Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 71:10 - ಕನ್ನಡ ಸತ್ಯವೇದವು J.V. (BSI)

10 ನನ್ನ ಜೀವಕ್ಕೆ ಹೊಂಚುಹಾಕುವ ವೈರಿಗಳು ಒಟ್ಟಾಗಿ ಆಲೋಚಿಸುತ್ತಾ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನನ್ನ ಜೀವಕ್ಕೆ ಹೊಂಚುಹಾಕುವ ವೈರಿಗಳು ಒಟ್ಟಾಗಿ ಆಲೋಚಿಸುತ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನನಗೆದುರಾಗಿ ಶತ್ರುಗಳಾಲೋಚಿಸುತಿಹರಯ್ಯಾ I ನನ್ನ ಕೊಲೆಗಾಗಿ ಒಂದುಗೂಡಿ ಹೊಂಚಿಸುತಿಹರಯ್ಯಾ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನನ್ನ ಶತ್ರುಗಳು ಒಟ್ಟುಗೂಡಿ ನನ್ನನ್ನು ಕೊಲ್ಲಲು ಆಲೋಚಿಸಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಒಳಸಂಚು ಮಾಡುವವರು ಕೂಡಿಕೊಂಡು ದುರಾಲೋಚನೆ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 71:10
13 ತಿಳಿವುಗಳ ಹೋಲಿಕೆ  

ಇವನ ಮೇಲೆ ದೂರು ಹೇಳಿರಿ, ನಾವೂ ಹೇಳುವೆವು ಎಂದು ಬಹುಜನರು ಗುಸುಗುಟ್ಟುವದನ್ನು ಕೇಳಿದ್ದೇನೆ, ಸುತ್ತುಮುತ್ತಲೂ ದಿಗಿಲು; ನನ್ನ ಆಪ್ತಸ್ನೇಹಿತರೆಲ್ಲರೂ ಇವನು ಎಡವಿಬೀಳಲಿ ಎಂದು ನನ್ನನ್ನು ಹೊಂಚಿನೋಡುತ್ತಾ - ಒಂದು ವೇಳೆ ಸಿಕ್ಕಿಬಿದ್ದಾನು, ಇವನನ್ನು ಗೆದ್ದು ಮುಯ್ಯಿತೀರಿಸಿಕೊಳ್ಳುವೆವು ಎಂದು ತಮ್ಮತಮ್ಮೊಳಗೆ ಅಂದುಕೊಳ್ಳುತ್ತಿದ್ದಾರೆ.


ಅವರು ನಿನ್ನ ಪ್ರಜೆಗಳಿಗೆ ವಿರೋಧವಾಗಿ ಒಳಸಂಚು ಮಾಡಿ ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ -


ಅವರು ಒಟ್ಟುಗೂಡಿ ನನ್ನ ಜೀವ ತೆಗೆಯಬೇಕೆಂದು ಹೊಂಚುಹಾಕಿ ನನ್ನ ಹೆಜ್ಜೆ ಹಿಡಿದು ಬರುತ್ತಾರೆ.


ಅನೇಕರು ನನ್ನ ಪ್ರಾಣ ತೆಗೆಯಬೇಕೆಂದು ಒಳಸಂಚು ಮಾಡುತ್ತಿದ್ದಾರೆ; ಅವರು ಪಿಸುಗುಟ್ಟುವ ಮಾತುಗಳು ನನ್ನ ಕಿವಿಗೆ ಬಿದ್ದವೆ; ಎಲ್ಲಾ ಕಡೆಯಲ್ಲಿಯೂ ನನಗೆ ಭೀತಿಯುಂಟಾಗಿದೆ.


ಬೆಳಗಾಗಲು ಎಲ್ಲಾ ಮಹಾಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸಬೇಕೆಂದು ಆಲೋಚನೆ ಮಾಡಿಕೊಂಡು


ಅವರು - ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವದಕ್ಕೆ ಕಾದಿರೋಣ,


ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು. ಅವನು ಬಲೆಯೊಡ್ಡಿ ಕಾದಿದ್ದು ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.


ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತಿದ್ದಾರೆ, ಅಧಿಕಾರಿಗಳು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ.


ಸೌಲನು ಕೂಡಲೆ ದೂತರನ್ನು ಕರಿಸಿ - ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕೆಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ - ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ನಾಳೆ ಬೆಳಿಗ್ಗೆ ಹತನಾಗುವಿ ಎಂದು ಹೇಳಿ


ನನ್ನನ್ನು ಎದುರಿಸಿ ಕೀಳುಮಾತಾಡುವವರಿಗೆ ಯೆಹೋವನಿಂದ ಬರುವ ಪ್ರತಿಫಲ ಇದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು