ಧರ್ಮೋಪದೇಶಕಾಂಡ 12:2 - ಕನ್ನಡ ಸತ್ಯವೇದವು J.V. (BSI)2 ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೆಯೂ ದಿನ್ನೆಗಳ ಮೇಲೆಯೂ ಹರಡಿಕೊಂಡ ಮರಗಳ ಕೆಳಗೆಯೂ ತಮ್ಮ ದೇವರುಗಳನ್ನು ಆರಾಧಿಸುತ್ತಾರಷ್ಟೆ; ಆ ಸ್ಥಳಗಳನ್ನೆಲ್ಲಾ ನೀವು ಅಗತ್ಯವಾಗಿ ನಾಶಮಾಡಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೆಯೂ, ದಿಣ್ಣೆಗಳ ಮೇಲೆಯೂ ಹರಡಿಕೊಂಡು, ಮರಗಳ ಕೆಳಗೂ ತಮ್ಮ ದೇವರುಗಳನ್ನು ಆರಾಧಿಸುತ್ತಾರಷ್ಟೆ; ಆ ಸ್ಥಳಗಳನ್ನೆಲ್ಲಾ ನೀವು ತಪ್ಪದೆ ನಾಶಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 “ನೀವು ಸ್ವಾಧೀನಮಾಡಿಕೊಳ್ಳುವ ನಾಡಿನ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೂ ದಿಣ್ಣೆಗಳ ಮೇಲೂ ಹರಡಿಕೊಂಡ ಮರಗಳ ಕೆಳಗೂ ತಮ್ಮ ದೇವರುಗಳನ್ನು ಪೂಜಿಸುತ್ತಾರೆ; ಆ ಸ್ಥಳಗಳನ್ನೆಲ್ಲಾ ನೀವು ಅಗತ್ಯವಾಗಿ ನಾಶಮಾಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಈಗ ಆ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಜನರಿಂದ ತೆಗೆದುಕೊಂಡು ನಿಮಗೆ ಅದನ್ನು ಕೊಡುತ್ತಾನೆ. ಅಲ್ಲಿ ನೀವು ಹೋದಾಗ ಆ ಜನರ ವಿಗ್ರಹಾರಾಧನೆಯ ಸ್ಥಳಗಳನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅವರ ಪೂಜಾಸ್ಥಳಗಳು ಎತ್ತರವಾದ ಬೆಟ್ಟಗುಡ್ಡಗಳ ಮೇಲೆಯೂ ಹಸುರಾಗಿರುವ ಮರಗಳ ಕೆಳಗೂ ಇರುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ನೀವು ಸ್ವಾಧೀನ ಮಾಡಿಕೊಳ್ಳುವ ದೇಶದ ಜನಾಂಗಗಳು ತಮ್ಮ ದೇವರುಗಳಿಗೆ ಪೂಜಿಸಿದ ಸ್ಥಳಗಳನ್ನೂ, ಬೆಟ್ಟಗಳ ಮೇಲಿನ ಎತ್ತರ ಸ್ಥಳಗಳನ್ನೂ, ಗುಡ್ಡಗಳ ಹಾಗು ಮರಗಳ ಕೆಳಗಿರುವ ಸ್ಥಳಗಳನ್ನು ನೀವು ಪೂರ್ಣವಾಗಿ ನಾಶಮಾಡಬೇಕು. ಅಧ್ಯಾಯವನ್ನು ನೋಡಿ |