ಧರ್ಮೋಪದೇಶಕಾಂಡ 22:9 - ಕನ್ನಡ ಸತ್ಯವೇದವು J.V. (BSI)9 ದ್ರಾಕ್ಷೇತೋಟಗಳಲ್ಲಿ ಬೇರೆ ವಿಧವಾದ ಬಿತ್ತನೆ ಮಾಡಬಾರದು; ಹಾಗೆ ಮಾಡಿದರೆ ಆ ಬೆಳೆಯೂ ಮತ್ತು ದ್ರಾಕ್ಷೆಯ ಬೆಳೆಯೂ ಅಂತೂ ಆ ತೋಟದ ಎಲ್ಲಾ ಬೆಳೆಯೂ ದೇವರದಾಗುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬೀಜವನ್ನು ಬಿತ್ತಬಾರದು; ಹಾಗೆ ಮಾಡಿದರೆ ಯಾಜಕರು ಆ ಬೆಳೆಯನ್ನು, ದ್ರಾಕ್ಷಿಯ ಬೆಳೆಯನ್ನು ಅಂತೂ ಆ ತೋಟದ ಎಲ್ಲಾ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 “ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬಿತ್ತನೆ ಮಾಡಬಾರದು; ಹಾಗೆ ಮಾಡಿದರೆ ಆ ಬೆಳೆಗೂ ಮತ್ತು ದ್ರಾಕ್ಷಿಬೆಳೆಗೂ ಹೀಗೆ ಆ ತೋಟದ ಬೆಳೆಗೂ ಗತಿಕೇಡಾಗುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 “ನೀವು ಧಾನ್ಯವನ್ನು ಮತ್ತು ದ್ರಾಕ್ಷಾಲತೆಗಳನ್ನು ಒಂದೇ ಹೊಲದಲ್ಲಿ ಬೆಳೆಸಬಾರದು. ಯಾಕೆಂದರೆ ಅವೆರಡೂ ಚೆನ್ನಾಗಿ ಬೆಳೆಯದೆ ಫಲ ಕೊಡದೆ ಹೋಗುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ನಿನ್ನ ದ್ರಾಕ್ಷಿತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜವೂ, ಬಿತ್ತಿದ ಬೀಜದ ಪೈರೂ, ದ್ರಾಕ್ಷಿತೋಟದ ಹುಟ್ಟುವಳಿಯೂ ಅಶುದ್ಧವಾಗುವುದು. ಅಧ್ಯಾಯವನ್ನು ನೋಡಿ |