Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 33:13 - ಕನ್ನಡ ಸತ್ಯವೇದವು J.V. (BSI)

13 ಯೋಸೇಫ್ ಕುಲಗಳ ವಿಷಯದಲ್ಲಿ ಹೇಳಿದ್ದೇನಂದರೆ - ಅವರ ಸೀಮೆಗೆ ಯೆಹೋವನ ಆಶೀರ್ವಾದವಾಗಲಿ. ಮೇಲಣ ಆಕಾಶದಿಂದುಂಟಾಗುವ ಮಂಜು, ಕೆಳಗಣ ಸಾಗರದ ಸೆಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೋಸೇಫ್ ಕುಲಗಳ ವಿಷಯದಲ್ಲಿ, “ಅವರ ಸೀಮೆಗೆ ಯೆಹೋವನ ಆಶೀರ್ವಾದವಾಗಲಿ. ಮೇಲಣ ಆಕಾಶದಿಂದುಂಟಾಗುವ ಮಂಜು, ಕೆಳಗಣ ಸಾಗರದ ಸೆಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಜೋಸೆಫ್ ಕುಲ ಕುರಿತು ಮೋಶೆ ನುಡಿದದ್ದು : “ಇವನ ಪ್ರಾಂತ್ಯ ಆಶೀರ್ವದಿತವಾಗಲಿ ಸರ್ವೇಶ್ವರನಿಂದ ಮೇಲಣ ಆಕಾಶದ ಮಂಜಿನಿಂದ ಕೆಳಗಿನ ಸಾಗರದ ಒರತೆಗಳಿಂದ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಯೋಸೇಫನ ಪ್ರಾಂತ್ಯವನ್ನು ಯೆಹೋವನು ಆಶೀರ್ವದಿಸಲಿ: “ಯೆಹೋವನೇ, ಅವರಿಗೆ ಆಕಾಶದಿಂದ ಮಳೆ ಸುರಿಸು, ನೆಲದಿಂದ ಬುಗ್ಗೆಯು ಹೊರಬರಲಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಯೋಸೇಫನ ವಿಷಯವಾಗಿ ಹೇಳಿದ್ದೇನೆಂದರೆ: “ಅವನ ದೇಶವು ಆಕಾಶದ ಅಮೂಲ್ಯವಾದ ಮಂಜಿನಿಂದಲೂ, ಕೆಳಗೆ ಸಾಗರ ಸೆಲೆಯಿಂದಲೂ ಯೆಹೋವ ದೇವರ ಆಶೀರ್ವಾದ ಹೊಂದಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 33:13
20 ತಿಳಿವುಗಳ ಹೋಲಿಕೆ  

ಯೆಹೋವನ ವರವಾದ ಇಬ್ಬನಿಯೂ ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಹೇಗೆ ಮನುಷ್ಯರನ್ನು ಎದುರುನೋಡದೆ ಮಾನವರನ್ನು ನಿರೀಕ್ಷಿಸದೆ ಹಿತಕರವಾಗಿರುವವೋ ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವದು.


ನಾನು ಇಸ್ರಾಯೇಲಿಗೆ ಇಬ್ಬನಿಯಂತಾಗುವೆನು; ಅದು ತಾವರೆಯಂತೆ ಒಡೆಯುವದು; ಲೆಬನೋನಿನ [ದೇವದಾರುಗಳ] ಹಾಗೆ ಬೇರುಬಿಟ್ಟುಕೊಳ್ಳುವದು.


ಯೆಹೋವನು ನನಗೆ ಹೇಳಿರುವದೇನಂದರೆ, ಬಿಸಿಲಿನಲ್ಲಿ ಜಳಜಳಿಸುವ ದಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂಬದೇ.


ರಾಜನ ರೋಷವು ಸಿಂಹದ ಗರ್ಜನೆ; ಅವನ ದಯೆಯು ಪೈರಿನ ಇಬ್ಬನಿ.


ಭೂವಿುಯ ಕೆಳಗಣ ಸಾಗರವು ಒಡೆದದ್ದಕ್ಕೂ ಆಕಾಶವು ಇಬ್ಬನಿಯನ್ನು ಸುರಿಸುವದಕ್ಕೂ ಆತನ ತಿಳುವಳಿಕೆಯೇ ಸಾಧನವು.


ನೆಮ್ಮದಿಯ ಬೆಳೆಯಾಗುವದು; ದ್ರಾಕ್ಷಾಲತೆಯು ಹಣ್ಣುಬಿಡುವದು, ಭೂವಿುಯು ಧಾನ್ಯವನ್ನೀಯುವದು, ಆಕಾಶವು ಇಬ್ಬನಿಯನ್ನು ಸುರಿಸುವದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು.


ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವಕ ಸೈನಿಕರು ಉದಯಕಾಲದ ಇಬ್ಬನಿಯಂತಿರುವರು.


ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುವವು, ರಾತ್ರಿಯಲ್ಲಿ ಇಬ್ಬನಿಯು ನನ್ನ ರೆಂಬೆಗಳ ಮೇಲೆ ಬಿದ್ದಿರುವದು.


ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ [ತಣ್ಣಗಿರುವದು;] ನನ್ನ ಬೋಧನೆಯು ಮಂಜಿನಂತೆಯೂ ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ [ಹಿತವಾಗಿರುವದು].


ಇವರು ಯಾರೆಂದು ಕೇಳಲು ಯೋಸೇಫನು ತನ್ನ ತಂದೆಗೆ - ಇವರು ಈ ದೇಶದಲ್ಲಿ ನನಗೆ ದೇವರು ಅನುಗ್ರಹಿಸಿದ ಮಕ್ಕಳು ಎಂದು ಹೇಳಿದನು. ಅದಕ್ಕವನು - ಇವರನ್ನು ನಾನು ಆಶೀರ್ವದಿಸುತ್ತೇನೆ; ನನ್ನ ಹತ್ತಿರಕ್ಕೆ ಕರಕೊಂಡು ಬಾ ಅಂದನು.


ನಾನು ಐಗುಪ್ತದೇಶಕ್ಕೆ ನಿನ್ನ ಬಳಿಗೆ ಬರುವದಕ್ಕಿಂತ ಮುಂಚೆ ಇಲ್ಲಿ ಹುಟ್ಟಿದ ನಿನ್ನಿಬ್ಬರು ಮಕ್ಕಳು ನನ್ನ ಮಕ್ಕಳಾಗಿರಬೇಕು. ರೂಬೇನ್ ಸಿಮೆಯೋನರು ನನ್ನ ಮಕ್ಕಳಾಗಿರುವಂತೆಯೇ ಎಫ್ರಾಯೀಮ್ ಮನಸ್ಸೆಯರೂ ನನ್ನ ಮಕ್ಕಳಾಗಿರಲಿ.


ಅವನು ಹತ್ತರ ಬಂದು ಅವನಿಗೆ ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ನೋಡಿದಾಗ ಅವನನ್ನು ಆಶೀರ್ವದಿಸಿ - ಆಹಾ, ನನ್ನ ಮಗನ ಸುವಾಸನೆಯು ಯೆಹೋವನು ಆಶೀರ್ವದಿಸಿದ ಹೊಲದ ಸುವಾಸನೆಯಂತಿರುವದು.


ಎಂದು ಹೇಳಿ ಗೋಳಾಡುತ್ತಾ ಅಳಲು ಅವನ ತಂದೆಯಾದ ಇಸಾಕನು ಅವನಿಗೆ - ಸಾರವುಳ್ಳ ಭೂವಿುಯೂ ಮೇಲಿನಿಂದ ಬೀಳುವ ಆಕಾಶದ ಮಂಜೂ ಇರುವ ಸ್ಥಳದಲ್ಲಿ ನಿನ್ನ ನಿವಾಸವಿರುವದು.


ಯೋಸೇಫನಿಂದ ಹುಟ್ಟಿದವರೊಳಗೆ ಎಫ್ರಾಯೀಮ್ ವಂಶದವರಲ್ಲಿ ಸೈನಿಕರಾಗಿ ಹೊರಡ ತಕ್ಕವರು ಅಂದರೆ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟ ಗಂಡಸರು … 40,500 ಮಂದಿ.


ವರುಷ ವರುಷಕ್ಕೂ ತಿಂಗಳು ತಿಂಗಳಿಗೂ ಆಗುವ ಬೆಳೆ,


ಆದಕಾರಣ ಇಸ್ರಾಯೇಲ್ಯರು ಆಕಾಶದಿಂದ ಮಂಜು ಸುರಿದು ಧಾನ್ಯವೂ ದ್ರಾಕ್ಷಾರಸವೂ ಸಮೃದ್ಧಿಯಾಗಿರುವ ದೇಶದಲ್ಲೇ ಸೇರಿ ನಿರ್ಭಯವಾಗಿ ವಾಸಿಸುವವರಾದರು, ಯಾಕೋಬ್‍ಸಂಭವರು ಸುರಕ್ಷಿತರಾದರು.


ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. ತಿವಿುಂಗಿಲಗಳೂ ಆದಿಸಾಗರಗಳೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು