ದಾನಿಯೇಲ 11:5 - ಕನ್ನಡ ಸತ್ಯವೇದವು J.V. (BSI)5 ದಕ್ಷಿಣದಿಕ್ಕಿನ ರಾಜನೂ ಅವನ ಸರದಾರರಲ್ಲಿ ಒಬ್ಬನೂ ಬಲಗೊಳ್ಳುವರು; ಸರದಾರನು ರಾಜನಿಗಿಂತ ಹೆಚ್ಚು ಬಲಗೊಂಡು ಪ್ರಭುತ್ವಕ್ಕೆ ಬರುವನು; ಅವನ ರಾಜ್ಯವು ದೊಡ್ಡ ರಾಜ್ಯವಾಗಿರುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ದಕ್ಷಿಣ ರಾಜ್ಯದ ರಾಜನೂ, ಅವನ ಸರದಾರರಲ್ಲಿ ಒಬ್ಬನೂ ಬಲಗೊಳ್ಳುವರು. ಸರದಾರನು ರಾಜನಿಗಿಂತ ಹೆಚ್ಚು ಬಲಗೊಂಡು ಪ್ರಭುತ್ವಕ್ಕೆ ಬರುವನು. ಅವನ ರಾಜ್ಯವು ದೊಡ್ಡ ರಾಜ್ಯವಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 “ದಕ್ಷಿಣ ದಿಕ್ಕಿನ ರಾಜನು ಮತ್ತು ಅವನ ದಳವಾಯಿಗಳಲ್ಲಿ ಒಬ್ಬನು ಶಕ್ತಿಶಾಲಿಗಳಾಗುವರು. ದಳವಾಯಿ ರಾಜನಿಗಿಂತ ಶಕ್ತಿಶಾಲಿಯಾಗಿ ಪ್ರಭುತ್ವಕ್ಕೆ ಬರುವನು. ಅವನ ರಾಜ್ಯ ದೊಡ್ಡ ರಾಜ್ಯವಾಗುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 “ದಕ್ಷಿಣ ದಿಕ್ಕಿನ ರಾಜನು ಪ್ರಬಲನಾಗುವನು. ಆದರೆ ಆಗ ಅವನ ಒಬ್ಬ ಸೇನಾಧಿಪತಿಯು ದಕ್ಷಿಣದಿಕ್ಕಿನ ಅರಸನನ್ನು ಸೋಲಿಸುವನು. ಆ ಸೇನಾಧಿಪತಿಯು ಆಳಲು ಪ್ರಾರಂಭಿಸುವನು; ಅವನು ಬಹಳ ಪ್ರಭಾವಶಾಲಿಯಾಗುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ದಕ್ಷಿಣದ ಅರಸನು ಬಲಿಷ್ಠನಾಗುವನು. ಆದರೆ ಅವನ ಸೇನಾಪತಿಗಳಲ್ಲಿ ಒಬ್ಬನು ಅವನಿಗಿಂತ ಬಲಿಷ್ಠನಾಗುವನು ಮತ್ತು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವುದು. ಅಧ್ಯಾಯವನ್ನು ನೋಡಿ |