Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 10:8 - ಕನ್ನಡ ಸತ್ಯವೇದವು J.V. (BSI)

8 ಆ ಕಾಲದಲ್ಲಿ ಯೆಹೋವನು ಲೇವಿ ಕುಲದವರನ್ನು ಪ್ರತ್ಯೇಕಿಸಿ ತನ್ನ ಒಡಂಬಡಿಕೆಯ ಮಂಜೂಷವನ್ನು ಹೊರುವದಕ್ಕೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವದಕ್ಕೂ ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವದಕ್ಕೂ ಅವರನ್ನು ನೇವಿುಸಿದನು. ಅವರು ಇಂದಿನವರೆಗೂ ಆ ಕೆಲಸವನ್ನು ನಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ಕಾಲದಲ್ಲಿ ಯೆಹೋವನು ಲೇವಿ ಕುಲದವರನ್ನು ಪ್ರತ್ಯೇಕಿಸಿ ತನ್ನ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ತನ್ನ ಸನ್ನಿಧಿಯಲ್ಲಿ ಸೇವೆ ಮಾಡುವುದಕ್ಕೂ ಮತ್ತು ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದನು. ಅವರು ಇಂದಿನ ವರೆಗೂ ಆ ಕೆಲಸವನ್ನು ನಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 “ಆ ಕಾಲದಲ್ಲಿ ಸರ್ವೇಶ್ವರ ಲೇವಿಕುಲದವರನ್ನು ಪ್ರತ್ಯೇಕಿಸಿ ತಮ್ಮ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕು, ತಮ್ಮ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕು ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕು ಅವರನ್ನು ನೇಮಿಸಿದರು. ಅವರು ಇಂದಿನವರೆಗೂ ಆ ಕೆಲಸವನ್ನು ನಡೆಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆ ಕಾಲದಲ್ಲಿ ಯೆಹೋವ ದೇವರು ಲೇವಿ ಗೋತ್ರವನ್ನು ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ಯೆಹೋವ ದೇವರ ಮುಂದೆ ನಿಂತುಕೊಂಡು ಅವರಿಗೆ ಸೇವೆಮಾಡಿ, ಅವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದರು. ಅವರು ಈ ದಿನದವರೆಗೂ ಆ ಕೆಲಸವನ್ನು ನಡೆಸುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 10:8
39 ತಿಳಿವುಗಳ ಹೋಲಿಕೆ  

ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರವಿರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವದಕ್ಕೂ ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವದಕ್ಕೂ ಆದುಕೊಂಡಿದ್ದಾನಲ್ಲ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸಬೇಕು.


ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕುಲಗಳಲ್ಲಿ ಇವರನ್ನೂ ಇವರ ತರುವಾಯ ಇವರ ಸಂತತಿಯವರನ್ನೂ ತನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆಮಾಡುವದಕ್ಕೆ ತಾನೇ ನೇವಿುಸಿಕೊಂಡನಲ್ಲಾ.


ದಂಡು ಹೊರಡುವ ಕಾಲದಲ್ಲಿ ಆರೋನನೂ ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದನಂತರ ಕೆಹಾತ್ಯರು ಅವುಗಳನ್ನು ಹೊರುವದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು; ಮುಟ್ಟಿದರೆ ಸತ್ತಾರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ.


ನೀನು ಲೇವಿ ಕುಲದವರನ್ನು ಹತ್ತಿರಕ್ಕೆ ಕರೆದು ಅವರು [ದೇವರ ಸೇವಾಕಾರ್ಯಕ್ಕಾಗಿ] ಯಾಜಕನಾದ ಆರೋನನ ಕೈಕೆಳಗಿರುವಂತೆ ಅವನ ಮುಂದೆ ನಿಲ್ಲಿಸು.


ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು. ನೀವು ಹೊರಟುಹೋಗಿ ಫಲಕೊಡುವವರಾಗಬೇಕೆಂತಲೂ ನೀವು ಕೊಡುವ ಫಲವು ನಿಲ್ಲುವಂಥದಾಗಬೇಕೆಂತಲೂ ನಿಮ್ಮನ್ನು ನೇವಿುಸಿದ್ದೇನೆ. ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.


ಇದರಿಂದ ಯೆಹೋವನು ಹೀಗಂದಿದ್ದಾನೆ - ನೀನು [ನನ್ನ ಕಡೆಗೆ] ಹಿಂದಿರುಗಿದರೆ ನನ್ನ ಸಮ್ಮುಖದಲ್ಲಿ ನಿಲ್ಲುವಂತೆ ನಾನು ನಿನ್ನನ್ನು ತಿರುಗಿ ಸೇರಿಸಿಕೊಳ್ಳುವೆನು; ನೀನು ತುಚ್ಫವಾದದ್ದನ್ನು ನಿರಾಕರಿಸಿ ಅಮೂಲ್ಯವಾದದ್ದನ್ನು ಪ್ರಕಾಶಪಡಿಸಿದರೆ ನೀನು ನನ್ನ ಬಾಯಂತಿರುವಿ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ.


ಆಮೇಲೆ ಯಾಜಕರಾಗಿದ್ದ ಲೇವಿಯರು ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಸ್ವರವು [ದೇವರಿಗೆ] ಕೇಳಿಸಿತು; ಅವರ ಪ್ರಾರ್ಥನೆಯು ಪರಲೋಕದಲ್ಲಿರುವ ಆತನ ಪರಿಶುದ್ಧ ನಿವಾಸಕ್ಕೆ ಮುಟ್ಟಿತು.


ಉತ್ಸವದಿಂದ ತರುತ್ತಿರುವಾಗ ಅದನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದರಿಂದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞಮಾಡಿದರು.


ಆರೋನನು ಆ ದೋಷಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿ ಇಳಿದು ಬಂದನು.


ಆದರೆ ನಾನು ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ಕರೆದ ದೇವರು


ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.


ಅದು ಸಭಾಸೇವೆಯ ರೂಪವಾಗಿದ್ದರೆ ಸಭಾಸೇವೆಯನ್ನು ಮಾಡುತ್ತಾ ಇರೋಣ.


ಯೇಸು ಕ್ರಿಸ್ತನ ದಾಸನೂ ಅಪೊಸ್ತಲನಾಗುವದಕ್ಕೆ ಕರೆಯಲ್ಪಟ್ಟವನೂ ದೇವರ ಸುವಾರ್ತೆಯನ್ನು ಸಾರುವದಕ್ಕೆ ನೇವಿುಸಲ್ಪಟ್ಟವನೂ ಆಗಿರುವ ಪೌಲನು


ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿತ್ರಾತ್ಮನು - ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.


ಆದರೆ ಇಸ್ರಾಯೇಲ್ಯರು ನನ್ನನ್ನು ತೊರೆದಾಗ ಲೇವಿಯರೂ ಚಾದೋಕನ ಸಂತಾನದವರೂ ಆದ ಯಾಜಕರು ನನ್ನ ಪವಿತ್ರಾಲಯದ ಪಾರುಪತ್ಯವನ್ನು ನೆರವೇರಿಸಿದ್ದರಿಂದ ಅವರು ನನ್ನನ್ನು ಸೇವಿಸಲು ನನ್ನ ಸನ್ನಿಧಿಗೆ ಸೇರುವರು, ನನಗೆ ರಕ್ತಮೇದಸ್ಸುಗಳನ್ನು ಅರ್ಪಿಸಲು ನನ್ನ ಸಮ್ಮುಖದಲ್ಲಿ ನಿಂತುಕೊಳ್ಳುವರು; ಇದು ಕರ್ತನಾದ ಯೆಹೋವನ ನುಡಿ.


ಅವರು ನನ್ನ ಪವಿತ್ರಾಲಯದಲ್ಲಿ ಪರಿಚಾರಕರೂ ಮಂದಿರದ್ವಾರಪಾಲಕರೂ ಆಗಿ ಮಂದಿರದಲ್ಲಿ ಸೇವೆಮಾಡಬೇಕು; ಜನರ ಪಕ್ಷವಾಗಿ ಸರ್ವಾಂಗಹೋಮ ಪಶುವನ್ನೂ [ಸಮಾಧಾನ] ಯಜ್ಞಪಶುವನ್ನೂ ವಧಿಸಿ ಅವರಿಗೆ ಸೇವೆಮಾಡಲು ಸಿದ್ಧರಾಗಿರಬೇಕು.


ಯೆಹೋವನ ಮಂದಿರದಲ್ಲಿಯೂ ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆಮಾಡುವವರೇ, ಆತನನ್ನು ಕೀರ್ತಿಸಿರಿ.


ಮಹಾಪರಿಶುದ್ಧ ಸ್ಥಳದ ಕಡೆಗೆ ಕೈಯೆತ್ತಿ ಯೆಹೋವನನ್ನು ಕೊಂಡಾಡಿರಿ.


ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯೆಹೋವನು ತನ್ನನ್ನು ಆರಾಧಿಸುವದಕ್ಕೂ ಧೂಪಹಾಕುವದಕ್ಕೂ ನಿಮ್ಮನ್ನು ತನ್ನ ಸಾನ್ನಿಧ್ಯಸೇವಕರನ್ನಾಗಿ ಆರಿಸಿಕೊಂಡನಲ್ಲಾ ಎಂದು ಹೇಳಿದನು.


ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ ಆರಾಧನಾ ಸಾಮಾಗ್ರಿಗಳನ್ನೂ ಹೊರುವದು ಅವಶ್ಯವಿಲ್ಲವೆಂದುಕೊಂಡು ದಾವೀದನು ಈ ಪ್ರಕಾರ ವಿಧಿಸಿದನು.


ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸುವ ಗರ್ಭಗೃಹದಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿ ಇಟ್ಟರು.


ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುವ ಯಾಜಕರ ಅಥವಾ ನ್ಯಾಯಾಧಿಪತಿಯ ಮಾತನ್ನು ಯಾವನು ಅಹಂಕಾರದಿಂದ ನಿರಾಕರಿಸುತ್ತಾನೋ ಅವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ಇಸ್ರಾಯೇಲ್ಯರ ಮಧ್ಯದಿಂದ ತೆಗೆದುಹಾಕಬೇಕು.


ಅವರು ಕಾಪಾಡಬೇಕಾದವುಗಳು ಯಾವವಂದರೆ - ಮಂಜೂಷವೂ ಮೇಜೂ ದೀಪಸ್ತಂಭವೂ ವೇದಿಗಳೂ ದೇವಸ್ಥಾನದ ಸೇವೋಪಕರಣಗಳೂ ಒಳಗಣ ತೆರೆಯೂ ಇವುಗಳೇ. ಇವುಗಳ ಸಕಲವಿಧವಾದ ಪರಿಚರ್ಯವನ್ನು ಅವರು ಮಾಡಬೇಕು.


ಅವನ ತಲೆಗೆ ಮುಂಡಾಸವನ್ನು ಇಟ್ಟು ಅದರ ಮುಂಭಾಗದಲ್ಲಿ ಬಂಗಾರದ ಪಟ್ಟವನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧ ಕಿರೀಟವು.


ಮೋಶೆ ಈ ಧರ್ಮಶಾಸ್ತ್ರವನ್ನು ಬರೆದು ಯೆಹೋವನ ಆಜ್ಞಾಶಾಸನಗಳ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮತ್ತು ಹಿರಿಯರ ವಶಕ್ಕೆ ಕೊಟ್ಟು ಅವರಿಗೆ -


ಆ ಕಾಲದಲ್ಲಿ ದಾವೀದನು - ಲೇವಿಯರು ಹೊರತಾಗಿ ಯಾರೂ ದೇವಮಂಜೂಷವನ್ನು ಹೊರಬಾರದು; ಅದನ್ನು ಹೊರುವದಕ್ಕೂ ಸದಾಕಾಲ ತನ್ನ ಸೇವೆಮಾಡುವದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆಂದು ಹೇಳಿ


ಎಲೈ ರಾತ್ರಿಯಲ್ಲಿ ಯೆಹೋವನ ಮಂದಿರದಲ್ಲಿರುವ ಆತನ ಸರ್ವಸೇವಕರೇ, ಯೆಹೋವನನ್ನು ಕೊಂಡಾಡಿರಿ.


ಯಾವ ಊರು ಹತ್ತಿರವಾಗಿದೆಯೋ ಆ ಊರಿನ ಹಿರಿಯರು ಇನ್ನೂ ನೊಗಕ್ಕೆ ಕಟ್ಟಲ್ಪಡದೆಯೂ ಯಾವ ಕೆಲಸವನ್ನೂ ಮಾಡದೆಯೂ ಇರುವ ಒಂದು ಮಣಕವನ್ನು ತೆಗೆದುಕೊಂಡು ಎಂದಿಗೂ ವ್ಯವಸಾಯವಿಲ್ಲದಂಥ,


ಅಮ್ರಾಮನ ಮಕ್ಕಳು - ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾ ಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವದಕ್ಕೆ ಪ್ರತ್ಯೇಕಿಸಲ್ಪಟ್ಟರು. ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ ಸೇವಿಸುವವರೂ ಆತನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರತಕ್ಕದ್ದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು