ಕೊಲೊಸ್ಸೆಯವರಿಗೆ 2:18 - ಕನ್ನಡ ಸತ್ಯವೇದವು J.V. (BSI)18 ಕೆಲವರು ಅತಿ ವಿನಯದಲ್ಲಿಯೂ ದೇವದೂತರ ಪೂಜೆಯಲ್ಲಿಯೂ ಆಸಕ್ತರಾಗಿದ್ದಾರೆ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಮಿಥ್ಯಾ ದೀನತೆಯನ್ನು ಅಪೇಕ್ಷಿಸಿ ದೇವದೂತರ ಆರಾಧನೆಯಲ್ಲಿ ಆಸಕ್ತರಾಗಿದ್ದು, ದರ್ಶನಗಳಾದವೆಂದು ಕೊಚ್ಚಿಕೊಂಡು, ಪ್ರಾಪಂಚಿಕ ಬುದ್ಧಿಯಿಂದಾಗಿ, ಕಾರಣವಿಲ್ಲದೆ ಉಬ್ಬಿಕೊಂಡು ಇರುವಂಥವರಿಗೆ ನಿಮಗೆ ದೊರಕಿರುವ ಬಿರುದನ್ನು ಅಪಹರಿಸುವುದಕ್ಕೆ ಅವಕಾಶಕೊಡಬೇಡಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ನಿಮ್ಮಲ್ಲಿ ಕೆಲವರು ದೇವದೂತರ ಆರಾಧನೆಯಲ್ಲಿ ಆಸಕ್ತರಾಗಿದ್ದಾರೆ. ಲೌಕಿಕ ಜ್ಞಾನದಿಂದ ನಿರರ್ಥಕವಾಗಿ ಉಬ್ಬಿಕೊಂಡಿದ್ದಾರೆ. ತಾವು ಬಹಳ ವಿನಯಶಾಲಿಗಳೆಂದು ಹೆಚ್ಚಳಪಡುತ್ತಾರೆ. ಇಂಥವರು ನಿಮ್ಮನ್ನು ಕಡೆಗಾಣಿಸದಂತೆ ಎಚ್ಚರದಿಂದಿರಿ. ಇವರು ಯೇಸುಕ್ರಿಸ್ತರೆಂಬ ಶಿರಸ್ಸಿನಿಂದ ಬೇರ್ಪಟ್ಟಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಕೆಲವರು ತಾವು ದರ್ಶನ ಕಂಡದ್ದರ ಬಗ್ಗೆ ಬಹಳ ಮಾತನಾಡಿ, ತಮ್ಮ ನಿರರ್ಥಕವಾದ ಪ್ರಾಪಂಚಿಕ ಬುದ್ಧಿಯಿಂದ ಉಬ್ಬಿಕೊಳ್ಳುತ್ತಾರೆ. ಇಂಥವರು ಕಪಟ ದೀನತೆಯಲ್ಲಿಯೂ ದೂತರ ಆರಾಧನೆಯಲ್ಲಿಯೂ ಆನಂದಿಸುವವರಾಗಿರುತ್ತಾರೆ. ಇವರು ನಿಮ್ಮ ಬಳಿಗೆ, ನೀವು ಪ್ರತಿಫಲಹೊಂದದೆ ಇರುವಂತೆ ಅಡ್ಡಿಮಾಡಲು ಅವಕಾಶಕೊಡಬೇಡಿರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್18 ಉಲ್ಲಿ ಲೊಕಾ ದೆವ್ ದುತಾಕ್ನಿ ಪುಜಾ ಕರ್‍ತಲೆ ಅನಿ ಲೈ ಶಾಂತ್ಪಾನಾಚೆ ಸಾರ್ಕೆ ನಾಟಕ್ ಕರುನ್ ದಾಕ್ವುತಲ್ಯಾತ್ ಬುಡುನ್ ಹಾತ್. ತಿ ಲೊಕಾ ಅಪ್ನಾಕ್ ದಿಸಲ್ಲ್ಯಾ ದರ್ಶನಾಚ್ಯಾ ವಿಶಯಾತ್ ಕನ್ನಾಬಿ ಬೊಲಿತ್ ರಾತಾನಾ “ತುಮಿ ಅಸ್ಲಿ ಕಾಮಾ ಕರ್‍ತಲ್ಯಾಸಾಟ್ನಿ ಚುಕಿದಾರ್ ಹೊಲ್ಯಾಸಿ” ಮನುನ್ ಲೊಕಾನಿ ತುಮ್ಚ್ಯಾ ವಿಶಯಾತ್ ಸಾಂಗುಕ್ ದಿವ್ನಕಾಸಿ. ತೆಂಚಿ ಜಗಾಚಿ ಯವ್ಜನ್ ತೆಂಕಾ ಕಾರನ್ ಸಾಂಗ್ತಾನಾ ಬಡಾಯಿನ್ ಫುಗಿ ಸಾರ್ಕೆ ಕರ್‍ತಾ. ಅಧ್ಯಾಯವನ್ನು ನೋಡಿ |
ಸಹೋದರರೇ, ನಾನು ನಿಮಗೋಸ್ಕರವೇ ಹಿಂದಣ ಮಾತುಗಳನ್ನು ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. ನೀವು ನಮ್ಮನ್ನು ದೃಷ್ಟಾಂತವಾಗಿ ಇಟ್ಟುಕೊಂಡು ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿ ಹೋಗಬಾರದೆಂಬದನ್ನೂ ನಿಮ್ಮಲ್ಲಿ ಯಾರೂ ಒಬ್ಬ ಬೋಧಕನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದೆಂಬದನ್ನೂ ಕಲಿತುಕೊಳ್ಳಬೇಕು.