ಧರ್ಮೋಪದೇಶಕಾಂಡ 12:3 - ಕನ್ನಡ ಸತ್ಯವೇದವು J.V. (BSI)3 ಅವರ ಬಲಿಪೀಠಗಳನ್ನು ಕೆಡವಿ ಅವರ ಕಲ್ಲುಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಸುಟ್ಟು ಅವರ ದೇವತಾಪ್ರತಿಮೆಗಳನ್ನು ಕಡಿದು ಬಿಟ್ಟು ಆ ದೇವರುಗಳ ಹೆಸರೇ ಉಳಿಯದಂತೆ ಮಾಡಿಬಿಡಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವರ ಬಲಿಪೀಠಗಳನ್ನು ಕೆಡವಿ, ಅದರ ಪವಿತ್ರವಾದ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಸುಟ್ಟು, ಅವರ ದೇವತಾಪ್ರತಿಮೆಗಳನ್ನು ಕಡಿದುಬಿಟ್ಟು ಆ ದೇವರುಗಳ ಹೆಸರೇ ಉಳಿಯದಂತೆ ಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಕಲ್ಲುಕಂಬಗಳನ್ನು ಒಡೆಯಬೇಕು; ಅಶೇರ ಎಂಬ ವಿಗ್ರಹಸ್ತಂಭಗಳನ್ನು ಸುಟ್ಟು, ಅವರ ದೇವತಾ ಪ್ರತಿಮೆಗಳನ್ನು ಪುಡಿಪುಡಿಮಾಡಿ ಆ ದೇವರುಗಳ ಹೆಸರೇ ಉಳಿಯದಂತೆ ಮಾಡಿಬಿಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನೀವು ಅವರ ಯಜ್ಞವೇದಿಕೆಗಳನ್ನು ಪುಡಿಪುಡಿಮಾಡಿ, ಅವರ ಸ್ಮಾರಕ ಕಲ್ಲುಗಳನ್ನು ಕೆಡವಬೇಕು. ಅವರ ಅಶೇರ ಕಂಬಗಳನ್ನು ಸುಟ್ಟುಬಿಡಬೇಕು ಮತ್ತು ದೇವರುಗಳ ವಿಗ್ರಹಗಳನ್ನು ಕತ್ತರಿಸಿಹಾಕಬೇಕು. ಹೀಗೆ ನೀವು ಅವುಗಳ ಹೆಸರನ್ನು ಆ ಸ್ಥಳದಿಂದ ನಿರ್ಮೂಲ ಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನೀವು ಅವರ ಬಲಿಪೀಠಗಳನ್ನು ಕೆಡವಿಹಾಕಿ, ಅವರ ಕಲ್ಲುಸ್ತಂಭಗಳನ್ನು ಒಡೆದು, ಅವರ ಆಶೇರ್ ಸ್ತಂಭಗಳನ್ನು ಬೆಂಕಿಯಿಂದ ಸುಟ್ಟು, ಅವರ ದೇವರುಗಳ ವಿಗ್ರಹಗಳನ್ನು ಕಡಿದುಹಾಕಿ, ಅವರ ಹೆಸರುಗಳನ್ನು ಆ ಸ್ಥಳಗಳೊಳಗಿಂದ ತೆಗೆದುಹಾಕಬೇಕು. ಅಧ್ಯಾಯವನ್ನು ನೋಡಿ |
ಇದಾದನಂತರ ನೆರೆದುಬಂದ ಇಸ್ರಾಯೇಲ್ಯರೆಲ್ಲರೂ ಯೆಹೂದ ದೇಶದ ಪಟ್ಟಣಗಳಿಗೆ ಹೋಗಿ ಕಲ್ಲು ಕಂಬಗಳನ್ನು ಒಡೆದು ಅಶೇರವಿಗ್ರಹಸ್ತಂಭಗಳನ್ನು ಕಡಿದುಹಾಕಿ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಯೆಹೂದ ಬೆನ್ಯಾಮೀನ್ ಪ್ರಾಂತಗಳಲ್ಲಲ್ಲದೆ ಎಫ್ರಾಯೀಮ್ ಮನಸ್ಸೆ ಪ್ರಾಂತಗಳಲ್ಲಿಯೂ ಯಾವದೊಂದನ್ನೂ ಉಳಿಸಲಿಲ್ಲ. ಆಮೇಲೆ ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಸ್ವಾಸ್ತ್ಯವಿರುವ ಪಟ್ಟಣಗಳಿಗೆ ಹೋದರು.