ಗಲಾತ್ಯದವರಿಗೆ 3:16 - ಕನ್ನಡ ಸತ್ಯವೇದವು J.V. (BSI)16 ಒಳ್ಳೇದು, ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು. ಆತನು ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬನು ಕ್ರಿಸ್ತನೇ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಹಾಗೆಯೇ, ದೇವರು ಅಬ್ರಹಾಮನಿಗೆ ಮತ್ತು ಅವನಿಂದ ಬರುವ ಪೀಳಿಗೆಗೆ ವಾಗ್ದಾನ ಮಾಡಿದನು. ಆದರೆ “ಪೀಳಿಗೆ” ಎಂದು ಹೇಳಿದಾಗ, ಅದು ವಂಶದಲ್ಲಿ ಇರುವ ಎಲ್ಲರಿಗೂ ಅನ್ವಯಿಸದೇ, ಅಬ್ರಹಾಮನ ವಂಶಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನೇ ಸೂಚಿಸುತ್ತದೆ. ಆ ಒಬ್ಬನು ಕ್ರಿಸ್ತನೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಹಾಗೆಯೇ, ದೇವರು ಅಬ್ರಹಾಮನಿಗೂ ಆತನ ಸಂತತಿಗೂ ವಾಗ್ದಾನಗಳನ್ನು ಮಾಡಿದರು. "ನಿನ್ನ ಸಂತತಿಗಳಿಗೆ" ಎಂದು ಹೇಳಿ ಅನೇಕರನ್ನು ಸೂಚಿಸದೆ “ನಿನ್ನ ಸಂತತಿಗೆ” ಎಂದು ಹೇಳಿ ಒಬ್ಬ ವ್ಯಕ್ತಿಯನ್ನೇ ಆ ವಾಗ್ದಾನದಲ್ಲಿ ಸೂಚಿಸಿದರು. ಆ ವ್ಯಕ್ತಿಯೇ ಕ್ರಿಸ್ತಯೇಸು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ” ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಹಾಗೆಯೇ ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳು ಮಾಡಲಾದವು. ಅದರಲ್ಲಿ, “ನಿನ್ನ ಸಂತತಿಗಳಿಗೆ,” ಎಂದು ಹೇಳಿ ಅನೇಕರನ್ನು ಸೂಚಿಸದೆ, “ನಿನ್ನ ಸಂತತಿಗೆ,” ಎಂದು ಹೇಳಿದ ಒಬ್ಬರನ್ನೇ ಸೂಚಿಸಿದೆ. ಆ ಒಬ್ಬ ವ್ಯಕ್ತಿ ಕ್ರಿಸ್ತ ಯೇಸುವೇ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್16 ದೆವಾನ್ ಅಬ್ರಾಹಾಮಾಕ್ ಅನಿ ತೆಚ್ಯಾ ಪಿಳ್ಗಿಕ್ ಗೊಸ್ಟಿಯಾ ದಿಲ್ಯಾನ್, ಪವಿತ್ರ್ ಪುಸ್ತಕ್ ಪಿಳ್ಗಿಯಾಕ್ನಿ ಮನುನ್ ಸಾಂಗಿನಾ ತಸೆ ಮಟ್ಲ್ಯಾರ್ ಲೈ ಲೊಕಾ ಮನುನ್ ಹೊತಾ ಖರೆ ತೆ “ಪಿಳ್ಗಿಕ್” ಮನ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ಎಕ್ಲ್ಯಾಕುಚ್ ದಾಕ್ವುತಾ, ತೊ ಎಕ್ಲೊ ಕೊನ್ ಮಟ್ಲ್ಯಾರ್ ಕ್ರಿಸ್ತ್. ಅಧ್ಯಾಯವನ್ನು ನೋಡಿ |
ತಮಗೆ ದರ್ಶನಗಳಾದವೆಂದು ಕೊಚ್ಚಿಕೊಳ್ಳುತ್ತಾರೆ, ಮತ್ತು ಪ್ರಾಪಂಚಿಕ ಬುದ್ಧಿಯಿಂದ ನಿರಾಧಾರವಾಗಿ ಉಬ್ಬಿಕೊಂಡಿದ್ದಾರೆ, ಆದರೆ ಕ್ರಿಸ್ತನೆಂಬ ಶಿರಸ್ಸಿನ ಹೊಂದಿಕೆಯನ್ನು ಬಿಟ್ಟವರಾಗಿದ್ದಾರೆ. ಇಂಥವರು ನಿಮಗೆ ದೊರಕಿರುವ ಬಿರುದನ್ನು ಅಪಹರಿಸುವದಕ್ಕೆ ಅವಕಾಶಕೊಡಬೇಡಿರಿ. ಆ ಶಿರಸ್ಸಿನಿಂದಲೇ ದೇಹವೆಲ್ಲಾ ಕೀಲುನರಗಳ ಮೂಲಕ ಬೇಕಾದ ಸಹಾಯವನ್ನು ಹೊಂದಿ ಒಂದಾಗಿ ಕೂಡಿಸಲ್ಪಟ್ಟು ದೇವರು ಕೊಡುವ ವೃದ್ಧಿಯಿಂದ ಅಭಿವೃದ್ಧಿಯಾಗುತ್ತಾ ಬರುತ್ತದೆ.