ಧರ್ಮೋಪದೇಶಕಾಂಡ 4:19 - ಕನ್ನಡ ಸತ್ಯವೇದವು J.V. (BSI)19 ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯಪಾಲಿಸಿದ ಸೂರ್ಯಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶ ಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲೂಬಾರದು ನಮಸ್ಕರಿಸಲೂಬಾರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯಪಾಲಿಸಿದ ಸೂರ್ಯ, ಚಂದ್ರ ಅಥವಾ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲೂ ಬಾರದು ಮತ್ತು ನಮಸ್ಕರಿಸಲೂ ಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ ಭ್ರಮೆಗೊಂಡು, ಸೂರ್ಯ, ಚಂದ್ರ, ನಕ್ಷತ್ರಗಳೆನಿಸಿಕೊಳ್ಳುವ ಆಕಾಶದ ಪರಿವಾರಗಳನ್ನು ಆರಾಧಿಸಬಾರದು, ಪೂಜಿಸಬಾರದು. ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ಅವುಗಳನ್ನು ಜಗದ ಬೇರೆ ಎಲ್ಲ ಜನಾಂಗಗಳಿಗಾಗಿ ಕೊಟ್ಟಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ನೀವು ಆಕಾಶವನ್ನು ತಲೆಯೆತ್ತಿ ನೋಡುವಾಗ ಅಲ್ಲಿ ಕಾಣುವ ಸೂರ್ಯಚಂದ್ರ ನಕ್ಷತ್ರಾದಿಗಳನ್ನು ಪೂಜಿಸಬೇಡಿ. ಇವುಗಳನ್ನೆಲ್ಲಾ ಅನ್ಯರು ಪೂಜಿಸುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ನೀವು ನಿಮ್ಮ ಕಣ್ಣುಗಳನ್ನು ಆಕಾಶಕ್ಕೆ ಎತ್ತಿ, ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ, ನಿಮ್ಮ ದೇವರಾದ ಯೆಹೋವ ದೇವರು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಕೊಟ್ಟಿದ್ದಾರೆ. ನೀವು ಅವುಗಳಿಗೆ ಅಡ್ಡಬಿದ್ದು, ಮರುಳುಗೊಂಡು ಅವುಗಳನ್ನು ಪೂಜಿಸದಂತೆಯೂ ನೋಡಿಕೊಳ್ಳಿರಿ. ಅಧ್ಯಾಯವನ್ನು ನೋಡಿ |
ಆ ಪ್ರವಾದಿಗೆ ಅಥವಾ ಆ ಕನಸುಕಂಡವನಿಗೆ ಮರಣ ಶಿಕ್ಷೆಯಾಗಬೇಕು. ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ ಐಗುಪ್ತದೇಶದೊಳಗಿಂದ ಕರತಂದ ನಿಮ್ಮ ದೇವರಾದ ಯೆಹೋವನಿಗೆ ವಿರೋಧವಾಗಿ ಅವನು ದ್ರೋಹದ ಮಾತುಗಳನ್ನಾಡಿ ನಿಮ್ಮ ದೇವರಾದ ಯೆಹೋವನು ಹೇಳಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸಬೇಕೆಂದಿದ್ದನಲ್ಲಾ. ಅವನನ್ನು ಕೊಲ್ಲಿಸಿ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.