ದಾನಿಯೇಲ 6:3 - ಕನ್ನಡ ಸತ್ಯವೇದವು J.V. (BSI)3 ಈ ದಾನಿಯೇಲನಲ್ಲಿ ಪರಮಬುದ್ಧಿ ಇದ್ದದರಿಂದ ಅವನು ವಿುಕ್ಕ ಮುಖ್ಯಾಧಿಕಾರಿಗಳಿಗಿಂತಲೂ ದೇಶಾಧಿಪತಿಗಳಿಗಿಂತಲೂ ಅಧಿಕ ಸಮರ್ಥನೆನಿಸಿಕೊಂಡಿದ್ದನು; ಅವನನ್ನು ರಾಜನು ಪೂರ್ಣರಾಜ್ಯದ ಮೇಲೆ ನೇವಿುಸಲು ಉದ್ದೇಶಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಈ ದಾನಿಯೇಲನಲ್ಲಿ ಪರಮಬುದ್ಧಿ ಇದ್ದುದರಿಂದ ಅವನು ಉಳಿದ ಮುಖ್ಯಾಧಿಕಾರಿಗಳಿಗಿಂತಲೂ, ದೇಶಾಧಿಪತಿಗಳಿಗಿಂತಲೂ ಅಧಿಕ ಸಮರ್ಥನೆನಿಸಿಕೊಂಡಿದ್ದನು. ಅವನನ್ನು ರಾಜನು ಸಮಸ್ತ ರಾಜ್ಯದ ಮೇಲ್ವಿಚಾರಕನನ್ನಾಗಿ ನೇಮಿಸಲು ಉದ್ದೇಶಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಈತ ಪರಮಜ್ಞಾನಿ. ಮಿಕ್ಕ ಮುಖ್ಯಾಧಿಕಾರಿಗಳಿಗಿಂತಲೂ ಅಧಿಪತಿಗಳಿಗಿಂತಲೂ ಹೆಚ್ಚು ಸಮರ್ಥನು. ಇವನನ್ನು ರಾಜನು ಸಮಸ್ತ ರಾಜ್ಯದ ಮೇಲ್ವಿಚಾರಕನನ್ನಾಗಿ ನೇಮಿಸಲು ಉದ್ದೇಶಿಸಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ದಾನಿಯೇಲನು ಬೇರೆ ಮುಖ್ಯಾಧಿಕಾರಿಗಳಿಗಿಂತ ಸಮರ್ಥನೆಂದು ತೋರಿಸಿಕೊಟ್ಟನು. ದಾನಿಯೇಲನು ತನ್ನ ಒಳ್ಳೆಯ ಗುಣ ಮತ್ತು ಮಹಾ ಸಾಮರ್ಥ್ಯಗಳ ಮೂಲಕ ಈ ಒಳ್ಳೆಯ ಹೆಸರನ್ನು ಪಡೆದನು. ದಾನಿಯೇಲನಿಂದ ಅರಸನು ತುಂಬ ಪ್ರಭಾವಿತನಾಗಿ ಅವನನ್ನು ಇಡೀ ರಾಜ್ಯದ ಅಧಿಕಾರಿಯನ್ನಾಗಿ ನೇಮಿಸಲು ಯೋಜನೆ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಈ ದಾನಿಯೇಲನಲ್ಲಿ ಉತ್ತಮ ಯೋಗ್ಯತೆಗಳು ಇದ್ದುದರಿಂದ ಅವನು ಉಪರಾಜರಿಗಿಂತಲೂ, ದೇಶಾಧಿಪತಿಗಿಂತಲೂ ಶ್ರೇಷ್ಠನಾಗಿದ್ದನು. ಈ ಕಾರಣದಿಂದ ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಉದ್ದೇಶಿಸಿದ್ದನು. ಅಧ್ಯಾಯವನ್ನು ನೋಡಿ |
ಹೀಗಿರಲು ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ ಪಂಡಿತ ಶಾಕುನಿಕರನ್ನು ಕರೆಯಿಸಿ ಬಾಬೆಲಿನ ಆ ವಿದ್ವಾಂಸರಿಗೆ - ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ನಾನು ಧೂಮ್ರವಸ್ತ್ರವನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇವಿುಸುವೆನು ಎಂದು ಹೇಳಿದನು.