Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 16:28 - ಕನ್ನಡ ಸತ್ಯವೇದವು J.V. (BSI)

28 ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಮೂರ್ಖನು ಜಗಳವನ್ನು ಬಿತ್ತುತ್ತಾನೆ. ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 16:28
18 ತಿಳಿವುಗಳ ಹೋಲಿಕೆ  

ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು; ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.


ಹೇಗಂದರೆ ಅವರು ಸಕಲವಿಧವಾದ ಅನ್ಯಾಯ ದುರ್ಮಾರ್ಗತನ ಲೋಲುಪ್ತಿ ದುಷ್ಟತ್ವಗಳಿಂದಲೂ ಹೊಟ್ಟೇಕಿಚ್ಚು ಕೊಲೆ ಜಗಳ ಮೋಸ ಹಗೆತನಗಳಿಂದಲೂ ತುಂಬಿದವರಾದರು.


ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು; ಹೊಟ್ಟೆಯೊಳಕ್ಕೇ ಇಳಿಯುವವು.


ಕೋಪಿಷ್ಟನು ವ್ಯಾಜ್ಯವನ್ನೆಬ್ಬಿಸುವನು; ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.


ಅವನ ಮನಸ್ಸಿನಲ್ಲಿರುವದು ದ್ರೋಹವೇ; ಕೇಡನ್ನು ನಿರಂತರ ಕಲ್ಪಿಸುತ್ತಾನೆ. ಜಗಳದ ಬೀಜವನ್ನು ಬಿತ್ತುತ್ತಾನೆ.


ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು, ಈ ಏಳೇ.


ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ಜಗಳ ಹೊಟ್ಟೆಕಿಚ್ಚು ದ್ವೇಷ ಸ್ವಾರ್ಥಬುದ್ಧಿ ಚಾಡಿಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬರುವದೋ ಏನೋ ನನಗೆ ಸಂಶಯ ಉಂಟು.


ಹಾಲು ಕಡೆಯುವದರಿಂದ ಬೆಣ್ಣೆ, ಮೂಗು ಹಿಂಡುವದರಿಂದ ರಕ್ತ, ಕೋಪಕಲಕುವದರಿಂದ ಜಗಳ.


ದಾವೀದನು ನಿನಗೆ ಕೇಡುಮಾಡಬೇಕೆಂದಿರುತ್ತಾನೆಂದು ಹೇಳುವವರ ಮಾತಿಗೆ ನೀನೇಕೆ ಕಿವಿಗೊಡುತ್ತೀ?


ಕೋಪಿಷ್ಠನು ಜಗಳವನ್ನೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.


ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ; ಅವನ ತುಟಿಗಳಲ್ಲಿ ಬೆಂಕಿಯುರಿಯುತ್ತದೆ.


ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ ದುರ್ಮಾರ್ಗಕ್ಕೆ ಎಳೆಯುವನು.


ವಿುತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.


ಜ್ಞಾನಹೀನನ ತುಟಿಗಳು ಜಗಳವನ್ನು ಹೂಡುತ್ತವೆ; ಅವನ ಬಾಯಿ ಪೆಟ್ಟುತಿನ್ನುವದಕ್ಕೆ ಕೂಗಿಕೊಳ್ಳುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು