Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಚೆಫನ್ಯ 1:5 - ಕನ್ನಡ ಸತ್ಯವೇದವು J.V. (BSI)

5 ಮಾಳಿಗೆಗಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆ ಪೂಜಿಸುವವರನ್ನೂ ಯೆಹೋವನ ಭಕ್ತರೆಂದು ಪ್ರತಿಜ್ಞೆಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣವನ್ನು ಪೂಜಿಸುವವರನ್ನೂ, ಯೆಹೋವನ ಭಕ್ತರೆಂದು ಪ್ರತಿಜ್ಞೆ ಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಮಾಳಿಗೆಗಳ ಮೇಲೆ ನಿಂತು ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಆರಾಧಿಸುವವರನ್ನು ನಾಶಗೊಳಿಸುವೆನು; ಅಂತೆಯೇ ಸರ್ವೇಶ್ವರನ ಆರಾಧಕರೆಂದು ಪ್ರಮಾಣಮಾಡಿ, ಮಲ್ಕಾಮನ ಮೇಲೂ ಪ್ರಮಾಣ ಮಾಡುವವರನ್ನು ವಿನಾಶಗೊಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ತಮ್ಮ ಮಾಳಿಗೆಯ ಮೇಲೆ ಹತ್ತಿ ನಕ್ಷತ್ರಗಳನ್ನು ಆರಾಧಿಸುತ್ತಾರೋ ನಾನು ಅವರನ್ನು ನಿರ್ಮೂಲ ಮಾಡುತ್ತೇನೆ. ಜನರು ತಮ್ಮ ಸುಳ್ಳು ಪುರೋಹಿತರನ್ನು ಮರೆತುಬಿಡುವರು. ಕೆಲವರು ತಮ್ಮನ್ನು ನನ್ನ ಆರಾಧಕರೆಂದು ಹೇಳಿಕೊಳ್ಳುವರು. ಆದರೆ ಈಗ ಅವರು ಸುಳ್ಳು ದೇವರಾದ ಮಲ್ಕಾಮನನ್ನು ಆರಾಧಿಸುತ್ತಾರೆ. ಅಂಥವರನ್ನು ಅವರ ಸ್ಥಳಗಳಿಂದ ತೆಗೆದುಹಾಕುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಮಾಳಿಗೆಗಳ ಮೇಲೆ ತಲೆಬಾಗಿಸಿ ಆಕಾಶದ ನಕ್ಷತ್ರಗಣಕ್ಕೆ ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಚೆಫನ್ಯ 1:5
30 ತಿಳಿವುಗಳ ಹೋಲಿಕೆ  

ಯೆರೂಸಲೇವಿುನ ಮನೆಗಳೂ ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲಾ ಹೊಲಸಾಗಿ ತೋಫೆತೆಂಬ ಸ್ಥಳಕ್ಕೆ ಸಮಾನವಾಗುವವು.


ಯೆಹೋವನ ಭಕ್ತರಾಗಿದ್ದರೂ ತಾವು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳ ಆರಾಧನೆಯನ್ನೂ ಮಾಡುತ್ತಿದ್ದರು.


ಇದಲ್ಲದೆ ಆತನು ನಿನಗೆ - ಸೊಲೊಮೋನನೂ ಅವನ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ಕೆಮೋಷ್, ಅಮ್ಮೋನಿಯರ ದೇವತೆಯಾದ ವಿುಲ್ಕೋಮ್ ಇವುಗಳನ್ನು ಆರಾಧಿಸಿದ್ದೂ ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡಿಯದೆ ಹೋದದ್ದೂ ಇದಕ್ಕೆ ಕಾರಣ.


ಸಿಕ್ಕೂತ್, ಎಂಬ ನಿಮ್ಮ ಒಡೆಯನನ್ನು, ಕಿಯೂನ್ ಎಂಬ ನಿಮ್ಮ ನಕ್ಷತ್ರದೇವತೆಯನ್ನು, ಅಂದರೆ ನಿರ್ಮಿಸಿಕೊಂಡಿರುವ ನಿಮ್ಮ ಮೂರ್ತಿಗಳನ್ನು ನೀವು ಹೊತ್ತುಕೊಂಡು ಹೋಗಬೇಕಾಗುವದು;


ಇದಲ್ಲದೆ ಯೆಹೂದ್ಯರ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಯಜ್ಞವೇದಿಗಳನ್ನೂ ಮನಸ್ಸೆಯು ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ್ದ ಯಜ್ಞವೇದಿಗಳನ್ನೂ ಕೆಡವಿ ಪುಡಿಪುಡಿಮಾಡಿ ಅವುಗಳ ಧೂಳನ್ನು ಕಿದ್ರೋನ್‍ಹಳ್ಳದಲ್ಲಿ ಹಾಕಿಸಿದನು.


ಆ ಜನಾಂಗಗಳವರು ಯೆಹೋವ ಭಕ್ತರಾಗಿದ್ದರೂ ತಮ್ಮ ವಿಗ್ರಹಗಳನ್ನೂ ಆರಾಧಿಸುತ್ತಿದ್ದರು. ಅವರ ಸಂತಾನದವರು ಇಂದಿನವರೆಗೂ ಹಾಗೆಯೇ ಮಾಡುತ್ತಿರುತ್ತಾರೆ.


ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ - ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವದನ್ನು ಕಂಡು


ನನ್ನ ಜೀವದಾಣೆ, ಎಲ್ಲರೂ ನನಗೆ ಅಡ್ಡ ಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆ ಮಾಡುವರು ಎಂಬದಾಗಿ ಕರ್ತನು ಹೇಳಿದ್ದಾನೆ ಎಂದು ಬರೆದದೆ.


ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.


ಇಸ್ರಾಯೇಲೇ, ನೀನು ಸೂಳೆಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ; [ಯೆಹೂದ್ಯರೇ,] ಗಿಲ್ಗಾಲಿಗೆ ನೆರೆಯದಿರಿ, ಬೇತಾವೆನಿಗೆ ಯಾತ್ರೆ ಹೋಗಬೇಡಿರಿ, ಯೆಹೋವನ ಜೀವದಾಣೆ ಎಂದು ಶಪಥಮಾಡಬಾರದು.


ಮತ್ತು ಈ ಪಟ್ಟಣಕ್ಕೆ ಪ್ರತಿಭಟಿಸುವ ಕಸ್ದೀಯರು ಇದರೊಳಗೆ ನುಗ್ಗಿ ಬೆಂಕಿಯಿಕ್ಕಿ ಯಾವ ಮನೆಗಳ ಮಾಳಿಗೆಗಳಲ್ಲಿ ನನ್ನ ಜನರು ಬಾಳನಿಗೆ ಧೂಪಹಾಕಿ ಅನ್ಯದೇವತೆಗಳಿಗೆ ಪಾನವನ್ನು ನೈವೇದ್ಯವಾಗಿ ಅರ್ಪಿಸಿ ನನ್ನನ್ನು ಕೆಣಕಿದ್ದಾರೋ ಆ ಮನೆಗಳಿರುವ ಈ ಪಟ್ಟಣವನ್ನು ಸುಟ್ಟುಬಿಡುವರು.


ಯೆಹೋವನು ಹೀಗನ್ನುತ್ತಾನೆ - ನಾನು ನಿನ್ನನ್ನು ಹೇಗೆ ಕ್ಷವಿುಸಲಿ? ನಿನ್ನ ಜನರು ನನ್ನನ್ನು ವಿಸರ್ಜಿಸಿ ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ; ನಾನು ಅವರಿಗೆ ಹೊಟ್ಟೆತುಂಬಾ ಆಹಾರಕೊಟ್ಟ ಮೇಲೆ ಅವರು ಹಾದರ ಮಾಡಿದರು, ಸೂಳೆಯರ ಮನೆಗಳಲ್ಲಿ ಗುಂಪುಕೂಡಿದರು.


ಯೆಹೋವನ ಜೀವದಾಣೆ ಎಂದು ಸತ್ಯನ್ಯಾಯ ಧರ್ಮಾನುಸಾರವಾಗಿ ನೀನು ಪ್ರಮಾಣಮಾಡಿದರೆ ಜನಾಂಗಗಳು ಆತನಿಂದ ತಮ್ಮನ್ನು ಆಶೀರ್ವದಿಸಿಕೊಂಡು ಆತನಲ್ಲಿ ಹೆಚ್ಚಳಪಡುವರು.


ಇಸ್ರಾಯೇಲೆಂಬ ಹೆಸರಿನವರೂ ಯೆಹೂದವಂಶೋತ್ಪನ್ನರೂ ಆದ ಯಾಕೋಬನ ಮನೆತನದವರೇ, ನೀವು ಯೆಹೋವನ ನಾಮದ ಮೇಲೆ ಆಣೆಯಿಟ್ಟು ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ, ನಿಜ, ಆದರೆ ಈ ನಿಮ್ಮ ಕಾರ್ಯಗಳು ಸತ್ಯಕ್ಕೂ ಧರ್ಮಕ್ಕೂ ಅನುಸಾರವಾಗಿಲ್ಲ.


ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬ ನುಡಿ ನನ್ನ ಸತ್ಯದ ಬಾಯಿಂದ ಹೊರಟಿದೆ, ಅದನ್ನು ಹಿಂತೆಗೆಯೆನು, ನನ್ನ ಮೇಲೆ ಆಣೆಯಿಟ್ಟಿದ್ದೇನೆ.


[ಅನ್ಯಜನರಲ್ಲಿ] ಒಬ್ಬನು - ನಾನು ಯೆಹೋವನ ಭಕ್ತನು ಎಂದು ಹೇಳಿಕೊಳ್ಳುವನು; ಇನ್ನೊಬ್ಬನು ಯಾಕೋಬ್ಯನು ಎನಿಸಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಯೆಹೋವದಾಸನು ಎಂದು ಬರೆದುಕೊಂಡು ಇಸ್ರಾಯೇಲ್ಯನೆಂಬ ಬಿರುದನ್ನು ಧರಿಸಿಕೊಳ್ಳುವನು.


ಅವನು ಚೀದೋನ್ಯರ ಅಷ್ಟೋರೆತ್ ದೇವತೆಯನ್ನೂ ಅಮ್ಮೋನಿಯರ ವಿುಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನೂ ಆರಾಧಿಸತೊಡಗಿ


ಉಳಿದಿರುವ ಈ ಜನಾಂಗಗಳ ಜೊತೆಯಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವತೆಗಳ ಹೆಸರು ಹೇಳಿ ಆರಾಧಿಸಲೂ ಪ್ರಮಾಣಮಾಡಲೂಬಾರದು, ಅವುಗಳಿಗೆ ಅಡ್ಡಬಿದ್ದು ಸೇವಿಸಲೂಬಾರದು.


ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಆತನನ್ನೇ ಸೇವಿಸಬೇಕು; ಆತನನ್ನು ಹೊಂದಿಕೊಂಡು ಆತನ ಹೆಸರಿನ ಮೇಲೆಯೇ ಪ್ರಮಾಣ ಮಾಡಬೇಕು.


ಮರುದಿನ ಅವರು ಪ್ರಯಾಣಮಾಡಿ ಆ ಊರಿನ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಮಧ್ಯಾಹ್ನದಲ್ಲಿ ಪ್ರಾರ್ಥನೆ ಮಾಡುವದಕ್ಕಾಗಿ ಮಾಳಿಗೆಯನ್ನು ಹತ್ತಿದನು.


ಅವರು ಯೆಹೋವನ ಭಕ್ತರಾಗಿ ಕನಿಷ್ಠಜನರಲ್ಲಿ ಕೆಲವರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ನೇವಿುಸಿಕೊಂಡು ಅವರ ಮುಖಾಂತರವಾಗಿ ಪೂಜಾಸ್ಥಳದ ಗುಡಿಗಳಲ್ಲಿ ಆರಾಧನೆ ನಡಿಸುತ್ತಿದ್ದರು.


ಜನರು ಯೆಹೋವನ ಜೀವದಾಣೆ ಎಂದರೂ ಆ ಆಣೆಯು ಸುಳ್ಳೇ ಸುಳ್ಳು [ಎಂದು ಯೆಹೋವನು ಅನ್ನುತ್ತಾನೆ].


ನೀವು ಕಳವು ಕೊಲೆ ಹಾದರಗಳನ್ನು ಮಾಡಿ ಸುಳ್ಳುಸಾಕ್ಷಿ ಹೇಳಿ ಬಾಳನಿಗೆ ಹೋಮವನ್ನರ್ಪಿಸಿ ಕಂಡುಕೇಳದ ಅನ್ಯದೇವತೆಗಳನ್ನು ಹಿಂಬಾಲಿಸಿದ ಮೇಲೆ


ನನ್ನ ಹೆಸರುಗೊಂಡಿರುವ ಈ ಆಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು - ನಮಗೆ ಪರಿಹಾರವಾಯಿತು ಎಂದು ಹೇಳಿ ಈ ಎಲ್ಲಾ ಅಸಹ್ಯಕಾರ್ಯಗಳನ್ನು ಇನ್ನೂ ನಡಿಸುವದಕ್ಕೆ ಅವಕಾಶ ಮಾಡಿಕೊಳ್ಳುವಿರೋ?


ಇವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಆಶ್ರಯಿಸಿ ಪೂಜಿಸಿದ ಸೂರ್ಯಚಂದ್ರತಾರಾಗಣಗಳ ಎದುರಿಗೆ ಹರಡಿಬಿಡುವರು; ಅವುಗಳನ್ನು ಯಾರೂ ಕೂಡಿಸಿ ಹೂಣಿಡುವದಿಲ್ಲ; ಅವು ಭೂವಿುಯ ಮೇಲೆ ಗೊಬ್ಬರವಾಗುವವು.


ಇವರು ಮೊದಲು ಬಾಳನ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ನನ್ನ ಜನರಿಗೆ ಕಲಿಸಿಕೊಟ್ಟ ಪ್ರಕಾರ ಈಗ ನನ್ನ ಹೆಸರನ್ನೆತ್ತಿ ಯೆಹೋವನ ಜೀವದಾಣೆ ಎಂದು ಪ್ರಮಾಣ ಮಾಡುವ ನನ್ನ ಜನರ ಅಭ್ಯಾಸವನ್ನು ಚೆನ್ನಾಗಿ ಮಾಡಿಕೊಂಡರೆ ನನ್ನ ಜನರ ಮಧ್ಯದಲ್ಲಿ ನೆಲೆಗೊಂಡು ವೃದ್ಧಿಯಾಗುವರು.


ಅಮ್ಮೋನ್ಯರನ್ನು ಕುರಿತದ್ದು. ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲಿಗೆ ಮಕ್ಕಳಿಲ್ಲವೋ? ಬಾಧ್ಯನು ಇಲ್ಲವೋ? ಮಲ್ಕಾಮ್ ದೇವತೆಯು ಗಾದಿನ ಸೀಮೆಯನ್ನು ಸ್ವಾಧೀನಮಾಡಿಕೊಂಡಿರುವದೇಕೆ, ಮಲ್ಕಾಮನ ಪ್ರಜೆಗಳು ಗಾದಿನ ಪಟ್ಟಣಗಳಲ್ಲಿ ಏಕೆ ವಾಸಿಸುತ್ತಾರೆ?


ಇಸ್ರಾಯೇಲ್ಯರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ; ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹಸ್ತಂಭಗಳನ್ನು ಹಾಳುಮಾಡುವನು.


ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯಪಾಲಿಸಿದ ಸೂರ್ಯಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶ ಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲೂಬಾರದು ನಮಸ್ಕರಿಸಲೂಬಾರದು.


ದಿವ್ಯದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ. ನಿನಗೆ ಏನಾಯಿತು? ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದ್ದೇಕೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು