ಜ್ಞಾನೋಕ್ತಿಗಳು 21:14 - ಕನ್ನಡ ಸತ್ಯವೇದವು J.V. (BSI)14 ಗುಪ್ತ ಬಹುಮಾನವು ಕೋಪವನ್ನಾರಿಸುವದು; ಮಡಲಲ್ಲಿಟ್ಟ ಲಂಚವು ಬಲು ಸಿಟ್ಟನ್ನಣಗಿಸುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಗುಪ್ತ ಬಹುಮಾನವು ಕೋಪವನ್ನಾರಿಸುವುದು, ಮಡಲಲ್ಲಿಟ್ಟ ಲಂಚವು ಕ್ರೋಧವನ್ನು ಅಣಗಿಸುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಗುಟ್ಟಾಗಿ ಬಹುಮಾನ ಕೊಟ್ಟು ಸಿಟ್ಟನ್ನು ಅಡಗಿಸುತ್ತಾರೆ; ಮಡಿಲಲ್ಲಿ ಲಂಚವನ್ನು ಮುಚ್ಚಿಟ್ಟು ಕೋಪವನ್ನು ಆರಿಸುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ನಿನ್ನ ಮೇಲೆ ಕೋಪಗೊಂಡಿರುವವನಿಗೆ ಒಂದು ಉಡುಗೊರೆಯನ್ನು ಗುಟ್ಟಾಗಿ ಕೊಡು. ಗುಟ್ಟಾಗಿ ಕೊಟ್ಟ ಉಡುಗೊರೆಯು ಮಹಾ ಕೋಪವನ್ನೂ ಅಡಗಿಸಬಲ್ಲದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಗುಟ್ಟಾಗಿ ಕೊಡುವ ಬಹುಮಾನವು ಕೋಪವನ್ನು ಅಡಗಿಸುವುದು; ಮಡಿಲಲ್ಲಿ ಇಟ್ಟ ಲಂಚವು ಮಹಾ ಕೋಪವನ್ನು ಆರಿಸುವುದು. ಅಧ್ಯಾಯವನ್ನು ನೋಡಿ |
ಅದಕ್ಕೆ ಅವರ ತಂದೆಯಾದ ಇಸ್ರಾಯೇಲನು ಅವರಿಗೆ - ನೀವು ಹೋಗಲೇಬೇಕಾಗಿದ್ದರೆ ಒಂದು ಕೆಲಸ ಮಾಡಿರಿ; ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಸಾಮಾನಿನಲ್ಲಿಟ್ಟು, ಆ ಮನುಷ್ಯನಿಗೆ ಕಾಣಿಕೆಯಾಗಿ ತೆಗೆದುಕೊಂಡು ಹೋಗಿರಿ; ಸ್ವಲ್ಪ ತೈಲ, ಸ್ವಲ್ಪ ದ್ರಾಕ್ಷಾರಸದ ಕಾಕಂಬಿ, ಹಾಲುಮಡ್ಡಿ, ರಕ್ತಬೋಳ, ಆಕ್ರೋಡು, ಬಾದಾವಿು ಇವುಗಳನ್ನು ತೆಗೆದುಕೊಂಡುಹೋಗಿ ಕೊಡಿರಿ.