Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 3:20 - ಕನ್ನಡ ಸತ್ಯವೇದವು J.V. (BSI)

20 ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಯೆಹೋವನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಕೊಟ್ಟ ಸ್ವಾಸ್ತ್ಯಕ್ಕೆ ತಿರಿಗಿ ಬರಬಹುದು ಎಂದು ಆಜ್ಞಾಪಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಯೆಹೋವನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಕೊಟ್ಟ ಸ್ವತ್ತಿಗೆ ಹಿಂತಿರುಗಿ ಬರಬಹುದು” ಎಂದು ಆಜ್ಞಾಪಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಸರ್ವೇಶ್ವರನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿ ಒಬ್ಬನೂ ನಾನು ಕೊಟ್ಟ ಸೊತ್ತಿಗೆ ತಿರುಗಿ ಬರಬಹುದು’ ಎಂದು ಆಜ್ಞಾಪಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಜೋರ್ಡನ್ ನದಿಯ ಮತ್ತೊಂದು ಕಡೆಯಲ್ಲಿರುವ ದೇಶವನ್ನು ಯೆಹೋವನು ನಿಮ್ಮ ಸಂಬಂಧಿಕರಾದ ಇಸ್ರೇಲರಿಗೆ ಕೊಡಲಿದ್ದಾನೆ. ಆ ದೇಶವನ್ನು ಇಸ್ರೇಲರು ತೆಗೆದುಕೊಳ್ಳುವ ತನಕ ನೀವು ಅವರಿಗೆ ಸಹಾಯ ಮಾಡಲೇಬೇಕು. ಇಲ್ಲಿ ಯೆಹೋವನು ನಿಮಗೆ ಶಾಂತಿಯನ್ನು ದಯಪಾಲಿಸಿದಂತೆ ಅಲ್ಲಿಯೂ ದಯಪಾಲಿಸುವ ತನಕ ಅವರಿಗೆ ಸಹಾಯ ಮಾಡಿರಿ. ಬಳಿಕ ನಾನು ನಿಮಗೆ ಕೊಟ್ಟಿರುವ ಈ ದೇಶಕ್ಕೆ ನೀವು ಮರಳಿ ಬರಬಹುದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಯೆಹೋವ ದೇವರು ನಿಮಗೆ ವಿಶ್ರಾಂತಿ ಕೊಟ್ಟ ಹಾಗೆಯೇ ನಿಮ್ಮ ಸಹೋದರರಿಗೂ ವಿಶ್ರಾಂತಿಯನ್ನು ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವರು. ಅದುವರೆಗೆ ನೀವು ಅವರೊಂದಿಗೆ ಸೇರಿ ಯುದ್ಧಕ್ಕೆ ಹೋಗಿರಿ. ಅನಂತರ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ನಿಮಗೆ ಕೊಟ್ಟ ಸ್ಥಳಗಳಗೆ ಹಿಂತಿರುಗಿ ಬರಬಹುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 3:20
9 ತಿಳಿವುಗಳ ಹೋಲಿಕೆ  

ಈಗ ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮ ಸಹೋದರರಿಗೆ ವಿಶ್ರಾಂತಿಯನ್ನು ದಯಪಾಲಿಸಿದ್ದದರಿಂದ ಆತನ ಸೇವಕನಾದ ಮೋಶೆಯು ಯೊರ್ದನಿನ ಆಚೆಯಲ್ಲಿ ನಿಮಗೆ ಕೊಟ್ಟ ಸ್ವಾಸ್ತ್ಯದಲ್ಲಿರುವ ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಬಹುದು.


ನೀವು ಬಹಳ ದನ, ಕುರಿ, ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ವಸ್ತ್ರ ಮೊದಲಾದ ವಸ್ತು ಸಮೃದ್ಧಿಯುಳ್ಳವರಾಗಿ ನಿಮ್ಮ ನಿವಾಸಗಳಿಗೆ ಹೋಗಿರಿ; ನೀವು ಶತ್ರುಗಳಿಂದ ತೆಗೆದುಕೊಂಡ ಕೊಳ್ಳೆಯಲ್ಲಿ ನಿಮ್ಮ ಸಹೋದರರಿಗೂ ಪಾಲು ಕೊಡಿರಿ ಅಂದನು.


ತರುವಾಯ ನೀವು ತಿರಿಗಿ ಬಂದು ಆತನ ದೃಷ್ಟಿಯಲ್ಲೂ ಇಸ್ರಾಯೇಲ್ಯರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ, ಮತ್ತು ಈ ಪ್ರದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವಾಸ್ತ್ಯವಾಗಿರುವದು.


ಆ ಕಾಲದಲ್ಲಿ ನಾನು ಯೆಹೋಶುವನಿಗೆ - ನಿಮ್ಮ ದೇವರಾದ ಯೆಹೋವನು ಆ ಇಬ್ಬರು ಅರಸರಿಗೆ ಮಾಡಿದ್ದನ್ನು ನೀನು ನೋಡೇ ಇದ್ದೀ. ನೀನು ಹೊಳೇ ದಾಟಿಹೋಗುವ ಎಲ್ಲಾ ರಾಜ್ಯಗಳನ್ನೂ ಆತನು ಹಾಗೆಯೇ ನಾಶಮಾಡುವನು.


ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಸ್ವಾಸ್ತ್ಯಕ್ಕೆ ಸೇರಿ ನೀವು ಇನ್ನು ವಿಶ್ರಾಂತಿ ಹೊಂದಲಿಲ್ಲವಲ್ಲಾ.


ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ನಿಮ್ಮ ಸಹೋದರರು ಸ್ವಾಧೀನಮಾಡಿಕೊಂಡು ಅವರೂ ನಿಮ್ಮಂತೆ ವಿಶ್ರಾಂತಿಹೊಂದಿದನಂತರ ಯೆಹೋವನ ಸೇವಕನಾದ ಮೋಶೆಯು ನಿಮಗೆ ಯೊರ್ದನ್ ಹೊಳೆಯ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ತಿರಿಗಿ ಬಂದು ಅದನ್ನು ಅನುಭವಿಸಬಹುದು ಎಂಬದೇ.


ಇಸ್ರಾಯೇಲ್ಯರೆಲ್ಲರೂ ತಮ್ಮತಮ್ಮ ಸ್ವಾಸ್ತ್ಯಗಳನ್ನು ಸ್ವತಂತ್ರಿಸಿಕೊಳ್ಳುವ ಪರ್ಯಂತರ ನಾವು ನಮ್ಮ ಮನೆಗಳಿಗೆ ತಿರಿಗಿ ಬರುವದಿಲ್ಲ.


ನೀವು ಯೆಹೋವನ ಸೇವಕನಾದ ಮೋಶೆಯು ವಿಧಿಸಿದ್ದೆಲ್ಲವನ್ನೂ ಕೈಕೊಂಡಿದ್ದೀರಿ.


ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲ್ಯರನ್ನು ಬಿಟ್ಟು ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯಿಂದ ತಮಗೆ ಸಿಕ್ಕಿದ ಸ್ವಾಸ್ತ್ಯವಾದ ಗಿಲ್ಯಾದ್ ದೇಶಕ್ಕೆ ಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು