Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 54:4 - ಕನ್ನಡ ಸತ್ಯವೇದವು J.V. (BSI)

4 ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ ನನ್ನ ಪ್ರಾಣವನ್ನು ಕಾಪಾಡುವವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ ನನ್ನ ಪ್ರಾಣವನ್ನು ಕಾಪಾಡುವವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನನಗಿದೋ ದೇವನೆ ಸಹಾಯಕನು I ಆತನೆನಗೆ ಜೀವಪೋಷಕನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಇಗೋ, ನನ್ನ ದೇವರೇ ನನಗೆ ಸಹಾಯಮಾಡುವನು. ನನ್ನ ಒಡಯನೇ ನನಗೆ ಆಧಾರ ನೀಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಿಜವಾಗಿಯೂ ದೇವರು ನನ್ನ ಸಹಾಯಕರು. ಯೆಹೋವ ದೇವರು ನನ್ನ ಪ್ರಾಣವನ್ನು ಕಾಪಾಡುವವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 54:4
10 ತಿಳಿವುಗಳ ಹೋಲಿಕೆ  

ಆದದರಿಂದ - ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು. ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ;


ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.


[ವೈರಿಯೇ,] ನನ್ನನ್ನು ಬೀಳ ನೂಕಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು.


ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?


ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ; ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ; ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರ ಪಡಿಸುವನು.


ಆಗ ಮೂವತ್ತು ಮಂದಿಯಲ್ಲಿ ಮುಖ್ಯಸ್ಥನಾದ ಅಮಾಸೈಯು ಆತ್ಮಾವೇಶವುಳ್ಳವನಾಗಿ - ದಾವೀದನೇ, ನಾವು ನಿನ್ನವರು; ಶುಭವಾಗಲಿ! ಇಷಯನ ಮಗನೇ, ನಾವು ನಿನ್ನ ಪಕ್ಷದವರು; ಶುಭವಾಗಲಿ! ನಿನಗೂ ನಿನ್ನ ಸಹಾಯಕರಿಗೂ ಶುಭವಾಗಲಿ! ನಿನ್ನ ದೇವರು ನಿನಗೆ ಜಯಪ್ರಧನಾಗಿದ್ದಾನೆ ಎಂದು ನುಡಿದನು. ಆಗ ದಾವೀದನು ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡು ಸೈನ್ಯಾಧಿಪತಿಗಳನ್ನಾಗಿ ನೇವಿುಸಿದನು.


ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿ ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ.


ಯೆಹೋವನೇ, ನ್ಯಾಯವಾದದ್ದನ್ನು ಆಲೈಸು; ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು, ಅದು ಕಪಟವಾದ ಬಾಯಿಂದ ಬಂದದ್ದಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು