ದಾನಿಯೇಲ 6:17 - ಕನ್ನಡ ಸತ್ಯವೇದವು J.V. (BSI)17 ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು; ದಾನಿಯೇಲನ ಗತಿಯು ಬೇರೆಯಾಗದಂತೆ ರಾಜನು ತನ್ನ ಮುದ್ರೆಯಿಂದಲೂ ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮೊಹರುಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಶಿಕ್ಷೆಯನ್ನು ಯಾರು ಬದಲಾಯಿಸದಂತೆ ರಾಜನ ಮುದ್ರೆಯಿಂದಲೂ, ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮುದ್ರೆಯನ್ನು ಹಾಕಿ ಭದ್ರ ಮಾಡಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಆ ಅಧಿಕಾರಿಗಳಾದರೋ ಒಂದು ಬಂಡೆಯನ್ನು ತಂದು ಆ ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಗತಿಯನ್ನು ಯಾರೂ ಬದಲಾಯಿಸಲಾಗದಂತೆ ರಾಜನ ಮತ್ತು ಅವನ ಮುಖಂಡರ ಮುದ್ರೆಯನ್ನು ಅದಕ್ಕೆ ಒತ್ತಿ ಮೊಹರು ಮಾಡಲಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಕೂಡಲೆ ಒಂದು ದೊಡ್ಡ ಕಲ್ಲುಬಂಡೆಯನ್ನು ತಂದು ಆ ಸಿಂಹದ ಗುಹೆಯ ಬಾಯಿಯನ್ನು ಮುಚ್ಚಿದರು. ಅರಸನು ತನ್ನ ಮುದ್ರೆಯುಂಗುರದಿಂದ ಆ ಬಂಡೆಗೆ ಮುದ್ರೆ ಹಾಕಿದನು. ಅರಸನ ಅಧಿಕಾರಗಳ ಮುದ್ರೆಯುಂಗುರಗಳಿಂದಲೂ ಸಹ ಆ ಕಲ್ಲುಬಂಡೆಗೆ ಮುದ್ರೆ ಹಾಕಲಾಯಿತು. ಇದರಿಂದಾಗಿ ಯಾರೂ ಆ ಕಲ್ಲುಬಂಡೆಯನ್ನು ಸರಿಸಿ ದಾನಿಯೇಲನನ್ನು ಆ ಸಿಂಹದ ಗುಹೆಯಿಂದ ಹೊರಗೆ ತೆಗೆಯದಂತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಗುಹೆಯ ಬಾಯಿಯನ್ನು ಬಂಡೆಯಿಂದ ಮುಚ್ಚಲಾಯಿತು. ಇದಲ್ಲದೆ ದಾನಿಯೇಲನ ಪರಿಸ್ಥಿತಿಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನೂ, ತನ್ನ ಪ್ರಧಾನರ ಮುದ್ರೆಯನ್ನೂ ಅದಕ್ಕೆ ಹಾಕಿದನು. ಅಧ್ಯಾಯವನ್ನು ನೋಡಿ |