ಕೊಲೊಸ್ಸೆಯವರಿಗೆ 3:12 - ಕನ್ನಡ ಸತ್ಯವೇದವು J.V. (BSI)12 ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ದೇವರು ನಿಮ್ಮನ್ನು ಆರಿಸಿಕೊಂಡಿದ್ದಾನೆ ಮತ್ತು ನಿಮ್ಮನ್ನು ತನ್ನ ಪವಿತ್ರ ಜನರನ್ನಾಗಿಸಿದ್ದಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್12 ದೆವಾನ್ ತುಮ್ಕಾ ಅಪ್ನಾಚ್ಯಾ ಸ್ವತಾಕ್ ಮನುನ್ ಎಚುನ್ ಘೆಟ್ಲಾ, ಅನಿ ತುಮ್ಕಾ ಅಪ್ಲಿ ಪವಿತ್ರ್ ಲೊಕಾ ಕರ್‍ಲಾ. ತೊ ತುಮ್ಚೊ ಪ್ರೆಮ್ ಕರ್‍ತಾ. ಅಶೆ ರಾತಾನಾ ಕಾಳ್ಜಿ, ದಯಾ, ಖಾಲ್ತಿ ಹೊವ್ನ್ ಚಲ್ತಲೆ, ಥಂಡಪಾನ್, ಸೊಸುನ್ ಘೆತಲೊ ಮನ್, ಹ್ಯಾ ಸಗ್ಳ್ಯಾ ಬರ್‍ಯಾ ಗುನಾನಿ ತುಮ್ಕಾ ತುಮಿ ಭರುನ್ ಘೆವಾ. ಅಧ್ಯಾಯವನ್ನು ನೋಡಿ |
ದೇವರ ದಾಸನೂ ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು ನಮ್ಮೆಲ್ಲರಿಗೆ ಹುದುವಾಗಿರುವ ನಂಬಿಕೆಯ ಸಂಬಂಧದಲ್ಲಿ ನನ್ನ ನಿಜಕುಮಾರನಾದ ತೀತನಿಗೆ ಬರೆಯುವದೇನಂದರೆ - ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಆಗಲಿ. ದೇವರಾದುಕೊಂಡವರ ನಂಬಿಕೆಯೂ ಭಕ್ತಿಯನ್ನುಂಟುಮಾಡುವ ಸತ್ಯದ ಪರಿಜ್ಞಾನವೂ ವೃದ್ಧಿಯಾಗುವದಕ್ಕೋಸ್ಕರವೇ ಅಪೊಸ್ತಲನಾಗಿದ್ದೇನೆ. ಆ ನಂಬಿಕೆಗೂ ಸತ್ಯದ ಪರಿಜ್ಞಾನಕ್ಕೂ ನಿತ್ಯಜೀವದ ನಿರೀಕ್ಷೆಯೇ ಆಧಾರವಾಗಿದೆ. ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನಮಾಡಿ ತನ್ನ ಕ್ಲುಪ್ತ ಸಮಯದಲ್ಲಿ ವಾಗ್ದಾನ ನೆರವೇರಿಸಿ ಪ್ರಸಂಗದ ಮೂಲಕ ಪ್ರಕಟಿಸಿದನು. ಆ ಪ್ರಸಂಗೋದ್ಯೋಗವು ನಮ್ಮ ರಕ್ಷಕನಾದ ದೇವರ ಅಪ್ಪಣೆಯ ಪ್ರಕಾರ ನನಗೆ ಒಪ್ಪಿಸಲ್ಪಟ್ಟದೆ.
ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದೆಯೂ ಇದ್ದಾಗ - ಹಿರಿಯನು ಕಿರಿಯನಿಗೆ ಸೇವೆ ಮಾಡುವನೆಂಬದಾಗಿ ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಸ್ಥಿರವಾಗಿರಬೇಕೆಂದು ತೋರಿಸಿದನು. ಆ ಸಂಕಲ್ಪವು ಪುಣ್ಯಕ್ರಿಯೆಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ.