Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 10:2 - ಕನ್ನಡ ಸತ್ಯವೇದವು J.V. (BSI)

2 ವಿಗ್ರಹಗಳು ನುಡಿಯುವದು ಜೊಳ್ಳು; ಕಣಿಯವರು ಕಾಣುವದು ಸುಳ್ಳು, ತಿಳಿಸುವ ಕನಸುಗಳು ಕಲ್ಪಿತ, ಹೇಳುವ ಸಮಾಧಾನವು ವ್ಯರ್ಥ, ಆದದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ವಿಗ್ರಹಗಳು ನುಡಿಯುವುದು ಸುಳ್ಳು; ಕಣಿಹೇಳುವವರು ದರ್ಶನವನ್ನು ಕಾಣುವುದು ಸುಳ್ಳು, ತಿಳಿಸುವ ಕನಸುಗಳು ಮೋಸವಾದವುಗಳು, ಹೇಳುವ ಸಮಾಧಾನವು ವ್ಯರ್ಥ. ಆದುದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಗೃಹದೇವತೆಗಳು ನುಡಿಯುವುದು ಜೊಳ್ಳು; ಶಕುನ ಹೇಳುವವರ ಮಾತು ಸುಳ್ಳು. ಸ್ವಪ್ನಕಾರರ ಕನಸುಗಳು ಕಲ್ಪಿತ, ಅವರು ಹೇಳುವ ಸಮಾಧಾನ ವ್ಯರ್ಥ, ಈ ಕಾರಣ ಜನರು ಕುರಿಗಳಂತೆ ಚದರಿದ್ದಾರೆ; ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು. ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು. ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ. ವ್ಯರ್ಥವಾಗಿ ಆದರಿಸುತ್ತಾರೆ, ಆದ್ದರಿಂದ ಕುರಿಗಳಂತೆ ಚದರಿದ್ದಾರೆ, ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 10:2
44 ತಿಳಿವುಗಳ ಹೋಲಿಕೆ  

ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.


ಕೆತ್ತಿದ ವಿಗ್ರಹವು ಏತಕ್ಕೆ? ರೂಪಿಸಿದವನು ಅದನ್ನೇಕೆ ಕೆತ್ತಬೇಕಾಗಿತ್ತು? ಸುಳ್ಳುಕಣಿಗಾಗಿ ಇಟ್ಟುಕೊಂಡ ಎರಕದ ಬೊಂಬೆಯಿಂದ ಪ್ರಯೋಜನವೇನು? ನಿರ್ಮಿಸಿದವನು ತನ್ನ ಕೈಕೆಲಸದ ಮೂಗಬೊಂಬೆಯಲ್ಲಿ ನಂಬಿಕೆಯಿಡುವದಕ್ಕೆ ಏನಾಧಾರ?


ಇದರಂತೆ ರಾಜಮುಖಂಡ, ಯಜ್ಞ, ಸ್ತಂಭ, ಏಫೋದು, ವಿಗ್ರಹ, ಇವುಗಳಿಲ್ಲದೆ ಇಸ್ರಾಯೇಲ್ಯರು ಬಹು ದಿವಸ ತಾಳಿಕೊಂಡಿರುವರು;


ಕುರುಬರು ಇರಲಿಲ್ಲವಾದದರಿಂದ ಅವು ಚದರಿಹೋದವು; ದಿಕ್ಕಾಪಾಲಾಗಿ ಕಾಡಿನ ಸಕಲಮೃಗಗಳಿಗೆ ತುತ್ತಾದವು;


ನೀವು ಬಾಬೆಲಿನ ಅರಸನ ಅಡಿಯಾಳಾಗುವದಿಲ್ಲ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿನವರು, ಕಣಿಯವರು, ಮಾಟದವರು, ಇವರಿಗೆ ಕಿವಿಗೊಡಲೇಬಾರದು;


ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವದಕ್ಕೋಸ್ಕರ ಹೋಗಿದ್ದನು. ಹೀಗಿರುವಲ್ಲಿ ರಾಹೇಲಳು ತನ್ನ ತಂದೆಯ ಮನೆಯಲ್ಲಿದ್ದ ವಿಗ್ರಹಗಳನ್ನು ಕದ್ದುಕೊಂಡಳು.


ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು, ಕುರುಬರು ಇರಲಿಲ್ಲವಲ್ಲಾ, ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲವಲ್ಲಾ, ಅವರು ಸ್ವಂತ ಹೊಟ್ಟೆಯನ್ನು ನೋಡಿಕೊಂಡರೇ ಹೊರತು ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.


ಯಾಕೋಬೇ, ನಿನ್ನವರನ್ನೆಲ್ಲಾ ಕೂಡಿಸೇ ಕೂಡಿಸುವೆನು; ಇಸ್ರಾಯೇಲಿನ ಜನಶೇಷವನ್ನು ಸೇರಿಸೇ ಸೇರಿಸುವೆನು. ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು, ಕಾವಲ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಹಾಕುವೆನು; ಜನರು ಗಿಜಿಗುಟ್ಟುವರು.


[ಅಮ್ಮೋನೇ,] ನಿನ್ನ ಜೋಯಿಸರು ವಿುಥ್ಯೆಯನ್ನು ಸಾಕ್ಷಾತ್ಕರಿಸಿ ಸುಳ್ಳುಸುಳ್ಳಾಗಿ ಕಣಿ ಹೇಳುತ್ತಿದ್ದಾರೆ. ಸಮಯವು ಹತ್ತರಿಸಿ ಅಪರಾಧದ ಕಡೆಗಾಲವು ಸಂಭವಿಸಿ ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು! ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಒರಗಿಹೋಗುವಿ.


ಮಾರ್ಗವು ಒಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ ವಿಗ್ರಹಗಳನ್ನು ಪ್ರಶ್ನೆಕೇಳಿ ಕಾಳಿಜವನ್ನು ಪರೀಕ್ಷಿಸಿದ್ದಾನೆ.


ನಿನ್ನ ಪ್ರವಾದಿಗಳು ಕಂಡುಹೇಳಿದ ಕಣಿಗಳು ವ್ಯರ್ಥ, ನಿಸ್ಸಾರ; ಅವರು ನಿನ್ನ ದೋಷವನ್ನು ಬೈಲಿಗೆ ತಾರದಕಾರಣ ನಿನ್ನ ದುರವಸ್ಥೆಯು ನೀಗಲಿಲ್ಲ; ನಿನ್ನ ವಿಷಯವಾಗಿ ಅವರಿಗೆ ಕಂಡುಬಂದ ವ್ಯರ್ಥ ದೈವೋಕ್ತಿಗಳು ನೀನು ಗಡೀಪಾರಾಗಿ ಒಯ್ಯಲ್ಪಡುವದಕ್ಕೆ ಆಸ್ಪದವಾದವು.


ನಿನ್ನಿಂದ ಕುರುಬರನ್ನೂ ಹಿಂಡನ್ನೂ ಒಡೆದುಬಿಡುತ್ತೇನೆ; ನಿನ್ನಿಂದ ರೈತನನ್ನೂ ನೊಗದ ಎತ್ತುಗಳನ್ನೂ ಒಡೆದುಬಿಡುತ್ತೇನೆ; ನಿನ್ನಿಂದ ದೇಶಾಧಿಪತಿಗಳನ್ನೂ ನಾಡೊಡೆಯರನ್ನೂ ಒಡೆದುಬಿಡುತ್ತೇನೆ;


ಇಸ್ರಾಯೇಲು ಚದರಿಹೋದ ಹಿಂಡು; ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ; ಮೊಟ್ಟಮೊದಲು ಅಶ್ಶೂರದ ಅರಸನು ಅದನ್ನು ತಿಂದನು, ಕಟ್ಟಕಡೆಗೆ ಈಗ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.


ಬಾಬೆಲಿನ ಅರಸನು ನಿಮಗೂ ಈ ದೇಶಕ್ಕೂ ವಿರುದ್ಧವಾಗಿ ಬಾರನು ಎಂದು ನಿಮಗೆ ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?


ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡದಿರಿ;


ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ - ಹನನ್ಯನೇ, ಕೇಳು, ಯೆಹೋವನು ನಿನ್ನನ್ನು ಕಳುಹಿಸಲಿಲ್ಲ; ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತೀ.


ನನ್ನನ್ನು ಅಸಡ್ಡೆಮಾಡುವವರಿಗೆ - ನಿಮಗೆ ಶುಭವಾಗುವದು ಎಂಬದಾಗಿ ಯೆಹೋವನು ಅಂದಿದ್ದಾನೆ ಎಂದು ಹೇಳುತ್ತಲೇ ಇದ್ದಾರೆ; ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ - ನಿಮಗೆ ಯಾವ ಕೇಡೂ ಸಂಭವಿಸದು ಎಂದು ನುಡಿಯುತ್ತಾರೆ.


ಜನಾಂಗಗಳ ವ್ಯರ್ಥವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದಮಳೆಗಳನ್ನು ಕೊಟ್ಟೀತೇ? ನಮ್ಮ ದೇವರಾದ ಯೆಹೋವಾ, ನೀನೇ ವೃಷ್ಟಿಪ್ರದನು; ನಾವು ನಿನ್ನನ್ನೇ ನಿರೀಕ್ಷಿಸುವೆವು; ನೀನು ಇವುಗಳನ್ನೆಲ್ಲಾ ನಡಿಸುವವನಾಗಿದ್ದೀಯಷ್ಟೆ.


ಅದಕ್ಕೆ ನಾನು - ಅಯ್ಯೋ, ಕರ್ತನಾದ ಯೆಹೋವನೇ, ಇಗೋ ಪ್ರವಾದಿಗಳು ಈ ಜನರಿಗೆ - ಖಡ್ಗವು ನಿಮ್ಮ ಕಣ್ಣಿಗೆ ಕಾಣದು, ಕ್ಷಾಮವು ನಿಮಗೆ ಸಂಭವಿಸದು; ಯೆಹೋವನು ಈ ಸ್ಥಳದಲ್ಲಿ ಸ್ಥಿರಸಮಾಧಾನವನ್ನು ನಿಮಗೆ ಕೊಡುವನು ಎಂದು ನುಡಿಯುತ್ತಾರೆ ಎಂಬದಾಗಿ ಹೇಳಿದೆನು.


ಅವರೆಲ್ಲರೂ ಪಶುಪ್ರಾಯರು, ಮಂದರು; ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.


ಮೇಲಾಗದಿದ್ದರೂ ಮೇಲು ಮೇಲು ಎಂದು ಹೇಳಿ ನನ್ನ ಪ್ರಜೆಯೆಂಬಾಕೆಯ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.


ಮೇಲಾಗದಿದ್ದರೂ ಮೇಲು ಮೇಲು ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.


ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸೀರಿ, ಇಬ್ಬರೂ ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡೀರಿ?


ವಿಗ್ರಹ ಕೆತ್ತುವವರೆಲ್ಲಾ ಮಟ್ಟಮಾಯವೇ; ಅವರ ಇಷ್ಟದ ಬೊಂಬೆಗಳು ಯಾತಕ್ಕೂ ಬಾರವು; ಬೊಂಬೆಗಳ ಪಕ್ಷದ ಸಾಕ್ಷಿಗಾರರು ನೋಡುವವರಲ್ಲ, ಗ್ರಹಿಸುವವರಲ್ಲ; ನಾಚಿಕೆಗೆ ಗುರಿಯಾಗುವರು.


ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ! ನಿಮ್ಮ ಉತ್ತರಗಳಲ್ಲಿ ಉಳಿದಿರುವದು ವಿುತ್ರದ್ರೋಹವೇ.


ನೀವಾದರೋ ಸುಳ್ಳನ್ನು ಮೆತ್ತುವವರಾಗಿದ್ದೀರಿ, ನೀವೆಲ್ಲರೂ ವ್ಯರ್ಥವೈದ್ಯರೇ.


ಇಸ್ರಾಯೇಲ್ಯರೆಲ್ಲರೂ ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದರಿಹೋದದ್ದನ್ನು ಕಂಡೆನು; ಆಗ ಯೆಹೋವನು - ಇವರು ಒಡೆಯನಿಲ್ಲದವರಾಗಿರುತ್ತಾರೆ; ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ ಅಂದನು ಎಂಬದಾಗಿ ಉತ್ತರಕೊಟ್ಟನು.


ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ - ಈ ಗ್ರಾಮದಲ್ಲಿ ಒಂದು ಏಫೋದೂ ದೇವತಾಪ್ರತಿಮೆಗಳೂ ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬದು ನಿಮಗೆ ಗೊತ್ತುಂಟೋ?


ಆದದರಿಂದ ಅವರ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನಾಯಕನಾಗಿ ಅವರ ಮುಂದೆ ಹೊರಡುವದಕ್ಕೂ ಅವರನ್ನು ಹಿಂದಕ್ಕೆ ಕರಕೊಂಡು ಬರುವದಕ್ಕೂ ಒಬ್ಬ ಪುರುಷನನ್ನು ನೇವಿುಸಬೇಕೆಂದು ಬೇಡಿದನು.


ಆತನು ಹೊರಗೆ ಬಂದು ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶ ಮಾಡುತ್ತಿದ್ದನು.


ಆಹಾ, ಸುಳ್ಳು ಕನಸುಗಳನ್ನು ಪ್ರಕಟಿಸಿ ವಿವರಿಸಿ ತಮ್ಮ ಸುಳ್ಳು ಮಾತುಗಳಿಂದಲೂ ಕೊಚ್ಚಾಟದಿಂದಲೂ ನನ್ನ ಜನರಿಗೆ ದಾರಿತಪ್ಪಿಸುವ ಪ್ರವಾದಿಗಳನ್ನು ಎದುರಿಸುವವನಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಆಜ್ಞಾಪಿಸಲಿಲ್ಲ; ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಆಗುವದಿಲ್ಲ. ಇದು ಯೆಹೋವನ ನುಡಿ.


ಮಂದೆಯನ್ನು ಕಾಯದೆ ಬಿಟ್ಟುಬಿಟ್ಟ ತರವಲ್ಲದ ಕುರುಬನ ಗತಿಯನ್ನು ಏನುಹೇಳಲಿ! ಖಡ್ಗವು ಅವನ ತೋಳಿಗೂ ಬಲಗಣ್ಣಿಗೂ ತಾಕುವದು; ಅವನ ತೋಳು ತೀರಾ ಒಣಗಿಹೋಗುವದು, ಅವನ ಬಲಗಣ್ಣು ಪೂರಾ ಮೊಬ್ಬಾಗುವದು.


ಈ ದೇವತೆಗಳನ್ನು ಅವಲಂಬಿಸಿ ಸೇವಿಸೋಣ ಎಂದು ಬೋಧಿಸುತ್ತಾ ಆ ಬೋಧನೆಯನ್ನು ಸ್ಥಾಪಿಸುವದಕ್ಕೆ ಒಂದು ಅದ್ಭುತವನ್ನಾಗಲಿ ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಲು ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು.


ಆಹಾ, ಇವರೆಲ್ಲಾ ಮಾಯೆ, ಇವರ ಕಾರ್ಯಗಳು ಶೂನ್ಯ, ಇವರ ಎರಕದ ಬೊಂಬೆಗಳು ಗಾಳಿಯೇ, ಹಾಳೇ!


ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ ಕಣಿಹೇಳುವವರನ್ನು ಮರುಳುಗೊಳಿಸಿ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಹುಚ್ಚುತನವಾಗಮಾಡಿ


ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ; ನೀವು ನನ್ನಿಂದ ಅಟ್ಟಲ್ಪಟ್ಟು ದೇಶಭ್ರಷ್ಟರಾಗಿ ಅಳಿದುಹೋಗುವದಕ್ಕೆ ಅವರ ದುರ್ಬೋಧನೆಯು ಆಸ್ಪದವಾಗುವದು.


ನೀವು ಬಾಬೆಲಿನ ಅರಸನ ಅಡಿಯಾಳಾಗುವದಿಲ್ಲ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು