ಗಲಾತ್ಯದವರಿಗೆ 4:9 - ಕನ್ನಡ ಸತ್ಯವೇದವು J.V. (BSI)9 ಈಗಲಾದರೋ ನೀವು ದೇವರನ್ನು ತಿಳುಕೊಂಡಿದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ತಿಳುಕೊಂಡಿದ್ದಾನೆ. ಹೀಗಿರಲಾಗಿ ನೀವು ಕೆಲಸಕ್ಕೆ ಬಾರದ ದರಿದ್ರಬಾಲಬೋಧೆಗೆ ಮತ್ತೂ ಅಧೀನರಾಗಬೇಕೆಂದು ಅಪೇಕ್ಷಿಸಿ ಪುನಃ ಅದಕ್ಕೆ ತಿರುಗಿಕೊಳ್ಳುವದು ಹೇಗೆ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಈಗಲಾದರೋ ನೀವು ದೇವರನ್ನು ತಿಳಿದುಕೊಂಡಿದ್ದೀರಿ, ಅಥವಾ ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ. ಹೀಗಿರಲಾಗಿ ನೀವು ಬಲವಿಲ್ಲದ, ಕೆಲಸಕ್ಕೆ ಬಾರದ, ದರಿದ್ರವಾದ ಮೂಲತತ್ವಗಳಿಗೆ ಹಿಂತಿರುಗಿ ಅದಕ್ಕೆ ದಾಸರಾಗುವುದಕ್ಕೆ ಏಕೆ ಬಯಸುತ್ತೀರಿ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಈಗಲಾದರೋ ನಿಜದೇವರನ್ನು ಅರಿತುಕೊಂಡಿದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ, ದುರ್ಬಲ ಹಾಗೂ ದರಿದ್ರವಾದ ಮೂಲಭೂತ ಶಕ್ತಿಗಳಿಗೆ ನೀವು ಮರಳುವುದೇಕೆ? ಪುನಃ ಅವುಗಳಿಗೆ ಗುಲಾಮರಾಗಲು ಇಚ್ಛಿಸುವುದೇಕೆ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ? ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಈಗಲಾದರೋ ನೀವು ದೇವರನ್ನು ಅರಿತುಕೊಂಡಿದ್ದೀರಿ. ನಿಜವಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲಪಾಠಗಳಿಗೆ ಪುನಃ ಗುಲಾಮರಾಗಬೇಕೆಂದು ಅಪೇಕ್ಷಿಸಿ, ಅವುಗಳಿಗೆ ನೀವು ತಿರುಗಿಕೊಳ್ಳುವುದು ಹೇಗೆ? ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ಅತ್ತಾ ತರಿಬಿ ಖರ್‍ಯಾ ದೆವಾಕ್ ಕಳ್ವುನ್ ಘೆಟ್ಲ್ಯಾಶಿ, ಖರೆ ಸಾಂಗುಚೆ ಹೊಲ್ಯಾರ್ ತುಮ್ಕಾ ಕಳ್ವುನ್ ಘೆಟಲ್ಲೆ ದೆವಾನುಚ್, ಅಶೆ ರ್‍ಹಾತಾನಾ, ತುಮಿ ಅದ್ದಿಚ್ಯಾನ್ ಪಾಳುನ್ಗೆತ್ ಯೆಲ್ಲ್ಯಾ ಬಳ್ ನಸಲ್ಲ್ಯಾ ಅನಿ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾಕ್ನಿ ಕಶ್ಯಾಕ್ ಫಾಟಿ ಪರ್ತುನ್ ಜಾವ್ಚೆ? ತೆಂಕಾ ಅನಿಪರ್ತುನ್ ಗುಲಾಮ್ ಹೊವ್ಚೆ ಮನುನ್ ಕರ್ಲ್ಯಾಸಿ ಕಾಯ್? ಅಧ್ಯಾಯವನ್ನು ನೋಡಿ |
ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.