ದಾನಿಯೇಲ 2:45 - ಕನ್ನಡ ಸತ್ಯವೇದವು J.V. (BSI)45 [ಬೆಟ್ಟದೊಳಗಿಂದ] ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣ ತಾಮ್ರ ಮಣ್ಣು ಬೆಳ್ಳಿ ಬಂಗಾರಗಳನ್ನು ಚೂರುಚೂರುಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ; ಇದರಿಂದ ಪರಲೋಕದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ; ಕನಸು ನಿಜ, ಅದರ ಅರ್ಥವು ನಂಬತಕ್ಕದು ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201945 ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣ, ತಾಮ್ರ, ಮಣ್ಣು, ಬೆಳ್ಳಿಬಂಗಾರಗಳನ್ನು ಚೂರುಚೂರು ಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ. ಇದರಿಂದ ಪರಲೋಕದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ. ಕನಸು ನಿಜ, ಅದರ ಅರ್ಥವು ನಂಬತಕ್ಕದು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)45 ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ-ಕಂಚು-ಮಣ್ಣು-ಬೆಳ್ಳಿ-ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು. ಅದರ ಅರ್ಥವೂ ನಂಬತಕ್ಕದ್ದು,” ಎಂದು ವಿವರಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್45 “ಅರಸನಾದ ನೆಬೂಕದ್ನೆಚ್ಚರನೇ, ಬೆಟ್ಟದಿಂದ ಒಂದು ದೊಡ್ಡ ಬಂಡೆ ಒಡೆದು ಬಂದದ್ದನ್ನು ನೀನು ನೋಡಿದೆ. ಯಾರೂ ಅದನ್ನು ಒಡೆಯಲಿಲ್ಲ! ಆ ಬಂಡೆಯು ಕಬ್ಬಿಣವನ್ನು, ಕಂಚನ್ನು, ಜೇಡಿಮಣ್ಣನ್ನು, ಬೆಳ್ಳಿಯನ್ನು, ಚಿನ್ನವನ್ನು ಚೂರುಚೂರು ಮಾಡಿತು. ಭವಿಷ್ಯದಲ್ಲಿ ಏನಾಗುವದೆಂಬುದನ್ನು ದೇವರು ನಿನಗೆ ಈ ರೀತಿಯಲ್ಲಿ ತೋರಿಸಿದ್ದಾನೆ. ನಿನ್ನ ಕನಸು ನಿಜ. ಅದರ ಅರ್ಥವು ನಂಬಿಕೆಗೆ ಯೋಗ್ಯವಾಗಿದೆ” ಎಂದು ವಿವರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ45 ಮಾನವ ಹಸ್ತಗಳಿಲ್ಲದೆ, ಆದರೆ ಬೆಟ್ಟದೊಳಗಿಂದ ಕಡಿದು ತೆಗೆದ ಗುಂಡು ಬಂಡೆಯು ಕಬ್ಬಿಣವನ್ನೂ, ಕಂಚನ್ನೂ, ಮಣ್ಣನ್ನೂ, ಬೆಳ್ಳಿಯನ್ನೂ ಹಾಗೂ ಬಂಗಾರವನ್ನೂ ತುಂಡುತುಂಡಾಗಿ ಮಾಡಿದ ಆ ಗುಂಡು ಕಲ್ಲಿನ ದರ್ಶನವು ಇದೆ. “ಇದರಿಂದ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಮಹಾ ದೇವರು ಅರಸನಿಗೆ ತೋರಿಸಿದ್ದಾರೆ. ಕನಸು ನಿಜವಾದದ್ದು, ಅದರ ಅರ್ಥವು ನಂಬತಕ್ಕದ್ದು,” ಎಂದನು. ಅಧ್ಯಾಯವನ್ನು ನೋಡಿ |