ಧರ್ಮೋಪದೇಶಕಾಂಡ 33:7 - ಕನ್ನಡ ಸತ್ಯವೇದವು J.V. (BSI)7 ಯೆಹೂದ ಕುಲದ ವಿಷಯದಲ್ಲಿ ಹೀಗಂದನು - ಯೆಹೋವನೇ, ಯೆಹೂದ ಕುಲದವರ ಮೊರೆಯನ್ನು ಲಾಲಿಸಿ ಅವರನ್ನು ಅವರ ಬಂಧುಗಳೊಡನೆ ಸೇರಿಸು. ಅವರಿಗೋಸ್ಕರ ಯುದ್ಧಮಾಡಿದರಲ್ಲಾ; ಅವರ ಶತ್ರುಗಳಿಂದ ಅವರನ್ನು ತಪ್ಪಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 “ಯೆಹೂದ ಕುಲದ ವಿಷಯದಲ್ಲಿ, ‘ಯೆಹೋವನೇ, ಯೆಹೂದ ಕುಲದವರ ಮೊರೆಯನ್ನು ಲಾಲಿಸಿ ಅವರನ್ನು ಅವರ ಬಂಧುಗಳೊಡನೆ ಸೇರಿಸು. ಅವರಿಗೋಸ್ಕರ ಯುದ್ಧಮಾಡಿದರಲ್ಲಾ; ಅವರ ಶತ್ರುಗಳಿಂದ ಅವರನ್ನು ರಕ್ಷಿಸು’” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಯೆಹೂದ ಕುಲ ಕುರಿತು ಮೋಶೆ ಹೇಳಿದ್ದು: “ಸರ್ವೇಶ್ವರಾ, ಯೆಹೂದನ ಮೊರೆಯನ್ನಾಲಿಸು ಬಂಧುಗಳೊಡನೆ ಅವನನ್ನು ಮರಳಿ ಸೇರಿಸು ತನ್ನ ಹಕ್ಕುಬಾಧ್ಯತೆಗಳನ್ನು ಕಾದಿರಿಸಿಕೊಳ್ಳಲು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸು.” ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಯೆಹೂದನ ವಿಷಯವಾಗಿ ಮೋಶೆ ಹೇಳಿದ ಮಾತುಗಳು: “ಯೆಹೋವನೇ, ಯೆಹೂದದ ನಾಯಕನು ಸಹಾಯಕ್ಕಾಗಿ ಮೊರೆಯಿಡುವಾಗ ಅದನ್ನು ಆಲಿಸಿ ಅವನ ಜನರ ಬಳಿಗೆ ಕರೆದುಕೊಂಡು ಬಂದು ಅವರೊಂದಿಗೆ ಸೇರಿಸು. ಅವನನ್ನು ಬಲಗೊಳಿಸಿ ಶತ್ರುಗಳೊಂದಿಗೆ ಯುದ್ಧಮಾಡಲು ಸಹಾಯಿಸು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಯೆಹೂದನ ಬಗ್ಗೆ ಮೋಶೆ ಹೇಳಿದ ಮಾತಿದು: “ಯೆಹೋವ ದೇವರೇ, ಯೆಹೂದನ ಮೊರೆಯನ್ನಾಲಿಸಿ, ಅವರನ್ನು ಅವರ ಬಂಧುಗಳೊಡನೆ ಸೇರಿಸಿರಿ. ಅವನ ಸ್ವಂತ ಕೈಗಳೇ ತನ್ನ ಹಕ್ಕು ಬಾಧ್ಯತೆಗಳನ್ನು ಕಾದಿರಿಸುತ್ತವೆ. ಅವನ ಶತ್ರುಗಳಿಂದ ಅವನನ್ನು ತಪ್ಪಿಸಿರಿ.” ಅಧ್ಯಾಯವನ್ನು ನೋಡಿ |