ದಾನಿಯೇಲ 5:10 - ಕನ್ನಡ ಸತ್ಯವೇದವು J.V. (BSI)10 ರಾಜನು ಮತ್ತು ಮುಖಂಡರು ಆಡಿದ ಮಾತುಗಳು ರಾಣಿಗೆ ಮುಟ್ಟಲು ಆಕೆಯು ಔತಣದ ಶಾಲೆಗೆ ಬಂದು - ರಾಜನೇ, ಚಿರಂಜೀವಿಯಾಗಿರು, ನಿನ್ನ ಮನಸ್ಸು ಕಳವಳಗೊಳ್ಳದಿರಲಿ, ನಿನ್ನ ಮುಖ ಕಳೆಗುಂದದಿರಲಿ! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ರಾಜನು ಮತ್ತು ಮುಖಂಡರು ಆಡಿದ ಮಾತುಗಳು ರಾಣಿಗೆ ಮುಟ್ಟಲು ಆಕೆಯು ಔತಣದ ಶಾಲೆಗೆ ಬಂದು, “ರಾಜನೇ, ಚಿರಂಜೀವಿಯಾಗಿರು. ನಿನ್ನ ಮನಸ್ಸು ಕಳವಳಗೊಳ್ಳದಿರಲಿ, ನಿನ್ನ ಮುಖ ಕಳೆಗುಂದದಿರಲಿ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ರಾಜನೂ ಅವನ ಸಾಮಂತರೂ ಆಡಿದ ಮಾತು ರಾಣಿಗೆ ಮುಟ್ಟಿತು. ಆಕೆ ಔತಣ ಶಾಲೆಗೆ ಬಂದು, “ರಾಜರೇ, ಚಿರಂಜೀವಿಯಾಗಿರಿ! ನಿಮ್ಮ ಮನಸ್ಸು ಕಳವಳಗೊಳ್ಳದಿರಲಿ, ನಿಮ್ಮ ಮುಖ ಕಳೆಗುಂದದಿರಲಿ! ಪರಿಶುದ್ಧ ದೇವರ ಆತ್ಮ ನೆಲೆಸಿರುವ ಒಬ್ಬ ವ್ಯಕ್ತಿ ನಿಮ್ಮ ರಾಜ್ಯದಲ್ಲಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಆಗ ರಾಜನ ತಾಯಿಯು ಆ ಔತಣ ಶಾಲೆಗೆ ಬಂದಳು. ರಾಜನು ಮತ್ತು ಅವನ ಅಧಿಕಾರಿಗಳು ಆಡುತ್ತಿದ್ದ ಮಾತುಗಳನ್ನು ಕೇಳಿ ಅವಳು, “ರಾಜನೇ, ಚಿರಂಜೀವಿಯಾಗಿರು, ಭಯಪಡಬೇಡ. ಭಯದಿಂದ ನಿನ್ನ ಮುಖ ಅಷ್ಟೊಂದು ಬಿಳುಚಿಕೊಳ್ಳಲು ಬಿಡಬೇಡ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಆಗ ಅರಸನ ಮತ್ತು ಅವನ ಪ್ರಧಾನರ ಮಾತುಗಳನ್ನು ಕೇಳಿ ರಾಣಿಯು ಔತಣದ ಮನೆಗೆ ಬಂದಳು. ಆಗ ಮಾತನಾಡಿ, “ಅರಸನೇ, ನಿರಂತರವಾಗಿ ಬಾಳು! ನಿನ್ನ ಆಲೋಚನೆಗಳು ನಿನ್ನನ್ನು ಕಳವಳಪಡಿಸದಿರಲಿ. ನಿನ್ನ ಮುಖವು ಕಳೆಗುಂದದಿರಲಿ! ಅಧ್ಯಾಯವನ್ನು ನೋಡಿ |