ಧರ್ಮೋಪದೇಶಕಾಂಡ 3:25 - ಕನ್ನಡ ಸತ್ಯವೇದವು J.V. (BSI)25 ಕರ್ತನೇ, ನಾನೂ ಈ ಹೊಳೆಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ ಲೆಬನೋನ್ ಪರ್ವತವನ್ನೂ ನೋಡುವದಕ್ಕೆ ಅಪ್ಪಣೆಯಾಗಲಿ ಎಂದು ಬಿನ್ನೈಸಿದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಕರ್ತನೇ, ನಾನೂ ಈ ನದಿಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ, ಲೆಬನೋನ್ ಪರ್ವತವನ್ನೂ ನೋಡುವುದಕ್ಕೆ ಅಪ್ಪಣೆಯಾಗಲಿ” ಎಂದು ಬಿನ್ನವಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಸರ್ವೇಶ್ವರಾ, ನಾನು ಕೂಡ ಈ ನದಿಯನ್ನು ದಾಟಿ, ಆಚೆಯಿರುವ ಒಳ್ಳೆಯ ನಾಡನ್ನು ಅಂದರೆ, ಆ ಅಂದವಾದ ಮಲೆನಾಡನ್ನೂ ಲೆಬನೋನ್ ಪರ್ವತವನ್ನೂ ನೋಡುವುದಕ್ಕೆ ಅಪ್ಪಣೆಯಾಗಲಿ’ ಎಂದು ಭಿನ್ನಯಿಸಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ನಾನು ಜೋರ್ಡನ್ ನದಿ ದಾಟಿ, ನೀನು ನಮಗೆ ಕೊಡುವ ಉತ್ತಮವಾದ ದೇಶವನ್ನು ನಾನು ನೋಡುವಂತೆ ಮಾಡು. ಅದರ ಮನೋಹರವಾದ ಬೆಟ್ಟಪ್ರದೇಶಗಳನ್ನೂ ಲೆಬನೋನ್ ಪ್ರಾಂತ್ಯಗಳನ್ನೂ ನೋಡುವಂತೆ ಮಾಡು’ ಎಂದು ಬೇಡಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ನಾನು ದಾಟಿ ಹೋಗಿ, ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೆಯ ದೇಶವನ್ನೂ ಆ ಒಳ್ಳೆಯ ಬೆಟ್ಟವನ್ನೂ ಲೆಬನೋನನ್ನೂ ನೋಡುವುದಕ್ಕೆ ಅಪ್ಪಣೆಯಾಗಬೇಕು,” ಎಂದು ಬಿನ್ನೈಸಿದೆನು. ಅಧ್ಯಾಯವನ್ನು ನೋಡಿ |