ ಕಾಪಾಡದೆ ನನ್ನ ಆಜ್ಞೆಯನ್ನು ಉಲ್ಲಂಘಿಸಿದದರಿಂದ ಆ ದೇಶವನ್ನು ಸೇರಬಾರದು ಎಂದು ಹೇಳಿದನು. ಚಿನ್ ಅರಣ್ಯದಲ್ಲಿ ಮೆರೀಬಾ ಕಾದೇಶಿನ ಪ್ರವಾಹದ ಹತ್ತಿರ ನಡೆದ ಸಂಗತಿಯನ್ನು ಸೂಚಿಸಿ ಇದನ್ನು ಹೇಳಿದನು.


ಯೆಹೋವನು ಮೋಶೆಗೆ - ನೀನು ಸಾಯಬೇಕಾದ ಕಾಲ ಸಮೀಪವಾಯಿತು; ಆದಕಾರಣ ನೀನು ಯೆಹೋಶುವನನ್ನು ಕರೆದುಕೊಂಡು ಬಂದು ದೇವದರ್ಶನದ ಗುಡಾರದಲ್ಲಿ ನನ್ನ ಸನ್ನಿಧಿಯಲ್ಲಿ ನಿಲ್ಲಬೇಕು; ಆಗ ನಾನು ಅವನಿಗೆ ಅಧಿಕಾರವನ್ನು ಕೊಡುವೆನು ಎಂದು ಆಜ್ಞಾಪಿಸಲಾಗಿ ಮೋಶೆಯೂ ಯೆಹೋಶುವನೂ ದೇವದರ್ಶನದ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಂತುಕೊಂಡರು.


ಅದು ಮಾತ್ರವಲ್ಲದೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಮಾಡಿ - ನೀನೂ ಆ ದೇಶಕ್ಕೆ ಸೇರುವದಿಲ್ಲ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು