Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 24:12 - ಕನ್ನಡ ಸತ್ಯವೇದವು J.V. (BSI)

12 ಇದು ನನಗೆ ಗೊತ್ತಿರಲಿಲ್ಲ ಎಂದು ನೀನು ನೆವ ಹೇಳಿದರೆ ಹೃದಯಶೋಧಕನು ಗ್ರಹಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆಬಿಟ್ಟಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 “ಇದು ನನಗೆ ಗೊತ್ತಿರಲಿಲ್ಲ” ಎಂದು ನೀನು ನೆವ ಹೇಳಿದರೆ, ಹೃದಯಶೋಧಕನು ಗ್ರಹಿಸುವುದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಈ ಸಂಗತಿ ಗೊತ್ತಿರಲಿಲ್ಲವೆಂದು ನೆವ ಹೇಳಬೇಡ; ಅಂತರಂಗ ಪರಿಶೋಧಕನಿಗೆ ನಿನ್ನ ಯೋಜನೆ ತಿಳಿದಿಲ್ಲವೆ? ನಿನ್ನ ಮನಸ್ಸನ್ನು ಸಮೀಕ್ಷಿಸುವ ಆತನಿಗೆ ಇದು ಮರೆಯೇ? ಮಾನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲವನ್ನಾತ ನೀಡುವನಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ” ಎಂದು ನೀನು ಹೇಳಲಾಗದು. ಯೆಹೋವನಿಗೆ ಪ್ರತಿಯೊಂದು ತಿಳಿದಿದೆ. ನಿನ್ನ ಕಾರ್ಯಗಳ ಉದ್ದೇಶವೂ ಆತನಿಗೆ ತಿಳಿದಿದೆ. ಯೆಹೋವನು ನಿನ್ನನ್ನು ಗಮನಿಸಿ ನಿನ್ನ ಕಾರ್ಯಗಳಿಗೆ ಪ್ರತಿಫಲ ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನೀನು, “ಅದು ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿದರೆ, ಹೃದಯವನ್ನು ಪರಿಶೋಧಿಸುವ ದೇವರು ಅದನ್ನು ತಿಳಿಯುವದಿಲ್ಲವೋ? ನಿನ್ನ ಜೀವವನ್ನು ಕಾಯುವಾತನು ಅದನ್ನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 24:12
35 ತಿಳಿವುಗಳ ಹೋಲಿಕೆ  

ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸ ಮಾಡುವನು.


ಅವಳ ಮಕ್ಕಳನ್ನು ಕೊಂದೇ ಕೊಲ್ಲುವೆನು; ಆಗ ನಾನು ಮನುಷ್ಯರ ಅಂತರಿಂದ್ರಿಯವನ್ನೂ ಹೃದಯವನ್ನೂ ಪರೀಕ್ಷಿಸುವವನಾಗಿದ್ದೇನೆಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು. ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಹಾಗೆ ಪ್ರತಿಫಲ ಕೊಡುವೆನು.


ಆತನು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು.


ನರನ ನಡತೆಯು ಸ್ವಂತ ದೃಷ್ಟಿಗೆ ನೆಟ್ಟಗೆ; ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು.


ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.


ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷ್ಯಕ್ಕೆ ತರುವನು; ಆ ಹಿಂಸಕರಿಗಿಂತ ಮಹೋನ್ನತನು ಇದ್ದಾನಲ್ಲಾ.


ನೀನು ಹೋಗುವಾಗಲೂ ಬರುವಾಗಲೂ ಇಂದಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.


ಆತನು ನಿನ್ನ ಪಾದಗಳನ್ನು ಕದಲಗೊಡಿಸದಿರಲಿ; ನಿನ್ನನ್ನು ಕಾಯುವವನು ತೂಕಡಿಸದಿರಲಿ.


ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು.


ಕರ್ತನೇ, ನೀನು ಪ್ರೀತಿಸ್ವರೂಪನಾಗಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.


ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ ರಾತ್ರಿ ವೇಳೆ ವಿಚಾರಿಸಿದರೂ ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವದಿಲ್ಲ; ನನ್ನ ಬಾಯಲ್ಲಿಯೂ ತಪ್ಪಿಲ್ಲ.


ಇಗೋ, ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ.


ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ -


ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಅವೆ.


ಯಾಕಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೇದಕ್ಕಾಗಲಿ ಕೆಟ್ಟದ್ದಕ್ಕಾಗಲಿ ಸರಿಯಾಗಿ ಪ್ರತಿಫಲವನ್ನು ಹೊಂದುವದಕ್ಕೋಸ್ಕರ ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕು.


ಆದದರಿಂದ ಕಾಲಕ್ಕೆ ಮೊದಲು ಯಾವದನ್ನು ಕುರಿತೂ ತೀರ್ಪುಮಾಡಬೇಡಿರಿ; ಕರ್ತನು ಬರುವ ತನಕ ತಡೆಯಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು, ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವದು.


ನಾನು ಸಾರುವ ಸುವಾರ್ತೆಯಲ್ಲಿ ಬೋಧಿಸಿರುವ ಪ್ರಕಾರ ದೇವರು ಯೇಸು ಕ್ರಿಸ್ತನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ಹಿಡಿದು ವಿಚಾರಿಸುವ ದಿನವು ಬರುತ್ತದೆ. ಆ ದಿನದಲ್ಲಿ ಇದೆಲ್ಲಾ ತಿಳಿದುಬರುವದು.


ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ. ನಿಮ್ಮ ಕವಿಗಳಲ್ಲಿಯೂ ಕೆಲವರು - ನಾವು ಆತನ ಸಂತಾನದವರೇ ಎಂಬದಾಗಿ ಹೇಳಿದ್ದಾರೆ.


ಮನುಷ್ಯಕುಮಾರನು ತನ್ನ ತಂದೆಯ ಪ್ರಭಾವದೊಡನೆ ತನ್ನ ದೂತರ ಸಮೇತವಾಗಿ ಬರುವನು; ಆವಾಗ ಆತನು ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಫಲವನ್ನು ಕೊಡುವನು.


ಪರಲೋಕದೊಡೆಯನಿಗೆ ವಿರುದ್ಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿ; ಆತನ ಆಲಯದ ಪಾತ್ರೆಗಳನ್ನು ಸನ್ನಿಧಿಗೆ ತಂದರಲ್ಲಾ; ನೀನು ನಿನ್ನ ರಾಜ್ಯದ ಮುಖಂಡರ ಮತ್ತು ಪತ್ನ್ಯುಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿ ಇಲ್ಲದ ಬೆಳ್ಳಿಬಂಗಾರತಾಮ್ರ ಕಬ್ಬಿಣ ಮರಕಲ್ಲುಗಳ ದೇವರುಗಳನ್ನು ಸ್ತುತಿಸಿದ್ದೀ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗತಿಗಳು ಯಾರ ಅಧೀನವೋ ಆ ದೇವರನ್ನು ಘನಪಡಿಸಲೇ ಇಲ್ಲ;


ನೀನು ಆಲೋಚನೆಯಲ್ಲಿ ಶ್ರೇಷ್ಠನು, ಕಾರ್ಯದಲ್ಲಿ ಸಮರ್ಥನು; ನೀನು ಪ್ರತಿಯೊಬ್ಬನಿಗೂ ಅವನವನ ಕರ್ಮಕ್ಕೂ ನಡತೆಗೂ ತಕ್ಕ ಫಲವನ್ನು ಕೊಡಬೇಕೆಂದು ನರಜನ್ಮದವರ ಮಾರ್ಗಗಳನ್ನೆಲ್ಲಾ ಕಣ್ಣಾರೆ ನೋಡುತ್ತೀ;


ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ. ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.


ಆತನು ನಮ್ಮನ್ನು ಜೀವದಿಂದುಳಿಸಿ ನಮ್ಮ ಕಾಲುಗಳನ್ನು ಜಾರದಂತೆ ಕಾಪಾಡಿದನು.


ಹೃದಯರಹಸ್ಯಗಳನ್ನು ಬಲ್ಲವನಾದ ದೇವರು ವಿಚಾರಿಸುತ್ತಿರಲಿಲ್ಲವೋ?


ಮನುಷ್ಯರ ಹೃದಯವನ್ನೂ ಅಂತರಿಂದ್ರಿಯವನ್ನೂ ಪರಿಶೋಧಿಸುವ ನೀತಿಸ್ವರೂಪನಾದ ದೇವರೇ, ದುಷ್ಟರ ಕೆಟ್ಟತನವು ಇಲ್ಲದೆ ಹೋಗುವಂತೆ ಮಾಡು; ನೀತಿವಂತರನ್ನು ದೃಢಪಡಿಸು.


ಯಾವನಾದರೂ ನನ್ನ ಸ್ವಾವಿುಯಾದ ನಿನ್ನನ್ನು ಹಿಂಸಿಸಿ ಜೀವತಗೆಯಬೇಕೆಂದಿರುವಾಗ ಆ ನಿನ್ನ ಜೀವವು ನಿನ್ನ ದೇವರಾದ ಯೆಹೋವನ ರಕ್ಷಣೆಯಲ್ಲಿರುವ ಜೀವನಿಕ್ಷೇಪದಲ್ಲಿ ಭದ್ರವಾಗಿರಲಿ; ಆದರೆ ಆತನು ನಿನ್ನ ಶತ್ರುಗಳ ಜೀವವನ್ನು ಕವಣೆಯ ಕಲ್ಲನ್ನೋ ಎಂಬಂತೆ ಎಸೆದುಬಿಡಲಿ.


ಯೆಹೋವನೇ ಸಾಯಿಸುವವನೂ ಬದುಕಿಸುವವನೂ; ಪಾತಾಳದಲ್ಲಿ ದೊಬ್ಬುವವನೂ ಮೇಲಕ್ಕೆ ಬರಮಾಡುವವನೂ ಆತನೇ.


ಇನ್ನು ಮುಂದೆ ಹವ್ಮಿುನಿಂದ ನುಡಿಯಬೇಡಿರಿ; ಸೊಕ್ಕಿನ ಮಾತು ನಿಮ್ಮ ಬಾಯಿಂದ ಹೊರಡದಿರಲಿ. ದೇವರಾದ ಯೆಹೋವನು ಸರ್ವಜ್ಞನು; ಆತನು ಮನುಷ್ಯರ ಕ್ರಿಯೆಗಳನ್ನು ತೂಗುವನು.


ಕಿವಿಮಾಡಿದವನು ಕೇಳನೋ? ಕಣ್ಣುಕೊಟ್ಟವನು ನೋಡನೋ?


ಬಾಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನನುಭವಿಸುವನು; ಅವನ ಕೈಕೆಲಸದ ಫಲವು ಅವನಿಗೇ ಪ್ರಾಪ್ತವಾಗುವದು.


ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರವಿುಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು.


ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.


ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವದು, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು