Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 1:13 - ಕನ್ನಡ ಸತ್ಯವೇದವು J.V. (BSI)

13 ಸಕಲವಿಧವಾದ ಅಮೂಲ್ಯಸಂಪತ್ತನ್ನು ಕಂಡುಹಿಡಿದು ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಸಕಲವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು, ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬಿಕೊಳ್ಳೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅಮೂಲ್ಯವಾದ ಸೊತ್ತನ್ನೆಲ್ಲಾ ಕಂಡುಹಿಡಿಯೋಣ; ಕೊಳ್ಳೆಹೊಡೆದು ಮನೆ ತುಂಬಿಸಿಕೊಳ್ಳೋಣ, ಬಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಬೆಲೆಬಾಳುವ ಎಲ್ಲಾ ಬಗೆಯ ವಸ್ತುಗಳನ್ನು ಕದ್ದು ನಮ್ಮ ಮನೆಗಳಲ್ಲಿ ತುಂಬಿಸಿಕೊಳ್ಳೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅಮೂಲ್ಯವಾದ ಸೊತ್ತನ್ನೆಲ್ಲಾ ನಾವು ಕಂಡುಹಿಡಿದು ಕೊಳ್ಳೆಹೊಡೆದು ನಮ್ಮ ಮನೆಗಳನ್ನು ತುಂಬಿಕೊಳ್ಳೋಣ;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 1:13
14 ತಿಳಿವುಗಳ ಹೋಲಿಕೆ  

ಜನರಿಗೆ - ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ ಎಂದು ಹೇಳಿ ಒಂದು ಸಾಮ್ಯವನ್ನು ಹೇಳಿದನು;


ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು; ಇದು ಸೇನಾಧೀಶ್ವರ ಯೆಹೋವನ ನುಡಿ; ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು, ಇದು ಸೇನಾಧೀಶ್ವರ ಯೆಹೋವನ ನುಡಿ.


ಅಲ್ಲಿ ಸಿಂಹವು ತನ್ನ ಮರಿಗಳಿಗಾಗಿ ಬೇಕಾದಷ್ಟು ಬೇಟೆಯನ್ನು ಸೀಳುತ್ತಿತ್ತು, ತನ್ನ ಸಿಂಹಿಗಳಿಗಾಗಿ ಮೃಗಗಳ ಕುತ್ತಿಗೆಯನ್ನು ಹಿಸುಕುತ್ತಿತ್ತು; ತನ್ನ ಗವಿಗಳನ್ನು ಬೇಟೆಯಿಂದಲೂ ತನ್ನ ಹಕ್ಕೆಗಳನ್ನು ಕೊಂದ ಮೃಗಗಳಿಂದಲೂ ತುಂಬಿಸಿತು.


ಸೂರೆಮಾಡುವವರೆಲ್ಲರ ದಾರಿಯೂ ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು.


ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ ನಾವೂ ಇವರನ್ನು ಜೀವದೊಡನೆ ನುಂಗಿಬಿಡುವ.


ನಮ್ಮ ಸಂಗಡ ಪಾಲುಗಾರನಾಗು; ನಮ್ಮೆಲ್ಲರಿಗೂ ಹುದುವಾದ ಒಂದೇ ಹಮ್ಮಿಣಿ ಇರುವದು ಎಂದು ಹೇಳಿದರೆ


ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವದಕ್ಕಿಂತಲೂ ದೀನರ ಸಂಗಡ ದೈನ್ಯದಿಂದಿರುವದು ವಾಸಿ.


ಅಷ್ಡೋದಿನ ಅರಮನೆಗಳಲ್ಲಿಯೂ ಐಗುಪ್ತದೇಶದ ಸೌಧಗಳಲ್ಲಿಯೂ ಹೀಗೆ ಪ್ರಕಟಿಸಿರಿ - ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ, ಪಟ್ಟಣದೊಳಗೆ ಎಷ್ಟೆಷ್ಟೋ ಗದ್ದಲಗಳೂ ಹಿಂಸೆಗಳೂ ನಡೆಯುತ್ತವೆ ನೋಡಿರಿ.


ತಮ್ಮ ಉಪ್ಪರಿಗೆಗಳಲ್ಲಿ ಬಾಧೆಕೊಳ್ಳೆಗಳಿಂದ ಸಂಪಾದಿಸಿದ್ದನ್ನು ಕೂಡಿಸಿಟ್ಟುಕೊಂಡಿರುವವರು ನ್ಯಾಯವಾಗಿ ನಡೆಯಲು ಅರಿಯರು; ಇದು ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು