Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 2:16 - ಕನ್ನಡ ಸತ್ಯವೇದವು J.V. (BSI)

16 ಹೀಗಿರುವದರಿಂದ ತಿಂದು ಕುಡಿಯುವ ವಿಷಯದಲ್ಲಿಯೂ ಹಬ್ಬ ಅಮವಾಸ್ಯೆ ಸಬ್ಬತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ಎಣಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಹೀಗಿರುವುದರಿಂದ, ಅನ್ನಪಾನಗಳ ವಿಷಯದಲ್ಲಿಯೂ ಅಥವಾ ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಹೀಗಿರಲಾಗಿ, ತಿಂಡಿತೀರ್ಥದ ವಿಷಯದಲ್ಲಾಗಲಿ, ಹಬ್ಬಹುಣ್ಣಿಮೆಗಳ ವಿಚಾರದಲ್ಲಾಗಲಿ, ಸಬ್ಬತ್‍ದಿನವನ್ನು ಆಚರಿಸುವ ರೀತಿಯಲ್ಲಾಗಲಿ ನಿಮ್ಮನ್ನು ದೋಷಿಗಳೆಂದು ಯಾರೂ ದೂರದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್‌ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಹೀಗಿರಲಾಗಿ, ಅನ್ನಪಾನಗಳ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತ್ ದಿನ ಮುಂತಾದವುಗಳ ವಿಷಯದಲ್ಲಿಯೂ ಯಾರೂ ನಿಮ್ಮನ್ನು ತೀರ್ಪು ಮಾಡದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

16 ಅಶೆ ರಾತಾನಾ, ಖಾತಲ್ಯಾ ಅನಿ ಫಿತಲ್ಯಾ ವಿಶಯಾತ್, ನಾತರ್ ತೆಂಚ್ಯಾ ಪದ್ದತಿಯಾಂಚಿ ಸನಾ, ಆಂವ್ಸೆಚೆ ಕಾರೆವ್, ಸಬ್ಬತಾಚಿ ದಿಸಾ, ಹ್ಯಾ ನಿಯಮಾ ಘೆವ್ನ್ ಕೊನ್ಬಿ ಝಡ್ತಿ ಕರುಚ್ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 2:16
42 ತಿಳಿವುಗಳ ಹೋಲಿಕೆ  

ತಿನ್ನದವನೇ, ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವದೇನು? ತಿನ್ನುವವನೇ, ನಿನ್ನ ಸಹೋದರನನ್ನು ನೀನು ಹೀನೈಸುವದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ.


ನೀವು ಆಯಾ ದಿನಗಳನ್ನೂ ಮಾಸಗಳನ್ನೂ ಉತ್ಸವಕಾಲಗಳನ್ನೂ ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸುತ್ತೀರಿ.


ನಾನಾವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ದೇವರ ಕೃಪೆಯನ್ನು ಆತುಕೊಂಡು ಮನಸ್ಸನ್ನು ದೃಢಮಾಡಿಕೊಳ್ಳುವದು ಉತ್ತಮವೇ; ಭೋಜನಪದಾರ್ಥಗಳನ್ನು ವಿಶೇಷಿಸುವದರಿಂದ ಅದು ಆಗುವದಿಲ್ಲ. ಭೋಜನಪದಾರ್ಥಗಳನ್ನು ವಿಶೇಷಿಸಿ ನಡೆದವರು ಏನೂ ಪ್ರಯೋಜನ ಹೊಂದಲಿಲ್ಲ.


ಉತ್ಸವಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮಪಶು, ಧಾನ್ಯನೈವೇದ್ಯ, ಪಾನನೈವೇದ್ಯ, ಇವುಗಳನ್ನು ಒದಗಿಸುವದು ಪ್ರಭುವಿನ ಕರ್ತವ್ಯ; ಇಸ್ರಾಯೇಲ್ ವಂಶದ ದೋಷನಿವಾರಣೆಗಾಗಿ ಅವನು ದೋಷಪರಿಹಾರಕಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮಪಶು, ಸಮಾಧಾನಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು.


ಆ ಹಣವು ದೇವರ ಸನ್ನಿಧಿಯಲ್ಲಿಡತಕ್ಕ ರೊಟ್ಟಿ, ನಿತ್ಯಧಾನ್ಯ ನೈವೇದ್ಯ ಇವುಗಳಿಗೋಸ್ಕರವೂ ನಿತ್ಯಸರ್ವಾಂಗಹೋಮ ಮತ್ತು ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಮಾಡತಕ್ಕ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲ್ಯರ ದೋಷಪರಿಹಾರಾರ್ಥವಾದ ಯಜ್ಞ ಇವುಗಳಿಗೋಸ್ಕರವೂ ನಮ್ಮ ದೇವಾಲಯ ಸಂಬಂಧವಾದ ಬೇರೆ ಎಲ್ಲಾ ಕೆಲಸಕ್ಕೋಸ್ಕರವೂ ವೆಚ್ಚವಾಗಬೇಕು;


ನಿಯವಿುತ ಸಂಖ್ಯೆಗೆ ಸರಿಯಾಗಿ ಸಬ್ಬತ್‍ದಿನ ಅಮಾವಾಸ್ಯೆ ಜಾತ್ರೆ ಇವುಗಳಲ್ಲಿ ಯೆಹೋವನ ಮುಂದೆ ತಪ್ಪದೆ ನಡೆಯುವ ಸರ್ವಾಂಗಹೋಮ ಸಮರ್ಪಣೆಯ ಹೊತ್ತಿನಲ್ಲಿ ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವದೂ ಇವೇ.


ಬಾಯೊಳಕ್ಕೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಬಾಯೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು ಎಂದು ಹೇಳಿದನು.


ಅನ್ನಪಾನಾದಿಗಳೂ ವಿವಿಧ ಸ್ನಾನಗಳೂ ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾದವು ಎಂಬದು.


ಸಹೋದರರೇ, ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪುಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದ ಹಾಗಾಗುವದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ.


ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ ಬಹಿರ್ದೇಶಕ್ಕೆ ಹೋಗುವದರಿಂದ ಅವನನ್ನು ಹೊಲೆಮಾಡಲಾರದೆಂದು ನಿಮಗೆ ತಿಳಿಯಲಿಲ್ಲವೋ ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ತಿನ್ನುವ ಪದಾರ್ಥಗಳೆಲ್ಲಾ ಶುದ್ಧವೆಂದು ಸೂಚಿಸಿದನು.


ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ಹಾದರವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ರಕ್ತವನ್ನೂ ವಿಸರ್ಜಿಸಬೇಕೆಂದು ನಾವು ಅವರಿಗೆ ಕಾಗದವನ್ನು ಬರೆದು ಅಪ್ಪಣೆಕೊಡೋಣ.


ಅದಕ್ಕೆ ನಾನು - ಅಯ್ಯೋ, ಕರ್ತನಾದ ಯೆಹೋವನೇ, ನಾನು ಹೊಲಸನ್ನು ಮುಟ್ಟಿದವನಲ್ಲ. ನಾನು ಹುಟ್ಟಿದಂದಿನಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ ಕಾಡುಮೃಗವು ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ; ಯಾವ ಅಸಹ್ಯಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ ಎಂದು ಅರಿಕೆಮಾಡಲು


ವ್ಯರ್ಥನೈವೇದ್ಯವನ್ನು ಇನ್ನು ತಾರದಿರಿ, ಧೂಪವು ನನಗೆ ಅಸಹ್ಯ; ಅಮಾವಾಸ್ಯೆ, ಸಬ್ಬತ್‍ದಿನ, ಕೂಟಪ್ರಕಟನೆ, ಇವು ಬೇಡ; ಅಧರ್ಮದಿಂದ ಕೂಡಿದ ಸಂಘವನ್ನು ನಾನು ಸಹಿಸಲಾರೆನು.


ಅಮಾವಾಸ್ಯೆಯಲ್ಲಿಯೂ ನಮ್ಮ ಉತ್ಸವದಿನವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.


ನಾನು ಭಜನೋತ್ಸವದಲ್ಲಿ ಸೇರಿ ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ ಸ್ತೋತ್ರಪದಗಳನ್ನು ಹಾಡುತ್ತಾ ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.


ದೇಶನಿವಾಸಿಗಳು ಮಾರುವದಕ್ಕೋಸ್ಕರ ತರುವ ಯಾವ ಸರಕುಗಳನ್ನೂ ಧಾನ್ಯವನ್ನೂ ಸಬ್ಬತ್ ಮೊದಲಾದ ಪರಿಶುದ್ಧ ದಿನಗಳಲ್ಲಿ ಕೊಂಡುಕೊಳ್ಳುವದಿಲ್ಲ; ಪ್ರತಿಯೊಂದು ಏಳನೆಯ ವರುಷ [ಭೂವಿುಯ ಸಾಗುವಳಿಯನ್ನೂ ] ಹೆರರು ಕೊಡಬೇಕಾದ ಸಾಲವನ್ನೂ ಬಿಟ್ಟು ಬಿಡುತ್ತೇವೆ;


ಜನರೆಲ್ಲರೂ ಧರ್ಮೋಪದೇಶವಾಕ್ಯಗಳನ್ನು ಕೇಳುತ್ತಾ ಅಳುತ್ತಿದ್ದದರಿಂದ ದೇಶಾಧಿಪತಿಯಾದ ನೆಹೆಮೀಯನೂ ಧರ್ಮೋಪದೇಶಮಾಡುವ ಯಾಜಕನಾದ ಎಜ್ರನೂ ಜನರನ್ನು ಬೋಧಿಸುತ್ತಿದ್ದ ಲೇವಿಯರೂ ಅವರಿಗೆ - ಈ ದಿನವು ನಿಮ್ಮ ದೇವರಾದ ಯೆಹೋವನಿಗೆ ಪರಿಶುದ್ಧದಿನವಾಗಿರುವದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿರಿ ಎಂದು ಹೇಳಿದರು.


ಅದಕ್ಕೆ ಅವನು - ಇಂದು ಅಮಾವಾಸ್ಯೆಯಲ್ಲ, ಸಬ್ಬತ್ತಲ್ಲ, ಈಹೊತ್ತು ಯಾಕೆ ಹೋಗುತ್ತೀ ಅಂದನು.


ಯೋನಾತಾನನು ದಾವೀದನಿಗೆ - ನಾಳೆ ಶುದ್ಧಪಾಡ್ಯವು; ನಿನ್ನ ಸ್ಥಳವು ಬರಿದಾಗಿರುವದನ್ನು ಅರಸನು ಕಂಡು ನಿನ್ನ ವಿಷಯವಾಗಿ ವಿಚಾರಿಸುವನು.


ಅದಕ್ಕೆ ದಾವೀದನು - ನಾಳೆ ಶುದ್ಧ ಪಾಡ್ಯವು; ನಾನು ಅರಸನ ಪಂಕ್ತಿಯಲ್ಲಿ ಕೂತು ಊಟಮಾಡಬೇಕಾಗಿರುವದು. ನೀನು ಅಪ್ಪಣೆಕೊಟ್ಟರೆ ನಾನು ಈಗಲೇ ಹೋಗಿ ಮೂರನೆಯ ದಿನ ಸಾಯಂಕಾಲದವರೆಗೆ ಹೊಲದಲ್ಲಿ ಅಡಗಿಕೊಂಡಿರುವೆನು.


ಇದು ನಿಮಗೆ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸವಾಗಿರಬೇಕು; ಇದೇ ನಿಮಗೆ ಶಾಶ್ವತ ನಿಯಮ.


ಬಡವನನ್ನು ಬೆಳ್ಳಿಗೆ, ದಿಕ್ಕಿಲ್ಲದವನನ್ನು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನು ಮಾರೋಣ ಎಂದುಕೊಂಡು


ಇದಲ್ಲದೆ ನೀವು ಉತ್ಸವ ಕಾಲಗಳಲ್ಲಿಯೂ ಹಬ್ಬಗಳಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸರ್ವಾಂಗಹೋಮಗಳನ್ನೂ ಸಮಾಧಾನ ಯಜ್ಞಗಳನ್ನೂ ಸಮರ್ಪಿಸುವಾಗ ಆ ತುತೂರಿಗಳನ್ನು ಊದಿಸಬೇಕು. ಆ ಧ್ವನಿ ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವದು; ನಾನು ನಿಮ್ಮ ದೇವರಾದ ಯೆಹೋವನು.


ಇದಲ್ಲದೆ ಅವನು ಯೆಹೋವನ ಧರ್ಮಶಾಸ್ತ್ರವಿಧಿಗನುಸಾರವಾಗಿ ಪ್ರಾತಃಕಾಲ ಸಾಯಂಕಾಲ ಸಬ್ಬತ್‍ದಿನ ಅಮಾವಾಸ್ಯೆ ಜಾತ್ರೆ ಇವುಗಳಲ್ಲಿ ಸಮರ್ಪಣೆಯಾಗತಕ್ಕ ಸರ್ವಾಂಗಹೋಮಗಳಿಗೋಸ್ಕರ ಆಗಬೇಕಾದದ್ದೆಲ್ಲಾ ತನ್ನ ಆಸ್ತಿಯಿಂದ ಸಲ್ಲಿಸಬೇಕೆಂತಲೂ


ಪ್ರಾಪಂಚಿಕ ಬಾಲಬೋಧೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದ ಮೇಲೆ ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯ ಕಲ್ಪಿತ ಆಜ್ಞೆಗಳನ್ನೂ ಉಪದೇಶಗಳನ್ನೂ ಅನುಸರಿಸಿ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು