Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 14:28 - ಕನ್ನಡ ಸತ್ಯವೇದವು J.V. (BSI)

28 ಪ್ರಜೆಗಳ ವೃದ್ಧಿ ರಾಜನ ಮಹಿಮೆ; ಪ್ರಜೆಗಳ ಕ್ಷಯ ಪ್ರಭುವಿಗೆ ಭಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಪ್ರಜೆಗಳ ವೃದ್ಧಿ ರಾಜನ ಮಹಿಮೆ, ಪ್ರಜೆಗಳ ನಾಶ ಪ್ರಭುವಿಗೆ ಭಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಅಧಿಕ ಜನಸಂಖ್ಯೆಯು ರಾಜನಿಗೆ ಗೌರವ. ಪ್ರಜೆಗಳೇ ಇಲ್ಲದಿದ್ದರೆ ರಾಜನಿಗೆ ಬೆಲೆಯೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಜನಸಮೂಹದಲ್ಲಿ ಅರಸನ ಘನತೆ ಇದೆ. ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 14:28
11 ತಿಳಿವುಗಳ ಹೋಲಿಕೆ  

ಯೆಹೋವಾಹಾಜನಿಗೆ ಐವತ್ತು ಮಂದಿ ರಾಹುತರು, ಹತ್ತು ರಥಗಳು, ಹತ್ತುಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದರು. ಅರಾಮ್ಯರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ ಕಣದ ಧೂಳಿನಂತೆ ಮಾಡಿದನು.


ತರುವಾಯ ಫರೋಹನು ತನ್ನ ಜನರಿಗೆಲ್ಲಾ - [ಇಬ್ರಿಯರ] ಗಂಡುಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು ಎಂದು ಆಜ್ಞೆ ಮಾಡಿದನು.


ಇಸ್ರಾಯೇಲ್ಯರೂ ಕೂಡಿ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಂಡು ಅವರಿಗೆ ವಿರೋಧವಾಗಿ ಬಂದರು. ಅರಾಮ್ಯರು ದೇಶದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿರುವ ಇಸ್ರಾಯೇಲ್ಯರು ಅವರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.


ಐಗುಪ್ತ್ಯರು ಅವರನ್ನು ಎಷ್ಟು ಉಪದ್ರವಪಡಿಸಿದರೂ ಅವರು ಅತ್ಯಧಿಕವಾಗಿ ಹೆಚ್ಚಿ ಹರಡಿಕೊಂಡದ್ದರಿಂದ ಐಗುಪ್ತ್ಯರು ಇಸ್ರಾಯೇಲ್ಯರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು.


ಈಗ ಎದ್ದು ಹೋಗಿ ನಿನ್ನ ಸೇವಕರನ್ನು ದಯಾಭಾವದಿಂದ ಮಾತಾಡಿಸು; ಯೆಹೋವನಾಣೆ, ನೀನು ಹೀಗೆ ಮಾಡದಿದ್ದರೆ ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿನ್ನನ್ನು ಬಿಟ್ಟು ಹೋಗುವರು. ಯೌವನಕಾಲದಿಂದ ಈವರೆಗೆ ನಿನಗೆ ಬಂದ ಎಲ್ಲಾ ಕೇಡುಗಳಲ್ಲಿ ಇದೇ ಹೆಚ್ಚಿನದಾಗಿರುವದು ಎಂದು ಹೇಳಿದನು.


ಯೆಹೋವನ ಭಯ ಜೀವದ ಬುಗ್ಗೆ; ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನ.


ದೀರ್ಘಶಾಂತನು ಕೇವಲ ಬುದ್ಧಿವಂತನು; ಮುಂಗೋಪಿಯು ಮೂರ್ಖತನವನ್ನು [ಧ್ವಜವಾಗಿ] ಎತ್ತುವನು.


ಆಗ ಯೋವಾಬನು ಅರಸನಿಗೆ - ನನ್ನ ಒಡೆಯನಾದ ನಿನ್ನ ಆಯುಷ್ಕಾಲದಲ್ಲೇ ದೇವರಾದ ಯೆಹೋವನು ನಿನ್ನ ಪ್ರಜೆಗಳನ್ನು ಈಗ ಇರುವದಕ್ಕಿಂತ ನೂರರಷ್ಟು ಹೆಚ್ಚಿಸಲಿ. ನನ್ನ ಒಡೆಯನಾದ ಅರಸನು ಈ ಕಾರ್ಯಕ್ಕೆ ಮನಸ್ಸು ಮಾಡಿದ್ದೇಕೆ ಅಂದನು.


[ಚೀಯೋನೇ] ಕಣ್ಣೆತ್ತು, ಬಡಗಲಿಂದ ಬರುವವರನ್ನು ನೋಡು; ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು