Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 22:6 - ಕನ್ನಡ ಸತ್ಯವೇದವು J.V. (BSI)

6 ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ತತ್ತಿಗಳು ಇದ್ದು ಅವುಗಳ ಮೇಲೆ ತಾಯಿ ಹೊದಗಿರುವದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು, ಅವುಗಳ ಮೇಲೆ ತಾಯಿ ಹೊದಗಿರುವುದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 “ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ನೆಲದ ಮೇಲಾಗಲಿ ಒಂದು ಹಕ್ಕಿಯ ಗೂಡನ್ನು ಕಂಡು ಅದರೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು ಅವುಗಳ ಮೇಲೆ ತಾಯಿ ಹೊದಗಿರುವುದನ್ನು ನೋಡಿದರೆ, ಮರಿಗಳನ್ನಾಗಲಿ ತಾಯಿಯನ್ನಾಗಲಿ ಹಿಡಿದುಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ನೀವು ದಾರಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲಾಗಲಿ ಮರದಲ್ಲಿಯಾಗಲಿ ಗೂಡು ಕಟ್ಟಿಕೊಂಡು ಅದರೊಳಗೆ ತಾಯಿ ಪಕ್ಷಿಯು ತನ್ನ ಮೊಟ್ಟೆಗಳೊಂದಿಗೆ ಇಲ್ಲವೆ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿಪಕ್ಷಿಯನ್ನು ಹಿಡಿದು ಕೊಂಡೊಯ್ಯಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನೀನು ದಾರಿಯಲ್ಲಿ ಯಾವುದಾದರೊಂದು ಗಿಡದಲ್ಲಾಗಲಿ, ನೆಲದ ಮೇಲಾಗಲಿ, ನಿನಗೆ ಮರಿಗಳುಳ್ಳ ಇಲ್ಲವೆ ಮೊಟ್ಟೆಗಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ, ಮರಿಗಳ ಮೇಲೆಯಾಗಲಿ, ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತುಕೊಂಡಿದ್ದರೆ, ಮರಿಗಳ ಸಂಗಡ ತಾಯಿಯನ್ನು ತೆಗೆದುಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 22:6
7 ತಿಳಿವುಗಳ ಹೋಲಿಕೆ  

ಈದ ಆಕಳನ್ನೂ ಅದರ ಕರುವನ್ನೂ ಇಲ್ಲವೆ ಈದ ಆಡುಕುರಿಗಳನ್ನೂ ಅವುಗಳ ಮರಿಗಳನ್ನೂ ಒಂದೇ ದಿನದಲ್ಲಿ ವಧಿಸಬಾರದು.


ಶಿಷ್ಟನು ತನ್ನ ದನದ ಕ್ಷೇಮವನ್ನು ಲಕ್ಷಿಸುತ್ತಾನೆ; ದುಷ್ಟನ ವಾತ್ಸಲ್ಯವೋ ಕ್ರೂರತನವೇ.


ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತು ಹೋಗುವದಿಲ್ಲ.


ನಿನ್ನ ಬಳಿಯಲ್ಲಿರುವ ಪಶು, ಪಕ್ಷಿ, ಕ್ರಿವಿು ಮುಂತಾದ ಎಲ್ಲಾ ಜೀವಿಗಳೂ ಹೊರಗೆ ಬರಲಿ; ಅವುಗಳಿಗೆ ಭೂವಿುಯ ಮೇಲೆ ಬಹುಸಂತಾನವಾಗಲಿ; ಅವು ಅಭಿವೃದ್ಧಿಯಾಗಿ ಹೆಚ್ಚಲಿ ಎಂದು ಆಜ್ಞಾಪಿಸಲು


ಹೀಗಿರಲು ನಿಮ್ಮ ಕುಲಗಳವರಿಗೆ ವಿರುದ್ಧವಾಗಿ ಯುದ್ಧಘೋಷವು ಏಳುವದು; ಕಾಳಗದ ದಿನದಲ್ಲಿ ಶಲ್ಮಾನನು ತಾಯಿಗಳನ್ನು ಮಕ್ಕಳ ಸಹಿತ ಬಂಡೆಗೆ ಅಪ್ಪಳಿಸಿ ಬೇತ್ಅರ್ಬೇಲ್ ಪಟ್ಟಣವನ್ನು ಸೂರೆಮಾಡಿದಂತೆ ನಿಮ್ಮ ಎಲ್ಲಾ ಕೋಟೆಗಳು ಸೂರೆಮಾಡಲ್ಪಡುವವು.


ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಿಯನ್ನೂ ಕೊಲ್ಲುವನೋ ಏನೋ ಎಂದು ನನಗೆ ಭಯವದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.


ಸ್ತ್ರೀಯು ಪುರುಷವೇಷವನ್ನೂ ಪುರುಷನು ಸ್ತ್ರೀವೇಷವನ್ನೂ ಹಾಕಿಕೊಳ್ಳಕೂಡದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಹೇಯರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು