Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 35:19 - ಕನ್ನಡ ಸತ್ಯವೇದವು J.V. (BSI)

19 ನಿರ್ನಿವಿುತ್ತ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವದಕ್ಕೆ ಅವಕಾಶಕೊಡಬೇಡ; ನಿಷ್ಕಾರಣವೈರಿಗಳ ಕಣ್ಣುಸನ್ನೆಗೆ ಆಸ್ಪದ ಕೊಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವಶ್ಯವಿಲ್ಲದ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಅವಕಾಶಕೊಡಬೇಡ; ನಿಷ್ಕಾರಣ ವೈರಿಗಳ ಕಣ್ಣುಸನ್ನೆಗೆ ಆಸ್ಪದಕೊಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಕಳ್ಳ ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ I ಈ ಕಾರಣ ಶತ್ರುಗಳು ಕಣ್ಣು ಮಿಟುಕಿಸುವುದು ಬೇಡ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಸುಳ್ಳುಗಾರರಾದ ನನ್ನ ವೈರಿಗಳು ಇನ್ನು ಮೇಲೆ ಹಿಗ್ಗಲಾರರು. ನನ್ನ ವೈರಿಗಳು ತಮ್ಮ ಒಳಸಂಚುಗಳಿಗೆ ಖಂಡಿತವಾಗಿ ದಂಡಿಸಲ್ಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಿಷ್ಕಾರಣವಾಗಿರುವ ನನ್ನ ಶತ್ರುಗಳು ನನ್ನ ಮೇಲೆ ಸುಳ್ಳಾಗಿ ಸಂತೋಷಪಡದೆ ಇರಲಿ; ನನ್ನನ್ನು ಕಾರಣವಿಲ್ಲದೆ ದ್ವೇಷಿಸುವವರು ಕಣ್ಣು ಸನ್ನೆ ಮಾಡದೆ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 35:19
19 ತಿಳಿವುಗಳ ಹೋಲಿಕೆ  

ನಿಷ್ಕಾರಣದ್ವೇಷಿಗಳು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ; ನಿರ್ನಿವಿುತ್ತವಾಗಿ ನನ್ನನ್ನು ಮುಗಿಸಿಬಿಡಬೇಕೆಂದಿರುವ ವೈರಿಗಳು ಬಲಿಷ್ಠರಾಗಿದ್ದಾರೆ. ನಾನು ಅಪಹರಿಸದಿದ್ದರೂ ನನ್ನಿಂದ ದಂಡತೆಗೆದುಕೊಂಡರಲ್ಲಾ.


ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.


ಕಣ್ಣನ್ನು ವಿುಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, ಬೆರಳ ಸನ್ನೆಮಾಡುತ್ತಾನೆ.


ನನ್ನ ಶತ್ರುಗಳು ಚುರುಕಾದವರೂ ಬಲಿಷ್ಠರೂ ಆಗಿದ್ದಾರೆ; ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹುಮಂದಿ.


ನನ್ನ ಶತ್ರುವು - ಅವನನ್ನು ಜಯಿಸಿದೆನೆಂದು ಹೇಳಿಕೊಳ್ಳಬಾರದು; ವೈರಿಗಳು ಜಾರಿಬಿದ್ದನೆಂದು ಹಿಗ್ಗಬಾರದು.


ಕಣ್ಣುವಿುಟಕಿಸುವವನು ಕಷ್ಟಕರನು; ಧೈರ್ಯದಿಂದ ಗದರಿಸುವವನು ಸಮಾಧಾನಕರನು.


ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗುವರಲ್ಲಾ ಅಂದುಕೊಂಡೆನು.


ನಿಷ್ಕಾರಣವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.


ಪ್ರಭುಗಳು ನಿಷ್ಕಾರಣವಾಗಿ ನನ್ನನ್ನು ಹಿಂಸಿಸುತ್ತಾರೆ; ನನ್ನ ಹೃದಯವು ನಿನ್ನ ವಾಕ್ಯಕ್ಕೆ ಮಾತ್ರ ಭಯಪಡುತ್ತದೆ.


ಅವರು ಹಗೆನುಡಿಗಳಿಂದ ನನ್ನನ್ನು ಮುತ್ತಿಕೊಂಡು ನಿಷ್ಕಾರಣವಾಗಿ ನನ್ನ ಸಂಗಡ ಯುದ್ಧಮಾಡಿದ್ದಾರೆ.


ಆದರೂ ನನಗೆ ಆಪತ್ತು ಬಂದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಅಕಾರಣವಾಗಿ ಈ ಭ್ರಷ್ಟರು ನನಗೆ ವಿರೋಧವಾಗಿ ಕೂಡಿಕೊಂಡು ಸೂರೆಮಾಡುವದನ್ನು ಬಿಡಲೇ ಇಲ್ಲ.


ನನಗೆ ಆಶಾಭಂಗಪಡಿಸಬೇಡ. ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ.


ನಿನ್ನ ಹೃದಯವು ಏಕೆ ನಿನ್ನನ್ನು ಸೆಳೆದುಕೊಂಡು ಹೋಗುವದು? ನಿನ್ನ ಕಣ್ಣುಗಳು ಕಿಡಿಕಿಡಿಯಾಗುವದೇಕೆ? ನೀನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು


ನನಗೆ ಆಪತ್ತೇ ಸಿದ್ಧವಾಗಿದೆ; ಯಾವಾಗಲೂ ನನಗೆ ಸಂಕಟವದೆ.


ಉಪಕಾರಕ್ಕೆ ಪ್ರತಿಯಾಗಿ ಅಪಕಾರ ಸಲ್ಲಿಸುವವರು ಒಳ್ಳೆಯದನ್ನು ಅನುಸರಿಸುವ ನನ್ನನ್ನು ಎದುರಿಸುತ್ತಾರೆ.


ದೇವರೇ, ನನ್ನ ಮೂರ್ಖತನವು ನಿನಗೆ ಗೊತ್ತು; ನನ್ನ ಅಪರಾಧಗಳು ನಿನಗೆ ಮರೆಯಾಗಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು