ಕೊಲೊಸ್ಸೆಯವರಿಗೆ 1:24 - ಕನ್ನಡ ಸತ್ಯವೇದವು J.V. (BSI)24 ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು. ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ಸಂತೋಷಪಟ್ಟು ಕ್ರಿಸ್ತನ ಸಂಕಟಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸುತ್ತೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ನಾನು ನಿಮಗಾಗಿ ಅನುಭವಿಸಿದ ಬಾಧೆಗಳಿಂದ ನನಗೆ ಸಂತೋಷವಾಗಿದೆ. ಕ್ರಿಸ್ತನು ಸಭೆಯೆಂಬ ತನ್ನ ದೇಹದ ಮೂಲಕ ಇನ್ನೂ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಈ ಸಂಕಟಗಳಲ್ಲಿ ನಾನು ಅನುಭವಿಸಬೇಕಾದವುಗಳನ್ನು ಆತನ ದೇಹಕ್ಕೋಸ್ಕರ ನನ್ನ ದೇಹದಲ್ಲಿ ಅನುಭವಿಸುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಈಗ ನಾನು ನಿಮಗೋಸ್ಕರ ಸಹಿಸುತ್ತಿರುವ ಬಾಧೆಗಳಲ್ಲಿ ಆನಂದಿಸುತ್ತೇನೆ. ಕ್ರಿಸ್ತ ಯೇಸುವಿನ ಸಂಕಟಗಳೊಳಗೆ ಇನ್ನೂ ಕೊರತೆಯಾಗಿರುವುದನ್ನು ಅವರ ದೇಹವಾಗಿರುವ ಸಭೆಗಾಗಿ ನನ್ನ ದೇಹದಲ್ಲಿ ತೀರಿಸುತ್ತೇನೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್24 ಮಿಯಾ ತುಮ್ಚ್ಯಾಸಾಟ್ನಿ ಸೊಸುನ್ ಘೆಟಲ್ಲ್ಯಾ ತರಾಸಾನಿ ಮಾಕಾ ಖುಶಿ ಹೊಲಾ, ಕ್ರಿಸ್ತ್ ತಾಂಡೊ ಮನ್ತಲ್ಯಾ ಅಪ್ಲ್ಯಾ ಆಂಗಾ ವೈನಾ ಅನಿ ಲೈ ತರಾಸಾ ಸೊಸುನ್ ಘೆವ್ನಗೆತುಚ್ ರ್‍ಹಾತಾ. ಹ್ಯಾ ತರಾಸಾತ್ನಿ ಮಿಯಾ ಸೊಸುನ್ ಘೆವ್ಚೆ ಹೊಲ್ಲೆ ಸಗ್ಳೆ, ತೆಚ್ಯಾ ಆಂಗಾ ಮಟ್ಲ್ಯಾರ್ ತಾಂಡ್ಯಾಸಾಟ್ನಿ ಸೊಸುನ್ ಘೆವ್ಲಾ. ಅಧ್ಯಾಯವನ್ನು ನೋಡಿ |